ನಟ ದರ್ಶನ್ ಅಪ್ಪಟ ಅಭಿಮಾನಿ ಎನ್ನುವ ವ್ಯಕ್ತಿಯೊಬ್ಬರು ಹೀಗೆ ಬರೆದಿರಬಹುದಾ? ಅಥವಾ ಇನ್ಯಾರು ಎಂಬುದನ್ನು ನೀವೇನಾದ್ರೂ ಊಹಿಸ್ತೀರಾ..? ಆದರೆ, ನಿರೀಕ್ಷಿತ ಎಂಬಂತೆ , ಆ ಪೋಸ್ಟ್‌ಗೆ ಬಹಳಷ್ಟು ವಿಭಿನ್ನ ಕಾಮೆಂಟ್‌ಗಳು ಬಂದಿವೆ..

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ಅದ್ಯಾವಾಗ ಹೊರ ಬರುತ್ತಾರೋ ಗೊತ್ತಿಲ್ಲ. ತಪ್ಪತಸ್ಥನೆಂದು ಕೋರ್ಟಲ್ಲಿ ಸಾಬೀತಾದರೆ ಶಿಕ್ಷೆಯೂ ಪ್ರಕಟವಾಗುತ್ತೆ. ಆದರೂ, ಅಭಿಮಾನಿಗಳಿಗೆ ನಟ ಮರಳಿ ಬರುವ ನಿರೀಕ್ಷೆ ಬೆಟ್ಟದಷ್ಟಿದೆ. ಅದಕ್ಕಾಗಿ ನಿತ್ಯ ಪ್ರಾರ್ಥನೆಯಾಗುತ್ತಿದೆ. ಜೊತೆಗೆ ಇನ್ನು ಕನ್ನಡ ಚಿತ್ರರಂಗದಲ್ಲಿ ಮುಂದುವರಿಯುವುದು ಬೆಂಡವೆಂದೂ ಈ ಫ್ಯಾನ್ಸ್ ಸಲಹೆ ನೀಡಲು ಶುರು ಮಾಡಿದ್ದಾರೆ.

ಅಶ್ಲೀಲ ಮೆಸೇಜ್ ಮಾಡಿದ್ದ ಕಾರಣಕ್ಕಾಗಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬರ್ಬರ ಹತ್ಯೆ ಮಾಡಿದ ಆರೋಪದ ಮೇಲೆ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ 14 ದಿನಗಳು ಆಗಿವೆ. ಪ್ರೇಕ್ಷಕರನ್ನ ರಂಜಿಸಬೇಕಿದ್ದ ದರ್ಶನ್​ ಮೇಲೆ ಈಗ ಕೊಲೆ ಗಡುಕ ಅನ್ನೋ ಆರೋಪ ಬಂದಿದೆ. ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ಅವರು ಕೊಲೆ ಕೇಸಿನಲ್ಲಿ ಆರೊಪಿಯಾಗಿ ಪರಪ್ಪನ ಅಗ್ರಹಾರದಲ್ಲಿ ಜೈಲಿನಲ್ಲಿ ದಿನಕಳೆಯುತ್ತಿದ್ದಾರೆ. ನಟ ದರ್ಶನ್ ಹಾಗು ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ ಒಟ್ಟೂ ಹದಿನೇಳು ಜನರು ಸದ್ಯ ಆರೋಪಿಗಳಾಗಿ ಜೈಲಿನಲ್ಲಿ ಇದ್ದಾರೆ. 

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಆರೋಪಿಯಾಗಿ ಜೈಲು ಸೇರಿದ್ದು, ಅವರು ಬೇಲ್‌ ಮೇಲೆ ಹೊರಬರುತ್ತಾರೋ ಇಲ್ಲವೋ ಎಂಬುದು ಸಹ ಸದ್ಯಕ್ಕೆ ಪ್ರಶ್ನೆಯಾಗಿಯೇ ಉಳಿದಿದೆ. ನಟ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಸೋಷಿಯಲ್ ಮೀಡಿಯಾಗಳ ಮೂಲಕ ಅಶ್ಲೀಲ ಮೆಸೇಜ್ ಕಳುಹಿಸಿರುವುದು ಆತನಿಗೆ ಹೊಡೆಯಲು ಕಾರಣ ಎನ್ನಲಾಗಿದೆ. ಹೊಡೆತ ತಾಳಲಾಗದೇ ಆತ ಅಸು ನೀಗಿದ್ದು, ಅದೀಗ ಕೊಲೆ ಕೇಸ್ ಆಗಿದೆ.

