Asianet Suvarna News Asianet Suvarna News

'ಪುಷ್ಪ' ಚಿತ್ರದ ಪೋಸ್ಟರ್ ರಿಲೀಸ್: ರಗಡ್ ಲುಕ್‌ನಲ್ಲಿ ಮಂಗಲಮ್ ಶ್ರೀನು ಆದ ಸುನೀಲ್

ಪುಷ್ಪ ಚಿತ್ರದಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್ ಅವರೇ ವಿಲನ್ ಎಂದು ಹೇಳಲಾಗಿತ್ತು. ಆದರೆ ಸುನೀಲ್ ಲುಕ್ ನೋಡಿದ ಮೇಲೆ ಫಹಾದ್ ಜೊತೆಗೆ ಸುನೀಲ್ ಕೂಡಾ ಖಳನಾಯಕನಾಗಿ ಅಬ್ಬರಿಸಿದ್ದಾರೆ. 

Sunil in Mangalam Srinu Look out From Pushpa movie starrer Allu Arjun
Author
Bangalore, First Published Nov 8, 2021, 3:03 PM IST

ಸುಕುಮಾರ್ (Sukumar) ಮತ್ತು 'ಸ್ಟೈಲಿಶ್ ಸ್ಟಾರ್' ಅಲ್ಲು ಅರ್ಜುನ್ (Allu Arjun)  ಕಾಂಬಿನೇಷನ್​ನಲ್ಲಿ ಸಿದ್ಧವಾಗಿರುವ 'ಪುಷ್ಪ' ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಈಗಾಗಲೇ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೇ ಹಾಡು, ಲುಕ್​ಗಳ ಮೂಲಕವೇ 'ಪುಷ್ಪ' ಸಿನಿಮಾ ನಿರೀಕ್ಷೆ ಹುಟ್ಟಿಸಿದೆ. ಈ ಮಧ್ಯೆ ಚಿತ್ರದ ಹೊಸ ಪೋಸ್ಟರ್‌ವೊಂದು ಬಿಡುಗಡೆಯಾಗಿದೆ. ಹೌದು! ಇಲ್ಲಿಯವರೆಗೂ ಹಾಸ್ಯನಟನಾಗಿ, ಹೀರೋ ಆಗಿ, ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟ ಸುನೀಲ್ (Sunil) ಈ ಚಿತ್ರದಲ್ಲಿ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

'ಪುಷ್ಪ' ಚಿತ್ರದಲ್ಲಿ ಸುನೀಲ್ ಅವರ ಹೊಸ ಲುಕ್ ಬಿಡುಗಡೆಯಾಗಿದ್ದು, ಮಂಗಲಮ್ ಶ್ರೀನು (MangalamSrinu) ಹೆಸರಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಲುಕ್ ಕೂಡಾ ಮಾಸ್ ಆಗಿದೆ. ಚಿತ್ರದಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್ ಅವರೇ ವಿಲನ್ ಎಂದು ಹೇಳಲಾಗಿತ್ತು. ಆದರೆ ಸುನೀಲ್ ಲುಕ್ ನೋಡಿದ ಮೇಲೆ ಫಹಾದ್ ಜೊತೆಗೆ ಸುನೀಲ್ ಕೂಡಾ ಖಳನಾಯಕನಾಗಿ ಅಬ್ಬರಿಸಿದ್ದಾರೆ.  ಈ ಬಗ್ಗೆ ಸುನೀಲ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, ಈ ಪಾತ್ರದ ನಟನೆಗೆ ಅವಕಾಶ ಕೊಟ್ಟಂತಹ ಸುಕ್ಕು ಡಾರ್ಲಿಂಗ್ ಮತ್ತು ಅಲ್ಲು ಅರ್ಜುನ್ ಗಾರು ಅವರಿಗೆ ಧನ್ಯವಾದಗಳು ಎಂದು ಕ್ಯಾಪ್ಷನ್ ಬರೆದು ತಮ್ಮ ಪಾತ್ರದ ಪೋಸ್ಟರ್‌ನ್ನು ಶೇರ್ ಮಾಡಿದ್ದಾರೆ.

