Sruthi Hariharan: ರಕ್ಷಿತ್‌ ಶೆಟ್ಟಿ ನಿರ್ಮಾಣದ ಹೊಸ ಸಿನಿಮಾ ಸ್ಟ್ರಾಬೆರಿ

ರಕ್ಷಿತ್‌ ಶೆಟ್ಟಿ ತಮ್ಮ ಪರಂವಾಃ ಸ್ಪಾಟ್‌ಲೈಟ್‌ ಸಂಸ್ಥೆಯ ಮೂಲಕ ಹೊಸ ಸಿನಿಮಾ ನಿರ್ಮಿಸುತ್ತಿದ್ದಾರೆ. ಅದರ ಹೆಸರು ‘ಸ್ಟ್ರಾಬೆರಿ’. ಅರ್ಜುನ್‌ ಲೂಯಿಸ್‌ ನಿರ್ದೇಶನದ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಶ್ರುತಿ ಹರಿಹರನ್‌ ನಟಿಸುತ್ತಿದ್ದಾರೆ.

Sruthi Hariharan Starrer New Movie Strawberry Produced by Rakshit Shetty Paramvah Spotlight Production gvd

ರಕ್ಷಿತ್‌ ಶೆಟ್ಟಿ (Rakshit Shetty) ತಮ್ಮ ಪರಂವಾಃ ಸ್ಪಾಟ್‌ಲೈಟ್‌ ಸಂಸ್ಥೆಯ (Paramvah Spotlight Production) ಮೂಲಕ ಹೊಸ ಸಿನಿಮಾ ನಿರ್ಮಿಸುತ್ತಿದ್ದಾರೆ. ಅದರ ಹೆಸರು ‘ಸ್ಟ್ರಾಬೆರಿ’ (Strawberry). ಅರ್ಜುನ್‌ ಲೂಯಿಸ್‌ (Arjun Lewis) ನಿರ್ದೇಶನದ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಶ್ರುತಿ ಹರಿಹರನ್‌ (Sruthi Hariharan) ನಟಿಸುತ್ತಿದ್ದಾರೆ. ದಿಯಾ ಖ್ಯಾತಿಯ ದೀಕ್ಷಿತ್‌ ಶೆಟ್ಟಿ, ವಿನೀತ್‌ ಕುಮಾರ್‌, ವಿಜಯ್‌ ಮಯ್ಯ ಚಿತ್ರದಲ್ಲಿ ಇದ್ದಾರೆ. 

ನಿರ್ದೇಶಕ ಅರ್ಜುನ್‌ ಲೂಯಿಸ್‌, ‘ಚಿತ್ರಕ್ಕೆ ನಿರ್ಮಾಪಕರು ಸಿಗದೇ ಒದ್ದಾಟದಲ್ಲಿದ್ದೆ. ರಾಜ್‌ ಬಿ ಶೆಟ್ಟಿ ನನ್ನ ಕ್ಲೋಸ್‌ ಫ್ರೆಂಡ್‌. ಅವರ ಮೂಲಕ ರಕ್ಷಿತ್‌ ಶೆಟ್ಟಿ ಪರಿಚಯವಾಯ್ತು. ಮೊದಲ ನರೇಶನ್‌ಗೆ ರಕ್ಷಿತ್‌ ಸ್ಕ್ರಿಪ್ಟ್‌ ಓಕೆ ಮಾಡಿದ್ದರು. ಅವರ ಸಪೋರ್ಟ್‌ ದೊಡ್ಡದು. ಈ ಚಿತ್ರದ ಟೈಟಲ್‌ ಸ್ಟ್ರಾಬೆರಿ. ಸೆಕ್ಸ್‌ ವರ್ಕರ್‌ ಆಗಿರುವ ನಮ್ಮ ಸಿನಿಮಾ ನಾಯಕಿಯ ಹೆಸರು. ಲೈಂಗಿಕ ಕಾರ್ಯಕರ್ತೆಯೊಬ್ಬರ ಕತೆ ಈ ಸಿನಿಮಾಗೆ ಪ್ರೇರಣೆ. ಬಾಲ್ಯದಲ್ಲೇ ತಾಯಿ ಕಳೆದುಕೊಂಡ ಚಿತ್ರದ ನಾಯಕಿ ತಾಯಿಯ ಪ್ರೀತಿಯ ಭರವಸೆ ಹಿಂದೆ ಹೋಗುವ ಕಥೆ ಇರುವ ಈ ಚಿತ್ರವನ್ನು ಓಟಿಟಿಗೆ ಅಂತಲೇ ಮಾಡಿದ್ದೇವೆ. ಮುಂದೆ ಗೊತ್ತಿಲ್ಲ’ ಎನ್ನುತ್ತಾರೆ.

