ನಟಿ ಸುಧಾರಾಣಿ ಅವರ ಮನೆಯ ಪ್ರೀತಿಯ ನಾಯಿ ಗಂಗು ಕಳೆದುಹೋಗಿತ್ತು. ಇದೀಗ ವಾಪಾಸ್ ಆಗಿದೆ ಎಂದು ನಟಿ ಸಂತಸ ಹಂಚಿಕೊಂಡಿದ್ದಾರೆ.
ಸ್ಯಾಂಡಲ್ ವುಡ್ ನಟಿ ಸುಧಾರಾಣಿ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ ಹೆಚ್ಚಾಗಿದೆ. ಕಾರಣ ಕಳೆದುಹೋಗಿದ್ದ ಗಂಗು ವಾಪಾಸ್ ಆದ ಖುಷಿಯಲ್ಲಿದ್ದಾರೆ. ಹೌದು, ಸುಧಾರಾಣಿ ಅವರ ಮನೆಯ ಪ್ರೀತಿಯ ನಾಯಿ ಗಂಗು ಕಳೆದುಹೋಗಿತ್ತು. ಕಳೆದ 15 ದಿನಗಳಿಂದ ನಾಯಿ ಕಾಣಿಸುತ್ತಿಲ್ಲ ಹುಡುಕಿಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಶೇರ್ ಮಾಡಿದ್ದರು. ಅಲ್ಲದೇ ಬಿಬಿಎಂಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇದೀಗ ಗಂಗು ಸಿಕ್ಕದೆ ಎನ್ನುವ ಸಂತಸದ ವಿಚಾರವನ್ನು ಶೇರ್ ಮಾಡಿದ್ದಾರೆ.
ಪ್ರೀತಿಯ ಗಂಗು ಜೊತೆ ವಿಡಿಯೋ ಶೇರ್ ಮಾಡಿರುವ ಸುಧಾರಾಣಿ ಅವರು ಹುಡುಕಿ ಕೊಟ್ಟವರಿಗೆ ಧನ್ಯವಾದ ತಿಳಿಸಿದ್ದಾರೆ. 'ನಮಸ್ಕಾರ ನನಗೆ ತುಂಬಾ ಖುಷಿಯಾಗಿದೆ. ನನ್ನ ಗಂಗು ಸಿಕ್ಕಿದ್ದಾಳೆ. ಗಂಗುಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು. ಶಬೀರ್ ಪಾಷ, ಅಮನ್ ದೀಪ್ ಸಿಂಗ್, ಪೂಜಾ ಎಲ್ಲರಿಗೂ ಧನ್ಯವಾದಗಳು. ಗಂಗು ಹತ್ರನೆ ಕಾದು ಎಲ್ಲಿಗೂ ಹೋಗದಂತೆ ನೋಡಿಕೊಂಡು ಅದನ್ನು ರಕ್ಷಿಸಿ ತಂದು ಕೊಟ್ಟ ಶಬೀರ್ ಮತ್ತು ಅಮನ್ ದೀಪ್ ಅವರಿಗೆ ಧನ್ಯವಾದಗಳು' ಎಂದು ಹೇಳಿದ್ದಾರೆ. ಸುಧಾರಾಣಿ ಜೊತೆ ಕುಳಿತಿರುವ ಗಂಗು ಕೂಡ ಕಾಣಿಸಿಕೊಂಡಿದೆ.
15 ದಿನಗಳಿಂದ ನಟಿ ಸುಧಾರಾಣಿ ಮನೆ ನಾಯಿ ಕಾಣೆ; ಬಿಬಿಎಂಪಿ ವಿರುದ್ಧ ಅಸಮಾಧಾನ
ಬೆಂಗಳೂರಿನ ಮಲ್ಲೇಶ್ವರದಲ್ಲಿ ವಾಸಿಸುತ್ತಿರುವ ನಟಿ ಸುಧಾರಾಣಿ ತಮ್ಮ ಮನೆಯಲ್ಲಿ ಎರಡು ಗೋಲ್ಡನ್ ರೆಟ್ರೀವರ್ ಶ್ವಾನಗಳನ್ನು ಸಾಕಿದ್ದಾರೆ. ಜೊತೆಗೆ ತಮ್ಮ ನಿವಾಸದ ಸುತ್ತಲ್ಲಿರುವ ಶ್ವಾನಗಳನ್ನು ಅಷ್ಟೇ ಪ್ರೀತಿಯಿಂದ ಸಾಕುತ್ತಾರೆ. ತಮ್ಮ ಮನೆಯ ಶ್ವಾನ ಗಂಗಮ್ಮ 15 ದಿನಗಳಿಂದ ಕಾಣೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಬಿಬಿಎಂಪಿಗೆ ದೂರು ಕೊಟ್ಟರೂ ಯಾವ ಉಪಯೋಗವಾಗಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದರು. ಗಂಗಮ್ಮ ಇಂಡೀ ಜಾತಿ (ಬೀದಿ) ನಾಯಿ ಆಗಿದ್ದು ಕಪ್ಪು- ಬಿಳಿ ಬಣ್ಣದಲ್ಲಿದೆ ಎಂದಿದ್ದರು.
