Asianet Suvarna News Asianet Suvarna News

15 ದಿನಗಳಿಂದ ನಟಿ ಸುಧಾರಾಣಿ ಮನೆ ನಾಯಿ ಕಾಣೆ; ಬಿಬಿಎಂಪಿ ವಿರುದ್ಧ ಅಸಮಾಧಾನ

ಮನೆಯ ಸದಸ್ಯೆ ಗಂಗಮ್ಮ ಕಳೆದುಕೊಂಡ ನಟಿ ಸುಧಾರಾಣಿ. 15 ದಿನಗಳಿಂದ ಹುಡುಕಿದ್ದರೂ ಸಿಗುತ್ತಿಲ್ಲ ಬಿಬಿಎಂಪಿಗೆ ದೂರು ಕೊಟ್ಟರೂ ಸಹಾಯವಿಲ್ಲ ಎಂದು ಬೇಸರ..... 
 

Kannada actress Sudharani lost pet dog from 15 days shares disappointment towards bbmp vcs
Author
First Published Jan 13, 2023, 10:24 AM IST

1986ರಲ್ಲಿ ಆನಂದ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸುಧಾರಾಣಿ ಕನ್ನಡ ಸಿನಿ ರಸಿಕರಿಗೆ ಮಾಲಾ ಎಂದು ಪರಿಚಯವಾದರು. ಚಿತ್ರರಂಗದ ಪ್ರತಿಯೊಬ್ಬ ಸ್ಟಾರ್ ನಟ-ನಟಿಯರ ಜೊತೆ ಸುಧಾ ರಾಣಿ ಅಭಿನಯಿಸಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಪ್ರಾಜೆಕ್ಟ್‌ ಸಹಿ ಮಾಡುವುದು ಕಡಿಮೆ ಮಾಡಿದ್ದರೂ ಆದರೂ ಸುಧಾರಾಣಿ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿರುವ ಕಾರಣ ಅಲ್ಲೊಂದು ಇಲ್ಲೊಂದು ಸಹಿ ಮಾಡಿ ತಾಯಿ ಅಥವಾ ಅಕ್ಕನ ಪಾತ್ರದಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ್ದರು. ಇನ್‌ಸ್ಟಾಗ್ರಾಂನಲ್ಲಿ 2 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ. 

ನಾಯಿ ಕಾಣಿಸುತ್ತಿಲ್ಲ: 

 ಮಲ್ಲೇಶ್ವರಂನಲ್ಲಿ ವಾಸಿಸುತ್ತಿರುವ ನಟಿ ಸುಧಾರಾಣಿ ತಮ್ಮ ಮನೆಯಲ್ಲಿ ಎರಡು ಗೋಲ್ಡನ್ ರೆಟ್ರೀವರ್ ಶ್ವಾನಗಳನ್ನು ಸಾಕಿದ್ದಾರೆ. ಜೊತೆಗೆ ತಮ್ಮ ನಿವಾಸದ ಸುತ್ತಲ್ಲಿರುವ ಶ್ವಾನಗಳನ್ನು ಅಷ್ಟೇ ಪ್ರೀತಿ ಸಾಕುತ್ತಾರೆ. ತಮ್ಮ ಏರಿಯಾದ ಶ್ವಾನ ಗಂಗಮ್ಮ 15 ದಿನಗಳಿಂದ ಕಾಣೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಬಿಬಿಎಂಪಿಗೆ ದೂರು ಕೊಟ್ಟರೂ ಯಾವ ಉಪಯೋಗವಾಗಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಗಂಗಮ್ಮ ಇಂಡೀ ಜಾತಿ (ಬೀದಿ) ನಾಯಿ ಆಗಿದ್ದು ಕಪ್ಪು- ಬಿಳಿ ಬಣ್ಣದಲ್ಲಿದೆ. 

