ಚಿತ್ರದ ನಿರ್ಮಾಪಕ ಕೆ ಪಿ ಶ್ರೀಕಾಂತ್‌ ಅವರಿಗೆ ಆತ್ಮೀಯರಾಗಿರುವ ಸಂಸದ ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಕ್ಷೇತ್ರದ ಪರ್ಯಟನೆ ಸಂದರ್ಭದಲ್ಲಿ ದುನಿಯಾ ವಿಜಯ್‌ ಮನೆಗೆ ಭೇಟಿ ನೀಡಿ ಔಪಚಾರಿಕವಾಗಿ ಮಾತುಕತೆ ಮಾಡುತ್ತಾ ಸಲಗ ಚಿತ್ರ ವೀಕ್ಷಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಚಿತ್ರದ ಟೀಸರ್‌ ಹಾಗೂ ಟ್ರೇಲರ್‌ ತೋರಿಸಿದ್ದಾರೆ ದುನಿಯಾ ವಿಜಯ್‌.

"

‘ಚಿತ್ರದ ಟೀಸರ್‌, ಟ್ರೇಲರ್‌ ಹಾಗೂ ಹಾಡುಗಳನ್ನು ನೋಡಿದ ಮೇಲೆ ಚಿತ್ರದ ಬಗ್ಗೆ ತುಂಬಾ ಕುತೂಹಲ ಹುಟ್ಟಿಕೊಂಡಿದೆ. ಈ ಚಿತ್ರವನ್ನು ನಾನು ನೋಡೇ ನೋಡುತ್ತೇನೆ. ಅಲ್ಲದೆ ಇದು ವಿಜಯ್‌ ಅವರ ಮೊದಲ ನಿರ್ದೇಶನದ ಸಿನಿಮಾ ಬೇರೆ.

ಅಭಿಮಾನಿಗಳ ಕಣ್ಣೀರು ಕಂಡು ಭಾವುಕರಾದ ದುನಿಯಾ ವಿಜಯ್! 

ಅವರಿಗೆ ಈ ಚಿತ್ರದಿಂದ ಯಶಸ್ಸು ಸಿಗಬೇಕು. ಈ ಚಿತ್ರದಿಂದ ಒಳ್ಳೆಯ ಸಂದೇಶ ಸಮಾಜಕ್ಕೆ ತಲುಪಲಿ’ ಎನ್ನುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ ತೇಜಸ್ವಿ ಸೂರ್ಯ. ಸಂಜನಾ ಆನಂದ್‌ ನಾಯಕಿಯಾಗಿ ನಟಿಸಿರುವ ಈ ಚಿತ್ರವಿದು.