ರಾಜೀವ್ ಕಪೂರ್ ಸಾವು | ಕೊನೆ ಬಾರಿ ನೋಡಲು ಒಂದೆಡೆ ಸೇರಿದ ಕಪೂರ್ ಕುಡಿಗಳು | 58 ವರ್ಷದ ನಿರ್ಮಾಪಕ, ನಟ ಹೃದಯಾಘಾತದಿಂದ ಸಾವು

ನಟ, ನಿರ್ದೇಶಕ, ನಿರ್ಮಾಪಕ ರಾಜೀವ್ ಕಪೂರ್ (58) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರು ಬಾಲಿವುಡ್ ನಟರಾದ ರಿಷಿ ಕಪೂರ್ ಮತ್ತು ರಣಧೀರ್ ಕಪೂರ್ ಸಹೋದರ.

Add Asianetnews Kannada as a Preferred SourcegooglePreferred

ಸುದ್ದಿ ತಿಳಿಯುತ್ತಲೇ ನಟಿ ಕರೀನಾ ಕಪೂರ್, ಕರಿಷ್ಮಾ ಕಪೂರ್, ರಣಬೀರ್ ಕಪೂರ್ ಕಪೂರ್ ಫ್ಯಾಮಿಲಿ ಮನೆಗೆ ಭೇಟಿ ಕೊಟ್ಟಿದ್ದಾರೆ. ರಾಜ್‌ ಕಪೂರ್ ಅವರ ಪುತ್ರ ರಾಜೀಪ್ ಕಪೂರ್ ರಣಬೀರ್ ಮತ್ತು ಕರೀನಾ, ಕರಿಷ್ಮಾರ ಚಿಕ್ಕಪ್ಪನೂ ಹೌದು.

ಭಾರತ ಕಂಡ The Eternal Lover Boy ರಿಷಿ ಕಪೂರ್!

ರಾಜೀವ್ ಅವರ ಅಣ್ಣ, ಕರೀನಾ ಅವರ ತಂದೆ ರಣಧೀರ್ ಕಪೂರ್ ಆಸ್ಪತ್ರೆಯ ಹೊರಗೆ ಕಂಡುಬಂದರು. ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದ ಅವರಿಗೆ ದಾದಿಯರೂ ನೆರವಾಗಿದ್ದರು. ನಟ ರಣಬೀರ್ ಕಪೂರ್ ತಾಯಿ ನೀತು ಅವರೊಂದಿಗೆ ಆಗಮಿಸಿದ್ದರು

View post on Instagram

ರಾಜೀವ್ 1983 ರಲ್ಲಿ ಏಕ್ ಜಾನ್ ಹೈ ಹಮ್ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. 1985 ರಲ್ಲಿ ಅವರ ತಂದೆಯ ಕೊನೆಯ ನಿರ್ದೇಶನದ ರಾಮ್ ತೇರಿ ಗಂಗಾ ಮೈಲಿಯಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಇನ್ನಿಲ್ಲ!

View post on Instagram