Asianet Suvarna News Asianet Suvarna News

D BOSS ಫ್ಯಾನ್ಸ್ ಏನಂತಿದಾರೆ ಸುಮಲತಾ ಅಂಬರೀಷ್ ಬಗ್ಗೆ, ಜೈಲಲ್ಲಿ ನಟ ದರ್ಶನ್ ಭೇಟಿಯಾದ್ರಲ್ಲಾ..!

ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ಯಾವಾಗ ಹೊರಗೆ ಬರುತ್ತಾರೋ ಗೊತ್ತಿಲ್ಲ. ತಪ್ಪಿತಸ್ಥನೆಂದು ಕೋರ್ಟ್‌ನಲ್ಲಿ ಸಾಬೀತಾದರೆ ಶಿಕ್ಷೆಯೂ ಪ್ರಕಟವಾಗಿ ಜೈಲು ಪಾಲಾಗಬೇಕಾಗುತ್ತಿದೆ. ಆದರೂ, ದರ್ಶನ್..

sumalatha ambareesh is my mother and i will do any work for her says star actor darshan srb
Author
First Published Jul 5, 2024, 12:23 PM IST

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಂಬರ್ 2 ಆರೋಪಿಯಾಗಿ ನಟ ದರ್ಶನ್ ಜೈಲು ಪಾಲಾಗಿರುವುದು ಗೊತ್ತೇ ಇದೆ. ಹಲವರು ಈಗ ನಟ ದರ್ಶನ್ ಪರ ಬ್ಯಾಟ್ ಬೀಸಲು ಶುರು ಮಾಡಿದ್ದಾರೆ. ಅವರಲ್ಲಿ ಪ್ರಮುಖರು ಸುಮಲತಾ ಅಂಬರೀಷ್ ಎನ್ನಬಹುದು. ಕಳೆದ ಸೋಮವಾರ ಜೈಲಿನಲ್ಲಿರುವ ನಟ ದರ್ಶನ್ ನೋಡಲು ಹೋಗಿದ್ದ ಸುಮಲತಾ ಅಂಬರೀಷ್ ಅವರು 'ಕಾನೂನಿನ ಮೇಲೆ ನಂಬಿಕೆ ಇದೆ, ದರ್ಶನ್‌ ಆದಷ್ಟು ಬೇಗ ಹೊರಬರಲಿ ಎಂದು ಆಶಿಸುತ್ತೇನೆ' ಎಂದಿದ್ದಾರೆ. ಆದರೆ, ಸುಮಲತಾ ಅವರು ತುಂಬಾ ಲೇಟ್‌ ಆಗಿ ಮಾತನಾಡಿದ್ದಾರೆ ಎಂದು ದರ್ಶನ್ ಅಭಿಮಾನಿಗಳು ಹೇಳುತ್ತಿದ್ದಾರೆ. 

ಅದಕ್ಕೆ ಕಾರಣ, ನಟಿ ಸುಮಲತಾ ಅಂಬರೀಷ್ ಅವರು ಮಂಡ್ಯ ಸಂಸದೆಯಾಗಿದ್ದಕ್ಕೆ ಕಾರಣ ನಟ ದರ್ಶನ್ ಕೂಡ ಎಂಬುದರಲ್ಲಿ ಎರಡು ಮಾತಿಲ್ಲ. ನಟರಾದ ದರ್ಶನ್ ಹಾಗು ಯಶ್ ಅವರಬ್ಬರೂ ಜೋಡೆತ್ತುಗಳಂತೆ ಸುಮಲತಾ ಬೆನ್ನಿಗೆ ನಿಂತು ಅವರ ಪರವಾಗಿ ಪ್ರಚಾರ ಮಾಡಿ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆಗೊಮ್ಮೆ ವೇದಿಕೆಯಲ್ಲಿ ನಟಿ ಸುಮಲತಾ 'ದರ್ಶನ್ ನನ್ನ ಮೊದಲ ಮಗನಂತೆ' ಎಂದಿದ್ದರು. ಅದಕ್ಕೆ ಪ್ರತಿಯಾಗಿ ನಟ ದರ್ಶನ್ ಕೂಡ 'ಸುಮಲತಾ ನನ್ನ ಅಮ್ಮನಂತೆ' ಎಂದಿದ್ದರು. 

ಇಲ್ಲಿನ ಜನಕ್ಕೆ ನಿಯತ್ತು ಇಲ್ಲ, ನಿನ್ನ ಅಭಿಮಾನಿಗಳನ್ನ ಬಿಟ್ರೆ ನಿಂಗೆ ಒಳ್ಳೇದು ಬಯಸೋರು ಯಾರೂ ಇಲ್ಲ..!

ನಟ ದರ್ಶನ್ ಮಾಜಿ ಸಂಸದೆ ಸುಮಲತಾ ಅವರನ್ನು ನನ್ನ ತಾಯಿ ಎಂದು ಹೇಳುತ್ತಿದ್ದರು, ಪೂಜಿಸುತ್ತಿದ್ದರು ಆರಾಧಿಸುತ್ತಿದ್ದರು, ಗೌರವಿಸುತ್ತಿದ್ದರು ಎನ್ನಬಹುದು. ಒಮ್ಮೆ ನಟ ದರ್ಶನ್ 'ನಾನು ಅವರು ಹಾಕಿದ ಗೆರೆ ದಾಟುವುದಿಲ್ಲ, ಅವರು ಬಾವಿಗೆ ಹೋಗಿ ಹಾರು ಎಂದರೂ ನಾನು ನಾನು ಯಾಕೆ ಏನು ಎಂದು ಕೇಳೋದಿಲ್ಲ, ಹೋಗಿ ಹಾರ್ತಿನಿ ಎಂದಿದ್ರು. ಅಷ್ಟೇ ಅಲ್ಲ, ಒಂದು ವೇಳೆ ಯಮ ನನ್ನನ್ನು ಕರ್ಕೊಂಡು ಹೋಗ್ಬೇಕು ಅಂತ ಬಂದ ಅಂದ್ರೆ ನಾನು 'ಒಂದ್ನಿಮಿಷ ನಿಲ್ಲು, ನಮ್ ಅಮ್ಮಂದು ಒಂದು ಕೆಲಸ ಇದೆ, ಅದನ್ನು ಮುಗ್ಸಿ ನಾನೇ ನಿನ್ನ ಹತ್ರ ಬರ್ತೀನಿ ಅಂತ ಹೇಳ್ತೀನಿ' ಅಂತ ಡೈಲಾಗ್‌ ಹೊಡೆದಿದ್ರು ದರ್ಶನ್. 