ಮನೆಯಲ್ಲಿ ಸಾಕುತ್ತಿರುವ ಎರಡು ಶ್ವಾನಗಳಿಗೆ ಮಿಕ್ಕಿ ಅಂಡ್ ಮಿನಿ ಎಂದು ಹೆಸರಿಟ್ಟಿದ್ದಾರೆ. ಅವುಗಳ ಹುಟ್ಟುಹಬ್ಬವನ್ನು ಪ್ರತಿ ವರ್ಷ ಅದ್ಧೂರಿಯಾಗಿ ಆಚರಿಸುತ್ತಾರೆ. ರಕ್ಷಾ ಬಂಧನ ದಿನ ಎಮ್ ಆಂಡ್ ಎಮ್‌ಗೆ ಸುಧಾರಾಣಿ ಮಗಳು ರಾಖಿ ಕಟ್ಟುತ್ತಾರೆ. ಹಬ್ಬದ ದಿನ ಅವುಗಳಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ಹಾಕುತ್ತಾರೆ. ಮನೆಯಲ್ಲಿ ಮಗಳ ಜೊತೆ ಸೇರಿಕೊಂಡು ಮಿಕ್ಕಿ-ಮಿನಿ ಮಾಡುವ ತುಂಟಾಟಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾರೆ.
ಗಂಗು ಕಳೆದುಹೋದ ಬಗ್ಗೆ ಸುಧಾರಾಣಿ ಪೋಸ್ಟ್
'ನಮಸ್ಕಾರ ನಿಮ್ಮೆಲ್ಲರಿಗೂ ಗೊತ್ತಿದೆ ನಾನು ಹಲವಾರು ಬಾರಿ ಪೋಸ್ಟ್ ಹಾಕಿರುವೆ. ಸುಮಾರು 15 ದಿನಗಳಿಂದ ನಮ್ಮ ಗಂಗಮ್ಮ ಕಾಣಿಸುತ್ತಿಲ್ಲ ಅಪ್ಪಿತಪ್ಪಿ ಬಿಬಿಎಂಪಿ ಅವರು ನಾಯಿಗಳನ್ನು ರಿಲೋಕೇಟ್ ಮಾಡಿದಾಗ ಗಂಗಮ್ಮ ನಿಮ್ಮ ಏರಿಯಾದಲ್ಲಿ ಕಾಣಿಸಿಕೊಂಡರೆ ನನ್ನನ್ನು ಟ್ಯಾಗ್ ಮಾಡಿ ಒಂದು ಪೋಸ್ಟ್ ಹಾಕಿ. ದಯವಿಟ್ಟು ಇದು ನನ್ನ ಪರ್ಸನಲ್ ರಿಕ್ವೆಸ್ಟ್ ಏಕೆಂದರೆ ನಾವೆಲ್ಲರೂ ಅಕೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೀವಿ. ಆಕೆ ಮರುಳಿ ಮನೆಗೆ ಬರಬೇಕು. ದಯವಿಟ್ಟು ನೀವು ಗಂಗಮ್ಮನ ನೋಡಿದ್ದರೆ ನನಗೆ ತಿಳಿಸಿ ಹುಡುಕುವುದಕ್ಕೆ ನಾನು ತುಂಬಾ ಪ್ರಯತ್ನ ಪಟ್ಟಿದ್ದೀವಿ. ಬಿಬಿಎಂಪಿ ಮತ್ತು ಡಾಗ್ ಬೋನ್ಸ್..ಪ್ರತಿಯೊಂದರಲ್ಲೂ ಹುಡುಕಿದ್ದೀವಿ. ನಮಗೆ ಯಾವ ಮಾಹಿತಿನೂ ಸಿಕ್ಕಿಲ್ಲ. ಬಿಬಿಎಂಪಿಗೆ ನಾವು ಮನವಿ ಮಾಡಿಕೊಳ್ಳುತ್ತೀವಿ ಆಕೆಯನ್ನು ಹುಡುಕಿ ನಮಗೆ ಮಾಹಿತಿ ನೀಡಿ. ಗಂಗಮ್ಮನ ನಾವು ವಾಪಸ್ ಕರೆದುಕೊಂಡು ಬರಬೇಕು' ಎಂದು ಸುಧಾರಾಣಿ ಮನವಿ ಮಾಡಿದ್ದರು.
