Asianet Suvarna News Asianet Suvarna News

Old Monk: ಪರಭಾಷೆ ಸಿನಿಮಾಗಳಿಂದ ನಮ್ಮ ಚಿತ್ರಕ್ಕೆ ಥಿಯೇಟರ್ ಸಿಕ್ತಿಲ್ಲ: ಶ್ರೀನಿ ಟ್ವೀಟ್

'ಓಲ್ಡ್ ಮಾಂಕ್' ಚಿತ್ರಕ್ಕೆ ಸಿನಿರಸಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ ಚಿತ್ರಮಂದಿರಗಳು ಸಿಗದೇ ನಷ್ಟವನ್ನು ಅನುಭವಿಸುವಂತಾಗಿದೆ. ಈ ಬಗ್ಗೆ ಸ್ವತಃ ಶ್ರೀನಿ​ ಅಸಮಾಧಾನವನ್ನು ವ್ಯಕ್ತಡಿಸಿದ್ದಾರೆ.

Srini Starrer and Direction Old Monk Film Facing Theater Problems Because of other Language Movies gvd
Author
Bangalore, First Published Mar 5, 2022, 4:35 PM IST

ಸ್ಯಾಂಡಲ್‌ವುಡ್‌ನ ಶ್ರೀನಿ (Srini) ನಿರ್ದೇಶಿಸಿ, ನಾಯಕನಾಗಿ ನಟಿಸುತ್ತಿರುವ 'ಓಲ್ಡ್ ಮಾಂಕ್' (Old Monk) ಚಿತ್ರ ಕಳೆದ ವಾರ ಬಿಡುಗಡೆಯಾಗಿ ಪ್ರೇಕ್ಷಕರ ಮನಸ್ಸನನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಶ್ರೀನಿ ಅವರ ಚಿತ್ರವೆಂದರೆ ವಿಭಿನ್ನವಾದ ಏನನ್ನಾದರೂ ನಿರೀಕ್ಷಿಸಬಹುದು ಎಂಬುದರಲ್ಲಿ ಸಂಶಯವಿಲ್ಲ. ಏಕೆಂದರೆ ಗುಣಮಟ್ಟದ ಸಿನಿಮಾಗಳನ್ನು ನೀಡಿದ ಹೆಗ್ಗಳಿಕೆ ಅವರದ್ದು. ಇದೀಗ ಈ ಚಿತ್ರಕ್ಕೆ ಸಿನಿರಸಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ ಚಿತ್ರಮಂದಿರಗಳು (Theater)​ ಸಿಗದೇ ನಷ್ಟವನ್ನು ಅನುಭವಿಸುವಂತಾಗಿದೆ. ಈ ಬಗ್ಗೆ ಸ್ವತಃ ಶ್ರೀನಿ​ ಅಸಮಾಧಾನವನ್ನು ವ್ಯಕ್ತಡಿಸಿದ್ದಾರೆ.

'ಓಲ್ಡ್ ಮಾಂಕ್' ಸಿನಿಮಾ ಬಿಡುಗಡೆಯಾಗಿ ಎರಡು ವಾರ ಆಗುತ್ತಿದ್ದು, ಚಿತ್ರತಂಡಕ್ಕೆ ದೊಡ್ಡ ಸಂಕಷ್ಟ ಎದುರಾಗಿದೆ. ಚಿತ್ರವನ್ನು ವೀಕ್ಷಿಸಲು ಪ್ರೇಕ್ಷಕರು ಬಯಸಿದರೂ ಕೂಡ, ಅವರಿಗೆ ಸಿನಿಮಾ ತೋರಿಸಲು ಸಾಧ್ಯವಾಗುತ್ತಿಲ್ಲ. ಕಾರಣ ಕರ್ನಾಟಕದ ಹಲವೆಡೆ 'ಓಲ್ಡ್ ಮಾಂಕ್' ಚಿತ್ರಕ್ಕೆ ಚಿತ್ರಮಂದಿರ ಸಿಗುತ್ತಿಲ್ಲವಂತೆ. ಪರಭಾಷೆ ಚಿತ್ರಗಳಿಗೆ ಥಿಯೇಟರ್ ನೀಡಿರುವ ಕಾರಣಕ್ಕೆ ಕನ್ನಡದ ಈ ಚಿತ್ರಕ್ಕೆ ಸುಲಭವಾಗಿ ಥಿಯೇಟರ್‌ಗಳು ದೊರೆಯುತ್ತಿಲ್ಲವಂತೆ. ಈ ವಿಚಾರವನ್ನು ಚಿತ್ರದ ನಿರ್ದೇಶಕ, ನಟ ಶ್ರೀನಿ ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

