Asianet Suvarna News Asianet Suvarna News

Purandara Award: ಶ್ರೀ ಜಗನ್ನಾಥದಾಸರು ಚಿತ್ರತಂಡಕ್ಕೆ ಪುರಂದರ ಅನುಗ್ರಹ ಪ್ರಶಸ್ತಿ

ಶ್ರೀ ಜಗನ್ನಾಥದಾಸರು ಚಿತ್ರತಂಡಕ್ಕೆ ತಿರುಮಲ ತಿರುಪತಿ ದೇವಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟ್ ಪ್ರದಾನ ಮಾಡುವ ಪ್ರತಿಷ್ಠಿತ ಪುರಂದರ ಅನುಗ್ರಹ ಪ್ರಶಸ್ತಿ ಸಂದಿದೆ. ತಿರುಪತಿಯ ತಿರುಮಲ ಬೆಟ್ಟದಲ್ಲಿ ಪುರಂದರದಾಸರ ಆರಾಧನೆಯ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

Sri Jagannatha Daasaru Film Team Receives Purandara Grace Award gvd
Author
Bangalore, First Published Feb 3, 2022, 8:44 AM IST | Last Updated Feb 3, 2022, 9:35 AM IST

ಶ್ರೀ ಜಗನ್ನಾಥದಾಸರು (Sri Jagannatha Daasaru) ಚಿತ್ರತಂಡಕ್ಕೆ ತಿರುಮಲ ತಿರುಪತಿ ದೇವಸ್ಥಾನದ (Tirumala Tirupati Devasthanam) ದಾಸ ಸಾಹಿತ್ಯ ಪ್ರಾಜೆಕ್ಟ್ ಪ್ರದಾನ ಮಾಡುವ ಪ್ರತಿಷ್ಠಿತ ಪುರಂದರ ಅನುಗ್ರಹ ಪ್ರಶಸ್ತಿ (Purandara Grace Award) ಸಂದಿದೆ. ತಿರುಪತಿಯ ತಿರುಮಲ ಬೆಟ್ಟದಲ್ಲಿ ಪುರಂದರದಾಸರ ಆರಾಧನೆಯ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಚಿತ್ರದ ನಿರ್ದೇಶಕ, ಸಹ ನಿರ್ಮಾಪಕ ಡಾ.ಮಧೂಸೂದನ್ ಹವಾಲ್ದಾರ್ (Dr.Madhusudan Haavaldar), ಸಹ ನಿರ್ಮಾಪಕ ಹಾಗೂ ವಿಜಯದಾಸರಾಗಿ ನಟಿಸಿರುವ ತ್ರಿವಿಕ್ರಮ್ ಜೋಶಿ (Trivikram Joshi), ಗೋಪಾಲದಾಸರ ಪಾತ್ರದಲ್ಲಿ ನಟಿಸಿದ ಪ್ರಭಂಜನ್ ದೇಶಪಾಂಡೆ (Prabhanjan Deshpande) ಮತ್ತು ಜಗನ್ನಾಥದಾಸರ ಪಾತ್ರದಲ್ಲಿ ನಟಿಸಿದ ಶರತ್ ಜೋಶಿ (Sharat Joshi) ಗೌರವಕ್ಕೆ ಪಾತ್ರರಾಗಿದ್ದಾರೆ.

'ಹರಿ ಕಥಾಮೃತಸಾರ'ದಂತಹ ಮೇರುಕೃತಿಯನ್ನು ನೀಡಿದ ದಾಸ ಶ್ರೇಷ್ಟರಲ್ಲೊಬ್ಬರಾದ ಶ್ರೀ ಜಗನ್ನಾಥದಾಸರ ಕುರಿತಾದ ಸಿನಿಮಾದ ಚಿತ್ರೀಕರಣವನ್ನು ಕಳೆದ ವರ್ಷಾರಂಭದಲ್ಲಿ ಆರಂಭಿಸಿದ್ದು ಮಂತ್ರಾಲಯದಲ್ಲಿ, ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಾನದಲ್ಲಿ, ಮಂತ್ರಾಲಯಮಠದ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರ ತೀರ್ಥರ ಆಶೀರ್ವಚನ ಮತ್ತು ಕ್ಯಾಮರಾ ಚಾಲನೆಯೊಂದಿಗೆ ನಡೆದಿತ್ತು. ಈ ವರ್ಷದ ಆರಂಭದಲ್ಲಿ ಚಿತ್ರದ ಯಶಸ್ಸಿನ ಸಮಾರಂಭ ಬೆಂಗಳೂರಿನ ಉತ್ತರಾಧಿಮಠದಲ್ಲಿ ಶ್ರೀ ಜಯತೀರ್ಥರ ವೃಂದಾವನವಿರುವ ಸನ್ನಿಧಾನದಲ್ಲಿ ನಡೆದಿದೆ.

Love Mocktail 2 ಚಿತ್ರದ ಟ್ರೈಲರ್ ರಿಲೀಸ್​: ಆದಿ ಲೈಫ್​ಗೆ ಜೋ ಮತ್ತೆ ಬರುತ್ತಾಳಾ?