ದರ್ಶನ್‌ & ಟೀಮ್ ನ್ಯಾಯಾಂಗ ಬಂಧನ ವಿಸ್ತರಣೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್‌ಗೆ ಹಾಜರು!

ನಟ ದರ್ಶನ್ ಸ್ಯಾಂಡಲ್‌ವುಡ್‌ನ ಸ್ಟಾರ್ ನಟ. ಈಗಾಗಲೇ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅವರ ಅಭಿಮಾನಿ ಬಳಗ ಹಾಗು ಚಿತ್ರರಂಗದ ನಂಟು ಬಹಳ ದೊಡ್ಡದು. ಕೇಸ್‌ ಆಗಿ ಸ್ವಲ್ಪ ದಿನಗಳವರೆಗೂ ಸುಮ್ಮನಿದ್ದ ಚಿತ್ರರಂಗದ ದರ್ಶನ್ ಆಪ್ತರು, ಈಗ ಒಬ್ಬೊಬ್ಬರಾಗಿಯೇ ನಟ ದರ್ಶನ್ ಪರ ಮಾತನಾಡಲು ಆರಂಭಿಸಿದ್ದಾರೆ. ಜೈಲಿಗೆ ಹೋಗಿ ನಟ ದರ್ಶನ್ ಅವರನ್ನು ಮಾತನಾಡಿಸಿಕೊಂಡು ಬಂದವರು ಸಹ ಇದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಲವರು ದರ್ಶನ್‌ ಘಟನೆಗೆ ಸಂಕಟ ವ್ಯಕ್ತಪಡಿಸುತ್ತಿದ್ದಾರೆ. 

ಭೈರವನ ಕೊನೆ ಪಾಠಕ್ಕೆ ಗುರುವಾದ್ರು ಹೇಮಂತ್ ರಾವ್; ಶಿವಣ್ಣನ ಹೊಸ ಗೆಟಪ್‌ ನೋಡಲು ರೆಡಿಯಾಗಿರಿ!

ದರ್ಶನ್ ಅಭಿಮಾನಿಯೊಬ್ಬರು ಮಾಡಿರುವ ಸೋಷಿಯಲ್ ಮೀಡಿಯಾ ಪೋಸ್ಟ್ ಸದ್ಯ ಭಾರೀ ವೈರಲ್ ಆಗುತ್ತಿದೆ. ಅದನ್ನು ಓದಿದರೆ ಯಾರಿಗಾದರೂ ಒಮ್ಮೆ ಅಚ್ಚರಿ ಆಗದೇ ಇರದು. ನೀನು ತಪ್ಪು ಮಾಡಿದ್ಯಾ ಮಾಡಿಲ್ವಾ ಅನ್ನೋದನ್ನ ಕೋರ್ಟ್‌ ತೀರ್ಮಾನ ಮಾಡುತ್ತೆ. ಆದ್ರೆ ಮುಂದೆ ನಮ್ಮ ಕನ್ನಡಕ್ಕೆ ಮಾತ್ರ ಸೀಮಿತ ಅಂತ ಮಾತ್ರ ಹೇಳ್ಬೇಡ ಕಣಯ್ಯಾ.. ಇಲ್ಲಿನ ಜನಕ್ಕೆ ನಿಯತ್ತು ಇಲ್ಲ. ನಿನ್ನ ಅಭಿಮಾನಿಗಳನ್ನ ಬಿಟ್ಟರೆ ನಿನಗೆ ಒಳ್ಳೆಯದನ್ನು ಬಯಸೋರು ಯಾರೂ ಇಲ್ಲ. ನೀನೂ ಎಲ್ಲರ ತರಹ ಬೇರೆ ಭಾಷೆಗೆ ಹೋಗಿ ಅಲ್ಲೇ ಇದ್ದು ಬಿಡು..'ಎಂದಿದೆ. 

