Asianet Suvarna News Asianet Suvarna News

ನಾನು ಅವನಲ್ಲ ಅವಳು ಚಿತ್ರಕ್ಕೆ ಭಾರಿ ಟಿಆರ್‌ಪಿ!

ಸಂಚಾರಿ ವಿಜಯ್ ಅಭಿನಯದ 'ನಾನು ಅವನಲ್ಲ ಅವಳು' ಸಿನಿಮಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿ ಅತಿ ಹೆಚ್ಚು ಟಿಆರ್‌ಪಿ ಗಳಿಸಿದೆ.

Star Suvarna channel gets highest TRP for Sanchari Vijay Nanu Avanalla Avalu film vcs
Author
Bangalore, First Published Jul 30, 2021, 1:16 PM IST
  • Facebook
  • Twitter
  • Whatsapp

ಜು.18ರಂದು ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಬಿ.ಎಸ್‌. ಲಿಂಗದೇವರು ನಿರ್ದೇಶನದ, ಸಂಚಾರಿ ವಿಜಯ್‌ ನಟನೆಯ ‘ನಾನು ಅವನಲ್ಲ ಅವಳು’ ಚಿತ್ರಕ್ಕೆ ಭಾರಿ ಟಿಆರ್‌ಪಿ ಬಂದಿದೆ. ಒಟ್ಟಾರೆಯಾಗಿ 5.4 ಟಿಆರ್‌ಪಿ ಬಂದಿದ್ದು, ನಗರ ಪ್ರದೇಶದಲ್ಲಿ 6.2 ಟಿಆರ್‌ಪಿ ಸಿಕ್ಕಿದೆ. ಪ್ರೇಕ್ಷಕರು ಭಾರಿ ಸಂಖ್ಯೆಯಲ್ಲಿ ಈ ಸಿನಿಮಾವನ್ನು ನೋಡಿ, ಇಹಲೋಕ ತ್ಯಜಿಸಿದ ಸಂಚಾರಿ ವಿಜಯ್‌ ಅವರಿಗೆ ಸಿನಿಮಾ ನಮನ ಸಲ್ಲಿಸಿದ್ದಾರೆ.

ನಟ ಸಂಚಾರಿ ವಿಜಯ್‌ಗೆ ಗೌರವ ಸಲ್ಲಿಸಿದ ಅಮೆರಿಕ ಫ್ರಾಂಕ್ಲಿನ್ ಥಿಯೇಟರ್‌!

ಲಿವಿಂಗ್‌ ಸ್ಮೈಲ್‌ ವಿದ್ಯಾ ಅವರ ಆತ್ಮಕಥೆ ಆಧರಿಸಿದ ‘ನಾನು ಅವನಲ್ಲ ಅವಳು’ ಚಿತ್ರದ ನಟನೆಗೆ ಸಂಚಾರಿ ವಿಜಯ್‌ ಅವರಿಗೆ ರಾಷ್ಟ್ರ ಪ್ರಶಸ್ತಿ ಗೌರವ ಸಂದಿತ್ತು. ಮಂಗಳಮುಖಿ ಸಮುದಾಯದ ಸಂಕಷ್ಟ, ಸಂವೇದನೆಯನ್ನು ಜನರಿಗೆ ಕಾಡುವಂತೆ ತೋರಿಸಿದ್ದಕ್ಕೆ ಮಂಗಳಮುಖಿಯರ ಇಡೀ ಸಮುದಾಯ ಸಂಚಾರಿ ವಿಜಯ್‌ ಅವರಿಗೆ, ಚಿತ್ರತಂಡಕ್ಕೆ ಮೆಚ್ಚುಗೆ ಸಲ್ಲಿಸಿತ್ತು. ಈ ಸಿನಿಮಾ ಯೂಟ್ಯೂಬ್‌ನಲ್ಲಿ ಪ್ರಸಾರವಾಗಿದ್ದರೂ ಜನರು ಈಗ ಟಿವಿಯಲ್ಲೂ ನೋಡಿ ಮೆಚ್ಚುಗೆ ಸಲ್ಲಿಸಿದ್ದಾರೆ. ಈ ಸಿನಿಮಾವನ್ನು ರವಿ ಆರ್‌ ಗರಣಿ ನಿರ್ಮಿಸಿದ್ದರು.

‘ನಾನು ಅವನಲ್ಲ ಅವಳು’ ಸಿನಿಮಾಗೆ ಹೆಚ್ಚು ಟಿಆರ್‌ಪಿ ಬಂದ ವಿಚಾರ ತಿಳಿದು ಸಂತೋಷವಾಯಿತು. ಜನರು ಸಿನಿಮಾದ ಮೇಲಿನ ಇದೇ ಪ್ರೀತಿಯನ್ನು ಸಂಚಾರಿ ವಿಜಯ್‌ ಇರುವಾಗಲೇ ತೋರಿಸಿದ್ದಿದ್ದರೆ ಇನ್ನೂ ಜಾಸ್ತಿ ಖುಷಿಯಾಗಿರುತ್ತಿತ್ತು. ಹೆಚ್ಚು ಜನ ಈಗ ಸಿನಿಮಾ ನೋಡಿದ್ದು ಸಂಚಾರ್‌ ವಿಜಯ್‌ ಅವರ ಶ್ರದ್ಧೆ, ಪ್ರತಿಭೆ, ವ್ಯಕ್ತಿತ್ವಕ್ಕೆ ಸಂದ ಗೌರವ ಎಂದು ನಾನಂದುಕೊಳ್ಳುತ್ತೇನೆ- ಬಿಎಸ್‌ ಲಿಂಗದೇವರು, ನಿರ್ದೇಶಕ

Follow Us:
Download App:
  • android
  • ios