ಬೆಂಗಳೂರು(ಏ.  06) ಶೂಟಿಂಗ್ ಹೊರಡುವ ಮೊದಲೇ ಸಿನಿಮಾದ ಇಂಟ್ರಸ್ಟಿಂಗ್ ಟ್ರೇಲರ್ ರಿಲೀಸ್ ಮಾಡಿ ಗಮನ ಸೆಳೆದ  'ಕೊಡೆಮುರುಗ ಈ ವಾರ ತೆರೆಗೆ ಬರಲಿದೆ.  ಸುಬ್ರಮಣ್ಯ ಪ್ರಸಾದ್ ನಿರ್ದೇಶನದ 'ಕೊಡೆಮುರುಗ' ಎಂಬ  ಏಪ್ರಿಲ್ 9ರಂದು ಬಿಡುಗಡೆಯಾಗಲಿದೆ.  ರವಿಕುಮಾರ್, ಕೆ ಆರ್ ಕೆ ಬ್ಯಾನರ್ ನಡಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಈ ಚಿತ್ರದಲ್ಲಿ ಸುಬ್ರಮಣ್ಯ ಪ್ರಸಾದ್ ಮತ್ತು ಮುನಿಕೃಷ್ಣ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪಲ್ಲವಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾ ಟ್ರೈಲರ್ ಬಿಡುಗಡೆ ಮಾಡಲಾಗಿತ್ತು. ಈ ಟ್ರೈಲರ್ ಗೆ ಸಿನಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳು ದೊರೆತಿದ್ದವು. ರಾಕ್ ಲೈನ್ ಸುಧಾಕರ್, ಸ್ವಾತಿ ಗುರುದತ್, ಕುರಿ ಪ್ರತಾಪ್, ತುಮಕೂರು ಮೋಹನ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಯುವರತ್ನ ಹೇಗಿದೆ? ಜೋಗಿ ವಿಮರ್ಶೆ

ಈಗಾಗಲೇ ಕಲರ್​ಫುಲ್ ಸ್ಯಾಂಪಲ್​​ಗಳ ಮೂಲಕ ಸಿನಿರಸಿಕರ ಮನಗೆದ್ದಿರುವ ಈ ಚಿತ್ರ ನಿರೀಕ್ಷೆ ಹುಟ್ಟುಹಾಕಿದೆ. ಏಪ್ರಿಲ್ 9ಕ್ಕೆ ‘ಕೊಡೆಮುರುಗ’ನ ದರ್ಶನ ಚಿತ್ರಮಂದಿರದಲ್ಲಿ ಆಗೋದು ಫಿಕ್ಸ್ ಆಗಿದೆ.  ಇದೊಂದು ಕಾಮಿಡಿ ಎಂಟಟೈನ್ಮೆಂಟ್ ಸಿನಿಮಾವಾಗಿದ್ದು, ಸಾಕಷ್ಟು ಇಂಟ್ರಸ್ಟಿಂಗ್​ ಫ್ಯಾಕ್ಟರ್​​ಗಳನ್ನು ಈ ಸಿನಿಮಾ ಒಳಗೊಂಡಿದೆ. ನಿರ್ದೇಶಕ ಸುಬ್ರಮಣ್ಯ ಪ್ರಸಾದ್​​ಗಿದು ಮೊದಲ ಸಿನಿಮಾ. ಹಲವು ಧಾರಾವಾಹಿಗಳಲ್ಲಿ ದುಡಿದ ಅನುಭವವುಳ್ಳ ಇವರು ಮೊದಲ ಬಾರಿ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಎಲ್ಲಾ ಜವಾಬ್ದಾರಿಯನ್ನು ಹೊತ್ತಿರುವ ಇವರು ನಟನೆ ಕೂಡ ಮಾಡಿದ್ದಾರೆ.

ಈಗಾಗಲೇ ಸಖತ್ ಬಝ್ ಕ್ರಿಯೇಟ್​​ ಮಾಡಿರುವ ಈ ಸಿನಿಮಾ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಲಿದೆ ಎನ್ನುತ್ತೆ ಚಿತ್ರತಂಡ. ದಿವಂಗತ ನಟ ರಾಕ್​ಲೈನ್ ಸುಧಾಕರ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಸ್ವಾತಿ ಗುರುದತ್, ಕುರಿ ಪ್ರತಾಪ್, ತುಮಕೂರು ಮೋಹನ್ ಸೇರಿದಂತೆ ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ. ಕೆ.ಆರ್.ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು ಕೆ.ರವಿಕುಮಾರ್ ಹಾಗೂ ಅಶೋಕ್ ಶಿರಾಲಿ ಈ ಸಿನಿಮಾ ನಿರ್ಮಾಪಕರು. ಎಂ.ಎಸ್. ತ್ಯಾಗರಾಜ ಸಂಗೀತ ಸಂಯೋಜನೆ, ರುದ್ರಮುನಿ ಬೆಳಗೆರೆ ಛಾಯಾಗ್ರಹಣ ಈ ಕಾಮಿಡಿ ಎಂಟಟೈನ್ಮೆಂಟ್ ಸಿನಿಮಾಕ್ಕಿದೆ.