ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಇಂದು ಜನ್ಮದಿನ. 60ನೇ ವಸಂತಕ್ಕೆ ಕಾಲಿಟ್ಟಿರುವ ನಟ ಶಿವರಾಜ್ ಕುಮಾರ್ ಅವರಿಗೆ ಶುಭಾಶಯಗಳ ಮಹಾಪೂರವೇ ಬರುತ್ತಿದೆ. ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಶಿವಣ್ಣ ಹುಟ್ಟುಹಬ್ಬಕ್ಕೆ ಪ್ರೀತಿಯವ ವಿಶ್ ಮಾಡುತ್ತಿದ್ದಾರೆ. ಸ್ಯಾಂಡಲ್ ವುಡ್ ಸ್ಟಾರ್ಸ್ ಕಿಚ್ಚ ಸುದೀಪ್, ರಕ್ಷಿತ್ ಶೆಟ್ಟಿ, ಗಣೇಶ್, ಧನಂಜಯ್ ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ವಿಶ್ ಮಾಡಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಇಂದು ಜನ್ಮದಿನ. 60ನೇ ವಸಂತಕ್ಕೆ ಕಾಲಿಟ್ಟಿರುವ ನಟ ಶಿವರಾಜ್ ಕುಮಾರ್ ಅವರಿಗೆ ಶುಭಾಶಯಗಳ ಮಹಾಪೂರವೇ ಬರುತ್ತಿದೆ. ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಶಿವಣ್ಣ ಹುಟ್ಟುಹಬ್ಬಕ್ಕೆ ಪ್ರೀತಿಯವ ವಿಶ್ ಮಾಡುತ್ತಿದ್ದಾರೆ. ಶಿವಣ್ಣನ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿ ಸಾಮಾಜಿಕ ಜಾಲಾತಣದಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ. ಇನ್ನು ಅಭಿಮಾನಿಗಳ ಜೊತೆಗೆ ಸಿನಿಮಾರಂಗದ ಗಣ್ಯರು ಸಹ ಪ್ರೀತಿಯ ಶಿವಣ್ಣನಿಗೆ ವಿಶ್ ಮಾಡುತ್ತಿದ್ದಾರೆ. ಸ್ಯಾಂಡಲ್ ವುಡ್ ಸ್ಟಾರ್ಸ್ ಕಿಚ್ಚ ಸುದೀಪ್, ರಕ್ಷಿತ್ ಶೆಟ್ಟಿ, ಗಣೇಶ್, ಧನಂಜಯ್ ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ವಿಶ್ ಮಾಡಿದ್ದಾರೆ.
ಇನ್ನು ಇಂದು ಹುಟ್ಟುಹಬ್ಬದ ಪ್ರಯುಕ್ತ ಶಿವಣ್ಣ ಕಡೆಯಿಂದ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಸರ್ಪ್ರೈಸ್ ಸಿಕ್ಕಿದೆ. ಶಿವಣ್ಣ ನಟನೆಯ ಅನೇಕ ಸಿನಿಮಾಗಳ ಪೋಸ್ಟರ್ ಮತ್ತು ಟೈಟಲ್ ಲಾಂಚ್ ಆಗಿದೆ. ಅದರಲ್ಲೂ ವಿಶೇಷವಾಗಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಾರಥ್ಯದಲ್ಲಿ ಬರ್ತಿರುವ ಚೊಚ್ಚಲ ಸಿನಿಮಾದಲ್ಲಿ ಶಿವಣ್ಣ ನಾಯಕನಾಗಿ ಮಿಂಚುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ಅಂದಹಾಗೆ ಈ ಸಿನಿಮಾಗೆ 45 ಎಂದು ಟೈಟಲ್ ಇಡಲಾಗಿದೆ. ಇನ್ನು ಎಸ್ ಆರ್ ಕೆ 127, ಗೋಸ್ಟ್ ಸಿನಿಮಾಗಳ ಪೋಸ್ಟರ್ ರಿಲೀಸ್ ಆಗಿವೆ.
ಇಂದು ಹ್ಯಾಟ್ರಿಕ್ ಹೀರೋಗೆ ಗಣ್ಯರು ಮಾಡಿರುವ ವಿಶ್ ಹೀಗಿದೆ.
ಕಿಚ್ಚ ಸುದೀಪ್, ನಿರ್ದೇಶಕ ಶ್ರೀನಿ ಸಾರಥ್ಯದಲ್ಲಿ ಬರ್ತಿರುವ ಘೋಸ್ಟ್ ಸಿನಿಮಾದ ಪೋಸ್ಟರ್ ಶೇರ್ ಮಾಡಿ ವಿಶ್ ಮಾಡಿದ್ದಾರೆ. ಕಿಂಗ್ ಆಫ್ ಆಲ್ ಮಾಸ್ ಪೋಸ್ಟರ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಅಣ್ಣ ಎಂದಿದ್ದಾರೆ.
ಶಿವಣ್ಣನಿಗೆ ಅರ್ಜುನ್ ಜನ್ಯ ಆ್ಯಕ್ಷನ್ ಕಟ್: ಕುತೂಹಲ ಹೆಚ್ಚಿಸಿದ ಟೈಟಲ್ '45'
ಡಾಲಿ ಧನಂಜಯ್ ಕೂಡ ಪ್ರೀತಿಯ ಶಿವಣ್ಣನಿಗೆ ವಿಶ್ ಮಾಡಿದ್ದಾರೆ. ಸುಂದರವಾದ ಫೋಟೋ ಶೇರ್ ಮಾಡಿ, ನಮ್ಮ ಪ್ರೀತಿಯ ಕರುನಾಡ ಚಕ್ರವರ್ತಿ ಶಿವಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದಿದ್ದಾರೆ.
ಹೊಂಬಾಳೆ ಫಿಲ್ಮ್ಸ್, 'ನಮ್ಮೆಲ್ಲರ ಹೆಮ್ಮೆಯ ನಟ, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ತಮ್ಮ ಕಲಾ ಸೇವೆ ಸದಾ ಸ್ಫೂರ್ತಿ. ನಿಮ್ಮ ನಿರಂತರ ಕಲಾಸೇವೆಗಾಗಿ ಹೊಂಬಾಳೆ ಫಿಲಂಸ್ ತಂಡದಿಂದ ಶುಭ ಹಾರೈಕೆಗಳು' ಎಂದು ಶುಭಶಾಯ ತಿಳಿಸಿದ್ದಾರೆ.&
ಇನ್ನು ನಟ ರಕ್ಷಿತ್ ಶೆಟ್ಟಿ ವಿಶ್ ಮಾಡಿ, ಉತ್ತಮ ಆರೋಗ್ಯ ಮತ್ತು ಸಂತೋಷ ಸಿಗಲಿ. ಹುಟ್ಟುಹಬ್ಬದ ಶುಭಾಶಯಗಳು ಶಿವಣ್ಣ ಎಂದು ಹೇಳಿದ್ದಾರೆ.
Happy Birthday Shivarajkumar: 60ನೇ ವಯಸ್ಸಿಗೆ ಕೈಯಲ್ಲಿ 10 ಸಿನಿಮಾಗಳಿರುವ ಹ್ಯಾಟ್ರಿಕ್ ಹೀರೋ!
