ಮೇ 23 ಚುನಾವಣಾ ಫಲಿತಾಂಶ ಹೊರ ಬೀಳಿದ್ದು ಇಡೀ ದೇಶ ಈ ಫಲಿತಾಂಶಕ್ಕೆ ಕಾಯುತ್ತಿದೆ. ದೇಶದ ಪ್ರಧಾನ ಮಂತ್ರಿ ಯಾರಾಗ್ತಾರೆ ಎನ್ನುವುದು ನಿರ್ಧಾರವಾಗುತ್ತದೆ. 

’ಪ್ರೀಮಿಯರ್ ಪದ್ಮಿನಿ’ ಯಶಸ್ಸಿಗೆ ಥಿಯೇಟರ್‌ನಲ್ಲೇ ಹೋಮ ಮಾಡಿಸಿದ ಜಗ್ಗೇಶ್

ಈ ಬಾರಿ ಚುನಾವಣೆಯಲ್ಲಿ ಹೆಚ್ಚು ಗಮನ ಸೆಳೆದಿದ್ದು ಮಂಡ್ಯ ಚುನಾವಣೆ. ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ನಡುವೆ ಟೈಟ್ ಫೈಟ್ ಇತ್ತು. ಆರೋಪ-ಪ್ರತ್ಯಾರೋಪಗಳು ಜೋರಾಗಿತ್ತು. ಸಕ್ಕರೆ ನಾಡಿನಲ್ಲಿ ವಿಜಯಲಕ್ಷ್ಮೀ ಯಾರಿಗೆ ಒಲಿಯಲಿದ್ದಾಳೆ ಎಂಬುದು ಬಾರೀ ಕುತೂಹಲ ಮೂಡಿಸಿದೆ. 

ಸುಮಲತಾಗೆ ಮೇ 23 ಹಾಗೂ 24 ಮುಖ್ಯವಾದ ದಿನ. ಮೇ 23 ಕ್ಕೆ ಫಲಿತಾಂಶವಾದರೆ ಮೇ 24 ಕ್ಕೆ ಸುಮಲತಾ ಅಭಿನಯದ ಡಾಟರ್ ಆಫ್ ಪಾರ್ವತಮ್ಮ ರಾಜ್ಯಾದ್ಯಂತ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಹರಿಪ್ರಿಯಾ ನಟಿಸಿದ್ದಾರೆ. ಹರಿಪ್ರಿಯಾಗೆ ಇದು 25 ನೇ ಚಿತ್ರ. 

ಎಷ್ಟು ಚಂದ ಐತೆ, ಎಂಥಾ ಅಂದ ಐತೆ ರಿಷಬ್ ಶೆಟ್ರ ಶಾಲೆ

ಇದೊಂದು ಕ್ರೈಂ ಸುತ್ತ ನಡೆಯುವ ಕಥೆಯಾಗಿದ್ದು ಹರಿಪ್ರಿಯಾ ಇದರಲ್ಲಿ ವೈದೇಹಿ ಎಂಬ ಹೆಸರಿನ ತನಿಖಾಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಹರಿಪ್ರಿಯಾ ತಾಯಿ ಪಾರ್ವತಮ್ಮ ಪಾತ್ರದಲ್ಲಿ ಸುಮಲತಾ ಕಾಣಿಸಿಕೊಂಡಿದ್ದಾರೆ.