’ಪ್ರೀಮಿಯರ್ ಪದ್ಮಿನಿ’ ಯಶಸ್ಸಿಗೆ ಥಿಯೇಟರ್‌ನಲ್ಲೇ ಹೋಮ ಮಾಡಿಸಿದ ಜಗ್ಗೇಶ್

ಇಂದು ಪ್ರೀಮಿಯರ್ ಪದ್ಮಿನಿ ಸಿನಿಮಾ ರಾಜ್ಯಾದ್ಯಂತ ರಿಲೀಸ್ | ಚಿತ್ರದ ಯಶಸ್ಸಿಗಾಗಿ ಜಗ್ಗೇಶ್ ಬೆಂಗಳೂರಿನ ಅನುಮಪ ಚಿತ್ರಮಂದಿರದಲ್ಲಿ ಹೋಮ ಮಾಡಿಸಿದ್ದಾರೆ | 

Jaggesh performs pooja for success of Premier Padmini movie

ಇಂದು ಪ್ರೀಮಿಯರ್ ಪದ್ಮಿನಿ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿದೆ.  ಈ ಚಿತ್ರದ ಯಶಸ್ಸಿಗಾಗಿ ಜಗ್ಗೇಶ್ ಬೆಂಗಳೂರಿನ ಅನುಮಪ ಚಿತ್ರಮಂದಿರದಲ್ಲಿ ಹೋಮ ಮಾಡಿಸಿದ್ದಾರೆ.

ಮಧುಬಾಲಾ ಪಾತ್ರಕ್ಕೆ ನನ್ನೇ ಕೇಳಿದ್ದರು: ಶ್ರುತಿ ನಾಯ್ಡು

ಚಿತ್ರ ಯಶಸ್ಸಿಗೆ ಭಗವಂತನಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಈ ವೇಳೆ ನಿರ್ದೇಶಕ ರಮೇಶ್ ಇಂದಿರಾ, ನಟ ಪ್ರಮೋದ್ ಪಂಜು ಭಾಗಿಯಾಗಿದ್ದಾರೆ. 

 

ಜಗ್ಗೇಶ್ ಗೆ ದೇವರ ಮೇಲೆ ಅಪಾರ ಭಕ್ತಿ. ಆಗಾಗ ಪೂಜೆ, ಪುನಸ್ಕಾರಗಳನ್ನು ಮಾಡುತ್ತಿರುತ್ತಾರೆ. ರಾಘವೇಂದ್ರ ಸ್ವಾಮಿಗಳ ಅಪ್ಪಟ ಭಕ್ತ. ಈ ಹಿಂದೆ 8mm ಸಿನಿಮಾ ರಿಲೀಸ್ ಆದಾಗಲೂ ಚಿತ್ರ ಯಶಸ್ಸಿಗೆ ಪೂಜೆ ಮಾಡಿಸಿದ್ದರು. 

ಪ್ರೀಮಿಯರ್ ಪದ್ಮಿನಿ ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಜಗ್ಗೇಶ್, ಮಧುಬಾಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರುತಿ ನಾಯ್ಡು ನಿರ್ಮಾಣ ಮಾಡಿದ್ದು, ರಮೇಶ್ ಇಂದಿರಾ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. 

Latest Videos
Follow Us:
Download App:
  • android
  • ios