ಐವತ್ತು ದಿನ ಪೂರೈಸಿದ ನಂತರವೂ 'ಶ್ರೀ ಜಗನ್ನಾಥದಾಸರು' ಸಿನಿಮಾ ಬೆಂಗಳೂರಿನ ಐದು ಮಲ್ಟಿಪ್ಲೆಕ್ಸ್‌ಗಳಲ್ಲಿ ಮತ್ತು ರಾಜ್ಯದ ಹಲವು ಕಡೆ ಇನ್ನೂ ಪ್ರದರ್ಶನ ಕಾಣುತ್ತಿದೆ. ಇದೇ ರೀತಿ ಚಿತ್ರದ ನೂರನೇ ದಿನದ ಸಮಾರಂಭದಲ್ಲಿ ತಾವೆಲ್ಲಾ ಹೀಗೆ ಪಾಲ್ಗೊಳ್ಳೋಣ ಎಂದು ಬಂದಿದ್ದ ಅತಿಥಿಗಳಾಗಿ ಬಂದಿದ್ದ ವಿದ್ವಾಂಸರಾದ ಶ್ರೀ ಸತ್ಯಧ್ಯಾನಾಚಾರ್ ಕಟ್ಟಿ (Sri Satyadhyanachar) ಅವರು ಹೇಳಿದರು. 'ನಮ್ಮ ಸಂಸ್ಕೃತಿ, ಪರಂಪರೆ, ಮೌಲ್ಯಗಳ ಕುರಿತಂತೆ ಇಂದಿನ ಪೀಳಿಗೆಗೆ ಅರಿವನ್ನುಂಟು ಮಾಡುವಲ್ಲಿ ಶ್ರೀ ಜಗನ್ನಾಥದಾಸರ ಚಿತ್ರ ನಿರ್ಮಾಣವಾದದ್ದು, ಯಶಸ್ವಿಯಾದದ್ದು ಅತ್ಯಂತ ಮಹತ್ವ ಪಡೆದಿದೆ. 

ಇಂತಹ ಚಿತ್ರಗಳ ಪರಂಪರೆ, ಯಶಸ್ಸು ಮುಂದುವರೆದು, ಈ ನಾಡಿನ ಮಹನೀಯರ ಬಗ್ಗೆ ಎಲ್ಲರೂ ತಿಳಿಯುವಂತಾಗಲಿ' ಎಂದು ಅತಿಥಿಗಳು ಹೇಳಿದರು. ಶ್ರೀ ಜಗನ್ನಾಥ ದಾಸರು ಸಿನಿಮಾ, ಪುರಂದರ ದಾಸರು, ವಿಜಯದಾಸರು ಮತ್ತು ಶ್ರೀ ಗೋಪಾಲ ದಾಸರು ಸೇರಿದಂತೆ ಪ್ರಸಿದ್ಧ ನಾಲ್ವರು ಹರಿದಾಸರ ಜೀವನ ಹಾಗೂ ಭಕ್ತಿ ಚಳವಳಿಯ ಕಥಾ ಹಂದರವನ್ನು ಹೊಂದಿದೆ. ಮಾತಾಂಬುಜಾ ಮೂವೀಸ್‌ ಬ್ಯಾನರ್ (Mathambuja Movies Banner) ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಮೈತ್ರಿ ಹೆರಿಟೇಜ್ (Mytri Heritage), ವಿವಿ ಜೋಶಿ (VV Joshi) ಮತ್ತು ಶ್ರೀನಾಥ್ ರಾವ್ (Srinath Rao) ಸಹ ನಿರ್ಮಾಪಕರಾಗಿದ್ದಾರೆ. 

Raghavendra Rajkumar: ಅಪ್ಪು ನೆನಪಲ್ಲಿ ಒಂದು ಲಕ್ಷ ಸಸಿ ನೆಡಲು ನಿರ್ಧಾರ

ಹೈದರಾಬಾದ್ ಮೂಲದ ಶರತ್ ಜೋಷಿ ಶ್ರೀ ಜಗನ್ನಾಥ ದಾಸರು ಪಾತ್ರದಲ್ಲಿ ಅಭಿನಯಿಸಿದ್ದಾರೆ. ತ್ರಿವಿಕ್ರಮ್ ಜೋಷಿ- ವಿಜಯದಾಸರು, ಪ್ರಭಾಂಜನ್ ದೇಶಪಾಂಡೆ- ಗೋಪಾಲ ದಾಸರು ಪಾತ್ರದಲ್ಲಿ ನಟಿಸಿದ್ದಾರೆ. ಐತಿಹಾಸಿಕ ಭಕ್ತಿ ಪ್ರದಾನ ಚಿತ್ರವನ್ನು ಹಂಪಿ, ಆನೆಗುಂದಿ, ಗುವಾಹಟಿ ಮತ್ತಿತರ ಕಡೆಗಳಲ್ಲಿ ಚಿತ್ರೀಕರಿಸಲಾಗಿದೆ. ಹಾಡುಗಳಿಗೆ ನಿರ್ದೇಶಕ ವಿಜಯ್ ಕೃಷ್ಣ (Vijay Krishna) ಸಂಗೀತ ಸಂಯೋಜಿಸಿದ್ದಾರೆ. ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನ ತೀರ್ಥರು ಈ ಚಿತ್ರದ ಧ್ವನಿ ಸಾಂದ್ರಿಕೆ ಬಿಡುಗಡೆ ಮಾಡಿ ಆಶೀರ್ವದಿಸಿದ್ದರು.

Latest Videos
Follow Us:
Download App:
  • android
  • ios