Old Monk ಅಂದ್ರೆ ನಮಗಿಷ್ಟ: ಫೆ.25ರಂದು ಶ್ರೀನಿ-ಅದಿತಿ ಸಿನಿಮಾ ತೆರೆಗೆ

ಶ್ರೀನಿ ನಟಿಸಿ ನಿರ್ದೇಶನ ಮಾಡಿರುವ 'ಓಲ್ಡ್‌ಮಾಂಕ್' ಚಿತ್ರ ಇದೇ ಫೆ.25ರಂದು ತೆರೆಗೆ ಬರುತ್ತಿದೆ. ಚಿತ್ರದ ಆರಂಭದಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಸಿನಿಮಾ ಗಮನ ಸೆಳೆಯುತ್ತಿರುವುದಕ್ಕೆ ಕಾರಣ ಚಿತ್ರದ ಪ್ರಚಾರದ ತಂತ್ರಗಳು.

Srini Aditi Prabhudeva Starrer Old Monk Film will Release on February 25th gvd

ಶ್ರೀನಿ (Srini) ನಟಿಸಿ ನಿರ್ದೇಶನ ಮಾಡಿರುವ 'ಓಲ್ಡ್‌ಮಾಂಕ್' (Old Monk) ಚಿತ್ರ ಇದೇ ಫೆ.25ರಂದು ತೆರೆಗೆ ಬರುತ್ತಿದೆ. ಚಿತ್ರದ ಆರಂಭದಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಸಿನಿಮಾ ಗಮನ ಸೆಳೆಯುತ್ತಿರುವುದಕ್ಕೆ ಕಾರಣ ಚಿತ್ರದ ಪ್ರಚಾರದ ತಂತ್ರಗಳು. ಸಿನಿಮಾ ಪ್ರಚಾರಕ್ಕೆ ಹೊಸ ಮಾರ್ಗ ಸೃಷ್ಟಿಸಿರುವ 'ಓಲ್ಡ್‌ಮಾಂಕ್' ಚಿತ್ರವನ್ನು ನೋಡಲು ಪ್ರೇಕ್ಷಕರು ಕೂಡ ಕುತೂಹಲದಿಂದ ಕಾಯುತ್ತಿದ್ದಾರೆ. ಚಿತ್ರದಲ್ಲಿ ಶ್ರೀನಿ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ (Aditi Prabhudeva) ಕಾಣಿಸಿಕೊಂಡಿದ್ದಾರೆ. 

ಈ ಎಲ್ಲದರ ನಡುವೆ ಈ ಚಿತ್ರದ ತಾರಾಬಳಗವೇ ಒಂದು ವಿಶೇಷ. ಹಿರಿಯ ನಿರ್ದೇಶಕ, ನಟ ಎಸ್. ನಾರಾಯಣ್ (S Narayanm) ನಾಯಕನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ ಸಿಹಿಕಹಿ ಚಂದ್ರು (SihiKahi Chandru) ಅವರದ್ದೂ ಸಹ ಕತೆಗೆ ಪೂರಕವಾದ ಪಾತ್ರ. ಇವರಿಬ್ಬರ ಜತೆಗೆ ಅಶೋಕ್ ಹೆಗಡೆ (Ashok Hegade) ಅವರ ಕ್ಯಾರೆಕ್ಟರ್ ಹೇಗಿರುತ್ತದೆ ಎಂಬುದು ಮತ್ತೊಂದು ಕುತೂಹಲ. ಹೀಗಾಗಿ ಚಿತ್ರದಲ್ಲಿ ನಟಿಸಿರುವ ಪ್ರಮುಖ ಪೋಷಕ ಪಾತ್ರಧಾರಿಗಳು 'ಓಲ್ಡ್‌ಮಾಂಕ್' ಚಿತ್ರದ ಕುರಿತು ಹೇಳಿರುವ ಮಾತುಗಳು ಇಲ್ಲಿವೆ.

ನಿರ್ದೇಶಕ S Narayanಗೆ ಅವಮಾನ, ವಿಡಿಯೋದಲ್ಲಿ ದುಃಖ ತೋಡಿಕೊಂಡ ನಟ!

ಕತೆಗೆ ಪೂರಕವಾದ ಪಾತ್ರ ನನ್ನದು: ಸಿಹಿ ಕಹಿ ಚಂದ್ರು
ನನ್ನದು ನಾಯಕಿ ತಂದೆಯ ಪಾತ್ರ. ನನಗೂ ನಾಯಕನಿಗೂ ಪಂದ್ಯ ನಡೆಯುತ್ತದೆ. ಅದರಲ್ಲಿ ನಾನು ಸೋಲುತ್ತೇನೆ. ಆದರೆ, ನನ್ನ ಮಗಳು ನಾಯಕನನ್ನು ಪ್ರೀತಿಸುತ್ತಾಳೆ. ಜತೆಗೆ ನನ್ನ ತಂದೆಯನ್ನು ನೀನು ಇಂಪ್ರೆಸ್ ಮಾಡಬೇಕು ಎನ್ನುವ ಷರತ್ತು ನಾಯಕನಿಗೆ ಹಾಕುತ್ತಾಳೆ. ನನ್ನ ಇಂಪ್ರೆಸ್ ಮಾಡುವ ನಾಯಕ ಏನೆಲ್ಲ ಸಾಹಸಗಳನ್ನು ಮಾಡುತ್ತಾನೆ ಎಂಬುದು ಚಿತ್ರದ ಕತೆ. ನನ್ನ ಪಾತ್ರಕ್ಕೆ ಎರಡು ರೀತಿಯ ಮುಖ ಇದೆ. ಗಂಭೀರ ಮತ್ತು ಹಾಸ್ಯದ ನೆರಳಿನಲ್ಲಿ ಪಾತ್ರ ಸಾಗುತ್ತದೆ. ಪ್ರತಿಯೊಬ್ಬರಿಗೂ ಈ ಕತೆ ಮತ್ತು ನನ್ನ ಪಾತ್ರ ಕನೆಕ್ಟ್ ಆಗುತ್ತದೆ.