'ಸಾಮಿ ಸಾಮಿ' ಹಾಡಿಗೆ ಬೊಂಬಾಟ್ ಸ್ಟೆಪ್ಸ್ ಹಾಕಿದ ಅಲ್ಲು-ರಶ್ಮಿಕಾ

'ಪುಷ್ಪ' ಚಿತ್ರದಲ್ಲಿ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ನ್ಯಾಷನಲ್ ಕ್ರಷ್‌ ರಶ್ಮಿಕಾ ಮಂದಣ್ಣ (Rashmika Mandanna) ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನಗಳ ಕಾಲ ಸ್ಟೈಲಿಶ್ ಅವತಾರಗಳಲ್ಲಿ ಮಿಂಚಿದ್ದ ಅವರು ಈಗ ಶ್ರೀವಲ್ಲಿ ಎಂಬ ಹಳ್ಳಿ ಹುಡುಗಿ ಪಾತ್ರ ಮಾಡುತ್ತಿದ್ದು, ಈಚೆಗೆ ಅದರ ಫಸ್ಟ್ ಲುಕ್ ಕೂಡ ರಿಲೀಸ್ ಆಗಿತ್ತು. ಶ್ರೀವಲ್ಲಿ ಪುಷ್ಪಾ ರಾಜ್ (ಅಲ್ಲು ಅರ್ಜುನ್ ಪಾತ್ರ) ಪ್ರೇಯಸಿ. ಪೋಸ್ಟರ್‌ನಲ್ಲಿ, ಶ್ರೀವಲ್ಲಿ ತನ್ನ ಕಿವಿಯೋಲೆಗಳಲ್ಲಿ ಒಂದನ್ನು ಧರಿಸಿ ಏನಕ್ಕೋ ಸಿದ್ಧವಾಗುತ್ತಿರುವುದನ್ನು ಕಾಣಬಹುದು.

'ಪುಷ್ಪ' ಚಿತ್ರದಲ್ಲಿ ಅಲ್ಲು ಅರ್ಜುನ್ ರಕ್ತ ಚಂದನ ಕಳ್ಳಸಾಗಾಣಿಕೆ ಮಾಡುವ ಲಾರಿ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಗ್ಲಾಮರಸ್ ಪಾತ್ರದಲ್ಲಿ ಶ್ರೀವಲ್ಲಿಯಾಗಿ ರಶ್ಮಿಕಾ ನಟಿಸಿದ್ದಾರೆ. ಡಾಲಿ ಧನಂಜಯ್ (Dolly Dhananjay), ಟಾಲಿವುಡ್ ವಿಲನ್ ಜಗಪತಿ ಬಾಬು (Jagapati Babu), ಪ್ರಕಾಶ್ ರಾಜ್ (Prakash Raj), ಸುನೀಲ್, ವೆನ್ನೆಲ್ಲಾ ಕಿಶೋರ್ (Vennella Kishor) ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ (Mythri Movie Makers) ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದು, ಅಲ್ಲು ಅರ್ಜುನ್​ ಗೆಟಪ್​ ಸಂಪೂರ್ಣ ಡಿಫರೆಂಟ್​ ಆಗಿದೆ. 

ಪುಷ್ಪಾದಲ್ಲಿ ಅಲ್ಲು ಜೋಡಿಯಾಗಿ ರಶ್ಮಿಕಾ: ಶ್ರೀವಲ್ಲಿ ಫಸ್ಟ್‌ ಲುಕ್ ರಿಲೀಸ್

ಇನ್ನು ಇತ್ತಿಚೆಗಷ್ಟೇ ಚಿತ್ರದ 'ಸಾಮಿ ಸಾಮಿ' (Saami Saami) ಹಾಡನ್ನು ಬಿಡುಗಡೆಯಾಗಿದ್ದು, ರಶ್ಮಿಕಾ ಮತ್ತು ಅಲ್ಲು ಅರ್ಜುನ್​ ಬೊಂಬಾಟ್ ಸ್ಟೆಪ್ಸ್ ಹಾಕಿದ್ದರು. ಕನ್ನಡ ವರ್ಷನ್​ಗೆ ಅನನ್ಯಾ ಭಟ್​ (Ananya Bhat) ಧ್ವನಿ ನೀಡಿದ್ದು, ದೇವಿಶ್ರೀ ಪ್ರಸಾದ್ (Devi Sri Prasad) ಹಾಡಿಗೆ ಸಂಗೀತ ಸಂಯೋಜಿಸಿದ್ದರು. 'ಪುಷ್ಪ' ಚಿತ್ರಕ್ಕೆ ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್ (Sukumar)​ ಆಕ್ಷನ್ ಕಟ್ ಹೇಳಿದ್ದು, ಎರಡು ಭಾಗಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. 'ಪುಷ್ಪ: ದಿ ರೈಸ್' (Pushpa: The Rise) ಎಂಬ ಶೀರ್ಷಿಕೆಯ ಮೊದಲ ಭಾಗವು ಡಿಸೆಂಬರ್ 17ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ.
 

 
 
 
 
 
 
 
 
 
 
 
 
 
 
 

A post shared by Sunil (@suniltollywood)

Follow Us:
Download App:
  • android
  • ios