ಜೈಲಿಂದ ಹೊರಗ್ ಬಂದ್ಮೇಲೆ ಕನ್ನಡ ಚಿತ್ರರಂಗ ಬಿಟ್ಬಿಡು: ದರ್ಶನ್‌ಗೆ ಹಿಂಗದಿದ್ದು ಯಾರು?

ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ಯಾವಾಗ ಹೊರಗೆ ಬರುತ್ತಾರೋ ಗೊತ್ತಿಲ್ಲ. ತಪ್ಪಿತಸ್ಥನೆಂದು ಕೋರ್ಟ್‌ನಲ್ಲಿ ಸಾಬೀತಾದರೆ ಶಿಕ್ಷೆಯೂ ಪ್ರಕಟವಾಗಿ ಜೈಲು ಪಾಲಾಗಬೇಕಾಗುತ್ತಿದೆ. ಆದರೂ, ದರ್ಶನ್ ಅಭಿಮಾನಿಗಳಿಗೆ ತಮ್ಮ ಮೆಚ್ಚಿನ ನಟ ನಿರಪರಾಧಿ ಎಂದು ಸಾಬೀತಾಗಿ ಮರಳಿ ಬರುವ ನಿರೀಕ್ಷೆ ಬೆಟ್ಟದಷ್ಟಿದೆ. ಅದಕ್ಕಾಗಿ ನಿತ್ಯ ಪೂಜೆ-ಪ್ರಾರ್ಥನೆಗಳೂ ನಡೆಯುತ್ತಿವೆ. ಜೊತೆಗೆ, ನಟ ದರ್ಶನ್ ಅವರು ಜೈಲಿನಿಂದ ಹೊರಗೆ ಬಂದ್ಮೇಲೆ ಕನ್ನಡ ಚಿತ್ರರಂಗದಲ್ಲಿ ಮುಂದುವರಿಯುವುದು ಬೇಡ, ಬೇರೆ ಭಾಷೆಯ ಚಿತ್ರರಂಗದತ್ತ ಮುಖ ಮಾಡುವುದು ಒಳ್ಳೆಯದು ಎಂದು ಅವರ ಫ್ಯಾನ್ಸ್ ಸಲಹೆ ನೀಡಲು ಶುರು ಮಾಡಿದ್ದಾರೆ.

ಭೈರವನ ಕೊನೆ ಪಾಠಕ್ಕೆ ಗುರುವಾದ್ರು ಹೇಮಂತ್ ರಾವ್; ಶಿವಣ್ಣನ ಹೊಸ ಗೆಟಪ್‌ ನೋಡಲು ರೆಡಿಯಾಗಿರಿ!

ಹೌದು, ನಟ ದರ್ಶನ್ ನ್ಯಾಯಾಂಗ ಬಂಧನದ ಅವಧಿ ಮತ್ತಷ್ಟು ವಿಸ್ತರಣೆ ಆಗಿದೆ. ಈ ತಿಂಗಳು 18ರವರೆಗೆ, ಅಂದರೆ 18 ಜುಲೈ 2024ರವರೆಗೆ ಜ್ಯುಡಿಸಿಯಲ್ ಕಸ್ಟಡಿ ಮುಂದುವರೆಯಲಿದೆ. ಇದೀಗ, ಬೆಂಗಳೂರಿನ ಪರಪ್ಪನ ಅಗ್ರಹಾರ ಹಾಗೂ ತುಮಕೂರಿನ ಜೈಲಿನಲ್ಲಿರುವ ಖೈದಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ಗೆ ಹಾಜರುಪಡಿಸಿ ಮತ್ತೆ ಕಸ್ಟಿಡಿಗೆ ಒಪ್ಪಿಸಲಾಗಿದೆ. ನ್ಯಾಯಾಂಗ ಬಂಧನ ವಿಸ್ತರಣೆ ಮಾಡುವಂತೆ ಎಸ್ಪಿಪಿ ಕಡೆಯಿಂದ ರಿಮಾಂಡ್ ಅರ್ಜಿ ಸಲ್ಲಿಕೆಯಾಗಿದೆ. ಹೀಗಾಗಿ, ಮತ್ತೆ ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ ಆಗುತ್ತಿದ್ದರೂ ಅಚ್ಚರಿಯೇನಿಲ್ಲ ಎನ್ನಲಾಗುತ್ತಿದೆ. 

ಮೂಟೆ ಕಟ್ಟಿ ಕರ್ಕೊಂಡು ಬಂದಿಲ್ಲ ಕಿಡ್ನಾಪ್ ಅನ್ನೋಕೆ ಅವ್ನ ಅಲ್ವಾ; 'ಓಂ' ನಟ ಹರೀಶ್ ರಾಯ್!

Latest Videos
Follow Us:
Download App:
  • android
  • ios