ಬಾಲಿವುಡ್ ಖ್ಯಾತ ನಿರ್ಮಾಪಕ, ರಿಷಿ ಕಪೂರ್ ಹಾಗೂ ರಣಧೀರ್ ಕಪೂರ್ ಸಹೋದರ ರಾಜೀವ್ ಕಪೂರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಡೀ ಚಿತ್ರರಂಗವೇ ನಟನ ಸಾವಿಗೆ ಕಂಬನಿ ಮಿಡಿದಿದೆ. 'ಆ ಅಬ್ ಲೌಟ್ ಛಲೇ' ಚಿತ್ರದಲ್ಲಿ ಅಭಿನಯಿಸಿದ ಕನ್ನಡತಿ ಸುಮನ್ ರಂಗನಾಥ್ ಕೂಡ ಭಾವುಕರಾಗಿದ್ದಾರೆ. 

ರಾಜೀವ್ ಕಪೂರ್ ಸಾವು: ಚಿಕ್ಕಪ್ಪನ ನೋಡಲು ಬಂದ ತುಂಬು ಗರ್ಭಿಣಿ ಕರೀನಾ 

1999ರಲ್ಲಿ ರಾಜೀವ್ ಕಪೂರ್ ನಿರ್ಮಾಣದ 'ಆ ಅಬ್ ಲೌಟ್‌ ಛಲೇ' ಚಿತ್ರದಲ್ಲಿ ಅಕ್ಷಯ್ ಖನ್ನಾ, ರಾಜೇಶ್ ಖನ್ನಾ, ಐಶ್ವರ್ಯಾ ರೈ ಮತ್ತು ಸುಮನ್ ರಂಗನಾಥ್ ಅಭಿನಯಿಸಿದ್ದಾರೆ. ಸಿನಿಮಾ ಚಿತ್ರೀಕರಣವನ್ನು ಅಮೆರಿಕದಲ್ಲಿ ಮಾಡಲಾಗಿತ್ತು, ಈ ವೇಳೆ ರಾಜೀವ್ ಜೊತೆ ಕಳೆದ ಕ್ಷಣಗಳ ಬಗ್ಗೆ ಸುಮನ್ ಮೆಲುಕು ಹಾಕಿದ್ದಾರೆ. 

'ಕಳೆದ ಒಂದು ವರ್ಷದಿಂದ ಅನೇಕರು ನಿಧನರಾಗುತ್ತಿದ್ದಾರೆ. ಈ ಕಹಿ ಕ್ಷಣಗಳನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಆ ಅಬ್ ಲೌಟ್‌ ಛಲೇ ಸಿನಿಮಾ ಚಿತ್ರೀಕರಣ ಅಮೆರಿಕದಲ್ಲಿ ಮಾಡಲಾಗಿತ್ತು. ಇಡೀ ಚಿತ್ರೀಕರಣದಲ್ಲಿ ರಾಜೀವ್ ಜೊತೆಗಿದ್ದರು.  ಚಿತ್ರೀಕರಣ ಬಹಳ ದಿನ ಹಿಡಿದ ಕಾರಣ ನಾವೆಲ್ಲರೂ ಒಟ್ಟಿಗಿದ್ದು, ಫ್ಯಾಮಿಲಿಯಂತೆ ಆಗಿದ್ದೆವು. ಅವರಲ್ಲಿ ಕಪೂರ್ ಕಾಂದಾನ್‌ನ ಗುಣಗಳಿವೆ.  ತುಂಬಾ ತಮಾಷೆ ಮಾಡುತ್ತಿದ್ದರು, ಸಣ್ಣ ಪುಟ್ಟ ಜೋಕ್‌ಗಳಿಂದ ನಾವು ಗಂಟೆಗಟ್ಟಲೆ ನಗುತ್ತಿದ್ದೆವು. ಅಷ್ಟು ದಿನ ನಾವೆಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದ ಕ್ಷಣ, ಈಗಲೂ ನನಗೆ ಸುಮಧುರ ನೆನಪು,' ಎಂದು ಸುಮನ್ ಮಾತನಾಡಿದ್ದಾರೆ.

ಸಿನಿಮಾಗಿಂತ ರಿಲೆಷನ್‌ಶಿಪ್‌ಗೇ ಹೆಚ್ಚು ಫೇಮಸ್‌ ಕನ್ನಡದ ಈ ನಟಿ! 

58 ವರ್ಷ ರಾಜೀವ್ ಕಪೂರ್ ಫೆ.9ರಂದು ಹೃದಯಾಘಾತದಿಂದ ಅಸುನೀಗಿದರು. 1983 ರಲ್ಲಿ ಏಕ್ ಜಾನ್ ಹೈ ಹಮ್ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ರಾಜೀವ್ 1985 ರಲ್ಲಿ ಅವರ ತಂದೆಯ ಕೊನೆಯ ನಿರ್ದೇಶನದ ರಾಮ್ ತೇರಿ ಗಂಗಾ ಮೈನಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.