Asianet Suvarna News Asianet Suvarna News

ಕಿರುತೆರೆ ನಟ, ರಂಗಭೂಮಿ ಕಲಾವಿದ ಪ್ರದೀಪ್ ಹೃದಯಾಘಾತದಿಂದ ನಿಧನ!

ಕಳೆದ 10 ದಿನಗಳ ಹಿಂದೆ ಹೃದಯ ಸಂಬಂಧಿ ಚಿಕಿತ್ಸೆಗೆ ಒಳಗಾಗಿದ್ದ ಪ್ರದೀಪ್ (ಸುಬ್ಬರಾಮು) ಅವರು ಭಾನುವಾರ ಸಂಜೆ ಮತ್ತೆ ಹೃದಯಾಘಾತಕ್ಕೆ ಒಳಗಾಗಿ ನಿಧನ ಹೊಂದಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ.

television actor theate artist pradeep 73 passed away due to heart attack gvd
Author
First Published Apr 14, 2024, 10:31 PM IST

ಬೆಂಗಳೂರು (ಏ.14): ಕಿರುತೆರೆ ನಟ, ರಂಗಭೂಮಿ ಕಲಾವಿದ ಪ್ರದೀಪ್ (73) ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ 10 ದಿನಗಳ ಹಿಂದೆ ಹೃದಯ ಸಂಬಂಧಿ ಚಿಕಿತ್ಸೆಗೆ ಒಳಗಾಗಿದ್ದ ಪ್ರದೀಪ್ (ಸುಬ್ಬರಾಮು) ಅವರು ಭಾನುವಾರ ಸಂಜೆ ಮತ್ತೆ ಹೃದಯಾಘಾತಕ್ಕೆ ಒಳಗಾಗಿ ನಿಧನ ಹೊಂದಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ. ನಾಳೆ ಅಂತ್ಯಕ್ರಿಯೆ ನಡೆಯಲಿದೆ. 

ರಂಗಭೂಮಿ ಮತ್ತು ಕಿರುತೆರೆ ನಟಿಯಾಗಿರುವ ಪತ್ನಿ ಕಲ್ಯಾಣಿ ಹಾಗೂ ಈರ್ವರು ಪುತ್ರಿಯರನ್ನು ಅವರು ಅಗಲಿದ್ದಾರೆ. ಬೆಂಗಳೂರಿನ ಹಲವು ರಂಗತಂಡಗಳಲ್ಲಿ ಕಳೆದ ನಾಲ್ಕು ದಶಕಗಳಿಂದ ತೊಡಗಿಸಿಕೊಂಡಿದ್ದ ಪ್ರದೀಪ್ ಅವರು ತಮ್ಮ ಅದ್ಭುತ ನಟನೆಯಿಂದ ರಂಗಾಸಕ್ತರ ಗಮನ ಸೆಳೆದಿದ್ದರು. 

ಜಿಮ್​ನಲ್ಲಿ ಬೆವರು ಹರಿಸಿದ ನಟಿ ಮೇಘಾ ಶೆಟ್ಟಿ: ನಿಮ್ಮನ್ನ ನೋಡ್ತಿದ್ರೆ ಒಂಥರಾ ಕಿಕ್ ಎಂದ ಫ್ಯಾನ್ಸ್‌!

ರಂಗಭೂಮಿಯ ಬೇಡಿಕೆ ಕಡಿಮೆಯಾದ ನಂತರ ಕಿರುತೆರೆಯಲ್ಲಿ ಪ್ರಸಾರವಾಗುವ ಹಲವು ಧಾರಾವಾಹಿಗಳಲ್ಲಿ ಅವರು ಅಭಿನಯಿಸುತ್ತಿದ್ದರು. ಸಾಕ್ರೆಟೀಸ್, ಬಂಜೆತೊಟ್ಟಿಲು, ಸಾಯಿನಮನ ಇತ್ಯಾದಿ ನಾಟಕಗಳು ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿದ್ದವು.

Follow Us:
Download App:
  • android
  • ios