'ನಮಸ್ಕಾರ ನಿಮ್ಮೆಲ್ಲರಿಗೂ ಗೊತ್ತಿದೆ ನಾನು ಹಲವಾರು ಬಾರಿ ಪೋಸ್ಟ್ ಹಾಕಿರುವೆ. ಸುಮಾರು 15 ದಿನಗಳಿಂದ ನಮ್ಮ ಗಂಗಮ್ಮ ಕಾಣಿಸುತ್ತಿಲ್ಲ ಅಪ್ಪಿತಪ್ಪಿ ಬಿಬಿಎಂಪಿ ಅವರು ನಾಯಿಗಳನ್ನು ರಿಲೋಕೇಟ್ ಮಾಡಿದಾಗ ಗಂಗಮ್ಮ ನಿಮ್ಮ ಏರಿಯಾದಲ್ಲಿ ಕಾಣಿಸಿಕೊಂಡರೆ ನನ್ನನ್ನು ಟ್ಯಾಗ್ ಮಾಡಿ ಒಂದು ಪೋಸ್ಟ್ ಹಾಕಿ. ದಯವಿಟ್ಟು ಇದು ನನ್ನ ಪರ್ಸನಲ್ ರಿಕ್ವೆಸ್ಟ್‌ ಏಕೆಂದರೆ ನಾವೆಲ್ಲರೂ ಅಕೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೀವಿ. ಆಕೆ ಮರುಳಿ ಮನೆಗೆ ಬರಬೇಕು. ದಯವಿಟ್ಟು ನೀವು ಗಂಗಮ್ಮನ ನೋಡಿದ್ದರೆ ನನಗೆ ತಿಳಿಸಿ ಹುಡುಕುವುದಕ್ಕೆ ನಾನು ತುಂಬಾ ಪ್ರಯತ್ನ ಪಟ್ಟಿದ್ದೀವಿ. ಬಿಬಿಎಂಪಿ ಮತ್ತು ಡಾಗ್‌ ಬೋನ್ಸ್‌..ಪ್ರತಿಯೊಂದರಲ್ಲೂ ಹುಡುಕಿದ್ದೀವಿ. ನಮಗೆ ಯಾವ ಮಾಹಿತಿನೂ ಸಿಕ್ಕಿಲ್ಲ. ಬಿಬಿಎಂಪಿಗೆ ನಾವು ಮನವಿ ಮಾಡಿಕೊಳ್ಳುತ್ತೀವಿ ಆಕೆಯನ್ನು ಹುಡುಕಿ ನಮಗೆ ಮಾಹಿತಿ ನೀಡಿ. ಗಂಗಮ್ಮನ ನಾವು ವಾಪಸ್ ಕಡೆದುಕೊಂಡು ಬರಬೇಕು' ಎಂದು ಸುಧಾರಾಣಿ ಮಾತನಾಡಿದ್ದಾರೆ. 

ರಶ್ಮಿಕಾಗೆ ಮಾತ್ರವಲ್ಲ, ಸುಧಾರಾಣಿಗೂ ಇನ್ಸ್ಟಾದಲ್ಲಿ ಮಿಲಿಯನ್‌ಗಟ್ಟಲೆ ಫಾಲೋಯರ್ಸ್!

ಮನೆಯಲ್ಲಿ ಸಾಕುತ್ತಿರುವ ಎರಡು ಶ್ವಾನಗಳಿಗೆ ಮಿಕ್ಕಿ ಅಂಡ್ ಮಿನಿ ಎಂದು ಹೆಸರಿಟ್ಟಿದ್ದಾರೆ. ಅವುಗಳ ಹುಟ್ಟುಹಬ್ಬವನ್ನು ಪ್ರತಿ ವರ್ಷ ಅದ್ಧೂರಿಯಾಗಿ ಆಚರಿಸುತ್ತಾರೆ. ರಕ್ಷಾ ಬಂಧನ ದಿನ ಎಮ್ ಆಂಡ್ ಎಮ್‌ಗೆ ಸುಧಾರಾಣಿ ಮಗಳು ರಾಖಿ ಕಟ್ಟುತ್ತಾರೆ. ಹಬ್ಬದ ದಿನ ಅವುಗಳಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ಹಾಕುತ್ತಾರೆ. ಮನೆಯಲ್ಲಿ ಮಗಳ ಜೊತೆ ಸೇರಿಕೊಂಡು ಮಿಕ್ಕಿ-ಮಿನಿ ಮಾಡುವ ತುಂಟಾಟಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾರೆ. 

ಕಿರುತೆರೆಗೆ ಕಾಲಿಟ್ಟ ಸುಧಾ:

 ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸುಧಾರಾಣಿ ಅಭಿನಯಿಸುತ್ತಿದ್ದಾರೆ. ಅತ್ತೆ ಸೊಸೆ ಜಗಳವನ್ನು ನೋಡಿ ಬೇಸತ್ತು ಹೋಗಿರುವ ವೀಕ್ಷಕರಿಗೆ ಇದರಲ್ಲಿ ಅತ್ತೆ ಸೊಸೆ ಫ್ರೆಂಡ್ಸ್ ಥರ ಇರೋದು ನೋಡಿ ಸಖತ್ ಖುಷಿ ಆಗಿದೆ.ಅತ್ತೆ ಸೊಸೆ ಜಗಳವನ್ನು ನೋಡಿ ಬೇಸತ್ತು ಹೋಗಿರುವ ವೀಕ್ಷಕರಿಗೆ ಇದರಲ್ಲಿ ಅತ್ತೆ ಸೊಸೆ ಫ್ರೆಂಡ್ಸ್ ಥರ ಇರೋದು ನೋಡಿ ಸಖತ್ ಖುಷಿ ಆಗಿದೆ.

Follow Us:
Download App:
  • android
  • ios