777 Charlie: ರಕ್ಷಿತ್ ಶೆಟ್ಟಿ ಚಿತ್ರಕ್ಕೆ ಯು ಸರ್ಟಿಫಿಕೇಟ್ ನಿರೀಕ್ಷೆಯಲ್ಲಿದ್ದೇವು: ಕಿರಣ್‌ರಾಜ್

ಇನ್ನು ರಕ್ಷಿತ್‌ ಶೆಟ್ಟಿ ಅಭಿನಯದ '777 ಚಾರ್ಲಿ' (777 Charlie) ದೊಡ್ಡಮಟ್ಟದ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದಲ್ಲಿ ನಾಯಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಈ ಮೊದಲು ಬಿಡುಗಡೆ ಆಗಿದ್ದ ಟೀಸರ್​, ಪೋಸ್ಟರ್, ಸಾಂಗ್​​​ಗಳಿಂದ ಅಭಿಮಾನಿಗಳಿಗೆ ಕೌತುಕ ಹೆಚ್ಚಿತ್ತು. ಇದೀಗ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ (Censor Board) ಯು/ಎ ಪ್ರಮಾಣಪತ್ರ (U/A Certificate) ಸಿಕ್ಕಿದೆ. ಎಲ್ಲವೂ ಅಂದಕೊಂಡಂತೆ ಹಾಗಿದ್ದರೇ '777 ಚಾರ್ಲಿ' ಡಿಸೆಂಬರ್ 31ರಂದು ರಿಲೀಸ್ ಆಗಬೇಕಿತ್ತು, ಆದರೆ ಚಿತ್ರದ ಕೆಲಸಗಳು ವಿಳಂಬವಾಗಿರುವುದರಿಂದ ಸಿನಿಮಾ ರಿಲೀಸ್ ದಿನಾಂಕವನ್ನು ಚಿತ್ರತಂಡ ಮುಂದೂಡಿತ್ತು.

'777 ಚಾರ್ಲಿ' ಚಿತ್ರವು ದಾರಿ ತಪ್ಪಿದ ಶ್ವಾನ ಚಾರ್ಲಿ ಮತ್ತು ಅವನ ಸಹಚರ ಧರ್ಮ (ರಕ್ಷಿತ್ ಶೆಟ್ಟಿ ಪಾತ್ರ)ದ ಸುತ್ತದ ಕಥೆಯನ್ನು ಅನುಸರಿಸುತ್ತದೆ. ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಜತೆಗೆ ಶ್ವಾನ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಹೈಲೈಟ್‌ಗಳಲ್ಲಿ ಒಂದು. ಶ್ವಾನ ಪಾತ್ರದ ಚಿತ್ರೀಕರಣಕ್ಕಾಗಿಯೇ ಚಿತ್ರತಂಡ ಸಾಕಷ್ಟು ಸಮಯವನ್ನು ತೆಗೆದುಕೊಂಡಿದ್ದಾರೆ. ಯುವ ನಿರ್ದೇಶಕ ಕಿರಣ್‌ ರಾಜ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿಯ ಜೊತೆಗೆ ಲ್ಯಾಬ್ರಡಾರ್‌ ನಾಯಿ ಪೂರ್ಣ ಪ್ರಮಾಣದ ಪಾತ್ರದಲ್ಲಿ ಚಿತ್ರದಲ್ಲಿ ಕಾಣಿಸಿಕೊಂಡಿದೆ. 

ಸಪ್ತ ಸಾಗರದಾಚೆ ಎಲ್ಲೋ: Rakshit Shetty - Rukmini ರೊಮ್ಯಾಂಟಿಕ್ ಫೋಟೋ ವೈರಲ್!

ಇನ್ನು '777 ಚಾರ್ಲಿ' ಚಿತ್ರವನ್ನು ಜಿಎಸ್ ಗುಪ್ತಾ ಮತ್ತು ರಕ್ಷಿತ್ ಶೆಟ್ಟಿ ಅವರ ಪರಮಃ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಚಿತ್ರಕ್ಕೆ ನೋಬಿನ್ ಪಾಲ್ ಸಂಗೀತ ಸಂಯೋಜಿಸಿದ್ದಾರೆ ಮತ್ತು ಅರವಿಂದ್ ಕಶ್ಯಪ್ ಕ್ಯಾಮೆರಾ ಕೈಚಳಕವಿದೆ. ಚಿತ್ರದಲ್ಲಿ  ರಕ್ಷಿತ್ ಶೆಟ್ಟಿಗೆ ಸಂಗೀತಾ ಶೃಂಗೇರಿ (Sangeetha Sringeru)ನಾಯಕಿಯಾಗಿ ಕಾಣಿಸಿಕೊಂಡಿದ್ದು, ಉಳಿದಂತೆ ರಾಜ್‌ ಬಿ. ಶೆಟ್ಟಿ, ಡ್ಯಾನಿಶ್‌ ಸೇಠ್, ಬಾಬಿ ಸಿಂಹ, ಬೇಬಿ ಶಾರ್ವರಿ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರವು ತೆರೆಕಾಣಲಿದೆ.
 

Latest Videos
Follow Us:
Download App:
  • android
  • ios