Old Monk ಚಿತ್ರವನ್ನು ಥಿಯೇಟರ್‌ನಲ್ಲೇ ಗೆಲ್ಲಿಸಿ: ಶ್ರೀನಿ

ಈ ಬಗ್ಗೆ ಟ್ವೀಟ್ಟರ್‌ನಲ್ಲಿ (Twitter) 'ನನಗೆ ನಿಜವಾಗಲೂ ಬೇಜಾರಾಗೋದು, ಬೇರೆ ಭಾಷೆ ಸಿನಿಮಾ ರಿಲೀಸ್ ಆಗ್ತಿದೆ ಅನ್ನೋದಲ್ಲ. ಆದ್ರೆ ಬೇರೆ ಭಾಷೆ ಸಿನಿಮಾಗಳಿಗೆ ಸಿಗೋ ಹೆಚ್ಚಿನ ಸಂಖ್ಯೆಯ ಶೋಗಳು, ಥಿಯೇಟರ್‌ಗಳು ನಮಗೆ ಸಿಗಲ್ಲ. ಅದಕ್ಕೆ ತಕ್ಕಂತೆ ಸಾಕಷ್ಟು ಜನರು ಬೇರೆ ಭಾಷೆ ಸಿನಿಮಾ ನೋಡುವುದಕ್ಕೆ ಮೊದಲು ಪ್ರಾಮುಖ್ಯತೆ ಕೊಡುತ್ತಾರೆ. ತುಂಬಾ ಜನ ಕನ್ನಡ ಸಿನಿಮಾ ಒಂದು ಚೆನ್ನಾಗಿದೆ ಅಂತ ಹೇಳಿದ ಮೇಲೆ ನಮ್ಮ ಕನ್ನಡ ಸಿನಿಮಾ ನೋಡ್ತಾರೆ. ಆದ್ರೆ ಅಷ್ಟರಲ್ಲಿ ಶೋಗಳು ಕಡಿಮೆ ಆಗುತ್ತೆ. ಚಿತ್ರಮಂದಿರಗಳಿಂದ ಚಿತ್ರ ಎತ್ತಂಗಡಿ ಆಗುತ್ತೆ. ಎಲ್ಲರಲ್ಲೂ ಒಂದು ಮನವಿ ಏನ್ ಅಂದರೆ, ನಾವು ಕೂಡ ಒಳ್ಳೆ ಸಿನಿಮಾ ಮಾಡುವ ಎಲ್ಲಾ ಕೆಪಾಸಿಟಿ ಇದೆ. ಮೊದಲ ಪ್ರಾಮುಖ್ಯತೆ ದಯಮಾಡಿ ಕನ್ನಡ ಸಿನಿಮಾಗಳನ್ನು ನೋಡಿ' ಎಂದು ಶ್ರೀನಿ ಟ್ವೀಟ್ ಮಾಡಿದ್ದಾರೆ.