ಕೊಲೆ ಕೇಸ್‌ನಲ್ಲಿ ದರ್ಶನ್ ಹೆಸರು ಕೇಳಿ ಶಾಕ್ ಆಯ್ತು, ಬಹುಭಾಷಾ ನಟ ಸಾಯಿಕುಮಾರ್ ಹೇಳಿದ್ದೇನು ನೋಡಿ..!

ನಟ ದರ್ಶನ್ ಅಪ್ಪಟ ಅಭಿಮಾನಿ ಎನ್ನುವ ವ್ಯಕ್ತಿಯೊಬ್ಬರು ಹೀಗೆ ಬರೆದಿರಬಹುದು ಎಂಬುದನ್ನು ಯಾರಾದರೂ ಊಹಿಸಬಹುದು. ಆದರೆ, ನಿರೀಕ್ಷಿತ ಎಂಬಂತೆ , ಆ ಪೋಸ್ಟ್‌ಗೆ ಬಹಳಷ್ಟು ವಿಭಿನ್ನ ಕಾಮೆಂಟ್‌ಗಳು ಬಂದಿವೆ. ಅದರಲ್ಲಿ ಒಬ್ಬರು 'ಬೇರೆ ಭಾಷೆಗೆ ಕರೀಲಿಲ್ಲ, ಅದಕ್ಕೇ ಹೋಗಿಲ್ಲ..' ಎಂದು ಬರೆದಿದ್ದಾರೆ. ಆದರೆ ಅದು ಸುಳ್ಳು ಸಂಗತಿ ಎನ್ನಬಹುದು. ಕಾರಣ, ಬೇರೆ ಭಾಷೆಯ ಚಿತ್ರರಂಗದಿಂದ ನಟ ದರ್ಶನ್ ಅವರಿಗೆ ಸಾಕಷ್ಟು ಕರೆಗಳು ಬಂದಿದ್ದರ ಬಗ್ಗೆ ಸ್ವತಃ ನಟ ದರ್ಶನ್ ಹಲವಾರು ಬಾರಿ ಹೇಳಿಕೊಂಡಿದ್ದಾರೆ.

ಯಾವ್ ಹೀರೋನೂ ನಂಗೆ ಹಾಗೆ ಹೇಳಿರ್ಲಿಲ್ಲ, ಅವ್ರು ಮಾತ್ರ ಅಂದಿದ್ರು: ಶಾಕ್ ಕೊಟ್ರು 'AK 47' ಓಂ ಪ್ರಕಾಶ್ ರಾವ್! 

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ಅಧ್ಯಾವಾಗ ಹೊರ ಬರುತ್ತಾರೋ ಗೊತ್ತಿಲ್ಲ. ತಪ್ಪತಸ್ಥನೆಂದು ಕೋರ್ಟಲ್ಲಿ ಸಾಬೀತಾದರೆ ಶಿಕ್ಷೆಯೂ ಪ್ರಕಟವಾಗುತ್ತೆ. ಆದರೂ, ಅಭಿಮಾನಿಗಳಿಗೆ ನಟ ಮರಳಿ ಬರುವ ನಿರೀಕ್ಷೆ ಬೆಟ್ಟದಷ್ಟಿದೆ. ಅದಕ್ಕಾಗಿ ನಿತ್ಯ ಪ್ರಾರ್ಥನೆಯಾಗುತ್ತಿದೆ. ಜೊತೆಗೆ ಇನ್ನು ಕನ್ನಡ ಚಿತ್ರರಂಗದಲ್ಲಿ ಮುಂದುವರಿಯುವುದು ಬೆಂಡವೆಂದೂ ಈ ಫ್ಯಾನ್ಸ್ ಸಲಹೆ ನೀಡಲು ಶುರು ಮಾಡಿದ್ದಾರೆ.