ಜವಾಬ್ದಾರಿಯುತ ತಂದೆಯ ಪಾತ್ರ: ಎಸ್ ನಾರಾಯಣ್
ನಾನು ನಾಯಕನ ತಂದೆ ಪಾತ್ರದಲ್ಲಿ ನಟಿಸಿದ್ದೇನೆ. ತುಂಬಾ ವಿಶೇಷವಾಗಿ ನನ್ನ ಪಾತ್ರವನ್ನು ನಿರ್ದೇಶಕರು ರೂಪಿಸಿದ್ದಾರೆ. ಚಿತ್ರದ ಟ್ರೇಲರ್ (Trailer) ನೋಡಿದಾಗಲೇ ನಿಮಗೆ ಗೊತ್ತಾಗುತ್ತದೆ, ನನ್ನ ಪಾತ್ರದಲ್ಲಿ ಎಷ್ಟು ಹಾಸ್ಯ ಇದೆ ಎಂಬುದು. ಒಂದು ಒಳ್ಳೆಯ ಕತೆಯನ್ನು ಹಾಸ್ಯದ ಧಾಟಿಯಲ್ಲಿ ಹೇಳುತ್ತಿದ್ದಾರೆ. ಅದಕ್ಕೆ ನನಗೆ ಈ ಸಿನಿಮಾ ಅಂದರೆ ಇಷ್ಟ. 

ನನ್ನ ಪಾತ್ರದಲ್ಲಿ ಸರ್ಪ್ರೈಸ್ ಇದೆ: ಅಶೋಕ್ ಹೆಗಡೆ
ಖಳನಾಯಕನ ಪಾತ್ರಧಾರಿಯ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಮಾಜಿ ಸಿಎಂ ಪಾತ್ರ ನನ್ನದು. ಹಗರಣದಲ್ಲಿ ಭಾಗಿಯಾಗಿರುತ್ತೇನೆ. ಮುಂದೆ ಉಪ ಚುನಾವಣೆ ಬರುತ್ತದೆ. ನನ್ನ ಮಗನನ್ನು ಚುನಾವಣೆಗೆ ನಿಲ್ಲಿಸುತ್ತೇನೆ. ಮುಂದೆ ಏನಾಗುತ್ತದೆ ಎಂಬುದು ಚಿತ್ರದ ಕತೆ. ಒಳ್ಳೆಯ ಪಾತ್ರ ಕೊಟ್ಟಿದ್ದಕ್ಕೆ ಶ್ರೀನಿಗೆ ಧನ್ಯವಾದಗಳನ್ನು ಸಲ್ಲಿಸಬೇಕು. ಈ ಚಿತ್ರ ನನಗೆ ಮರೆಯಲಾಗದು. ಯಾಕೆಂದರೆ ನನ್ನ ತಂದೆ ಪಾತ್ರ ಹಿರಿಯ ನಟ ರಾಜೇಶ್ ಅವರದ್ದು. ಅವರ ಜತೆಗೆ ನಾನು ನಟಿಸಿದ್ದು ನನ್ನ ಭಾಗ್ಯ. ಅವರು ಈಗ ಇಲ್ಲ ಎನ್ನುವುದೇ ದುಃಖ

Old monk film clubs with Lolbag film team; ಓಲ್ಡ್‌ಮಾಂಕ್‌ ವರ್ಸಸ್‌ ಲೋಲ್‌ಬಾಗ್

ಕಲಾತಪಸ್ವಿ ರಾಜೇಶ್ ನಟನೆಯ ಕೊನೆಯ ಚಿತ್ರ: 'ಓಲ್ಡ್‌ಮಾಂಕ್' ಚಿತ್ರದಲ್ಲಿ ನಟಿಸಿರುವ ಪೋಷಕ ಪಾತ್ರಧಾರಿಗಳ ಪೈಕಿ ಇತ್ತೀಚೆಗಷ್ಟೆ ನಿಧನರಾದ ಕಲಾತಪಸ್ವಿ ರಾಜೇಶ್ (Kalatapasvi Rajesh) ಕೂಡ ಪ್ರಮುಖರು. ಈ ಚಿತ್ರದಲ್ಲಿ ರಾಜೇಶ್ ವಿಶೇಷ ಅತಿಥಿಯಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಚಿತ್ರವನ್ನು ತೆರೆ ಮೇಲೆ ನೋಡುವ ಮುನ್ನವೇ ರಾಜೇಶ್ ಅವರು ಇಹಲೋಕ ತ್ಯಜಿಸಿದ್ದಾರೆ.

Latest Videos
Follow Us:
Download App:
  • android
  • ios