Srini Starrer and Direction Old Monk Film Facing Theater Problems Because of other Language Movies gvd

ಮಾತ್ರವಲ್ಲದೇ 'ಓಲ್ಡ್ ಮಾಂಕ್ ಚಿತ್ರವನ್ನು ಮೊದಲ ವಾರದಲ್ಲೇ ನೋಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಅದೇ ಟೈಮ್‌ನಲ್ಲಿ ಬೇರೆ ಭಾಷೆ ಸಿನಿಮಾಗಳನ್ನ ನೋಡಿದವರಿಗೆ ಮನವಿ. ಕಡೆ ಪಕ್ಷ ಈ ವಾರ ಆದ್ರೂ ನಮ್ಮ ಸಿನಿಮಾ ನೋಡಿ, ಇನ್ನು ಹೆಚ್ಚು ಥೀಯೇಟರ್‌ಗಳಲ್ಲಿ ಒಂದು ಒಳ್ಳೆಯ ಕನ್ನಡ ಚಿತ್ರವನ್ನು ಗೆಲ್ಲಲು ಅವಕಾಶ ಮಾಡಿಕೊಡಿ' ಎಂದು ಟ್ವೀಟ್ (Tweet) ಮಾಡುವ ಮೂಲಕ ಮನವಿ ಮಾಡಿದ್ದಾರೆ. ಇನ್ನು ಈ ಚಿತ್ರಕ್ಕೆ ಅದಿತಿ ಪ್ರಭುದೇವ (Aditi Prabhudeva) ನಾಯಕಿಯಾಗಿದ್ದಾರೆ. 'ರಂಗನಾಯಕಿ' (Ranganayaki) ಚಿತ್ರದ ನಂತರ ಮತ್ತೊಮ್ಮೆ ಶ್ರೀನಿ ಜೊತೆ ತೆರೆ ಮೇಲೆ ಜತೆಯಾಗುತ್ತಿದ್ದಾರೆ. 

ಜನ ಮೆಚ್ಚಿದ್ದಾರೆ, ಥೇಟರ್ ಸಂಖ್ಯೆ ಹೆಚ್ಚಾಗ ಬೇಕು; Old Monk ನಿರ್ದೇಶನ ಶ್ರೀನಿ ಮನವಿ

ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ ಹಲವು ವರ್ಷಗಳ ನಂತರ ಹಿರಿಯ ನಟ ಕಲಾತಪಸ್ವಿ ರಾಜೇಶ್ (Kalatapasvi Rajesh) ಬಣ್ಣ ಹಚ್ಚಿದ್ದಾರೆ. ಜೊತೆಗೆ ಸುಜಯ್​ ಶಾಸ್ತ್ರಿ, ಎಸ್​. ನಾರಾಯಣ್​, ಸುದೇವ್​ ನಾಯರ್​, ಸಿಹಿ-ಕಹಿ ಚಂದ್ರು ಮೊದಲಾದವರು ತೆರೆಹಂಚಿಕೊಂಡಿರುವ ಈ ಚಿತ್ರಕ್ಕೆ ಸಿದ್ಧಿ ಎಂಟರ್​ಟೇನ್ಮೆಂಟ್ಸ್​, ಎಸ್​ ಒರಿಜಿನಲ್ಸ್​ ಬಂಡವಾಳ ಹೂಡಿದೆ. ಇನ್ನು ಈ ಚಿತ್ರವನ್ನು ನೋಡಿ ಮೋಹಕ ತಾರೆ ರಮ್ಯಾ (Ramya) ಮೆಚ್ಚುಗೆ ವ್ಯಕ್ತಪಡಿಸಿದ್ದರು. 'ಓಲ್ಡ್ ಮಾಂಕ್' ನೋಡಿ ಕಿಕ್ ತಗೊಳ್ಳಿ, ನಾನು ಸಖತ್ತಾಗಿ ಎಂಜಾಯ್ ಮಾಡಿದೆ ಅಂದಿದ್ದು, ಜೊತೆಗೆ ಶ್ರೀನಿ ಅವರ ನಟನೆಗೆ ಶಹಬ್ಬಾಸ್​ಗಿರಿ ನೀಡಿದ್ದರು. 
 

Latest Videos
Follow Us:
Download App:
  • android
  • ios