Asianet Suvarna News Asianet Suvarna News

ಶೀಘ್ರದಲ್ಲೇ 'ಸುಬ್ರಹ್ಮಣ್ಯ' ಪ್ರಪಂಚದ ಪರಿಚಯ; ಇದು ನಟ ರವಿಶಂಕರ್ ಪುತ್ರ ಅದ್ವೆ ಸಿನಿಮಾ!

ಸುಬ್ರಹ್ಮಣ್ಯ ಸಿನಿಮಾದ 60% ಭಾಗದ ಶೂಟಿಂಗ್ ಮುಕ್ತಾಯಗೊಂಡಿದ್ದು, ಸದ್ಯ ಪೋಸ್ಟ್-ಪ್ರೊಡಕ್ಷನ್ ಕೆಲಸ ಮುಂಬೈನ ಶಾರುಖ್ ಒಡೆತನದ ರೆಡ್ ಚಿಲ್ಲೀಸ್ ಸ್ಟುಡಿಯೋದಲ್ಲಿ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ. ಮುಂಬೈ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನ ಹಲವಾರು ಪ್ರತಿಷ್ಠಿತ ಸ್ಟುಡಿಯೋಗಳಲ್ಲಿ..

South india villain actor Ravi shankar son first movie subrahmanya pre look release srb
Author
First Published Sep 2, 2024, 1:35 PM IST | Last Updated Sep 2, 2024, 1:35 PM IST

ದಕ್ಷಿಣ ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ಆರ್ಮುಗ ರವಿಶಂಕರ್ ಮತ್ತೆ ನಿರ್ದೇಶನಕ್ಕೆ ಮರಳಿರುವುದು ಗೊತ್ತೇ ಇದೆ. ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಅವರು ಸುಬ್ರಹ್ಮಣ್ಯ ಸಿನಿಮಾ ಮೂಲಕ ಮಗ ಅದ್ವೆಯನ್ನು (Adhvey Shankar) ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಕಳೆದ ಆಯುಧ ಪೂಜೆಗೆ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಅಲ್ಲಿಂದ ಇಲ್ಲಿವರೆಗೂ ಸುಬ್ರಹ್ಮಣ್ಯ ಸಿನಿಮಾದ ಬಗ್ಗೆ ಸಣ್ಣ ಅಪ್ ಡೇಟ್ ಕೂಡ ಸಿಕ್ಕಿರಲಿಲ್ಲ. ಈಗ ಚಿತ್ರತಂಡದ ಹೊಸ ಸಮಾಚಾರ ರಿವೀಲ್ ಮಾಡಿದೆ. 

ಸುಬ್ರಹ್ಮಣ್ಯ ಸಿನಿಮಾದ 60% ಭಾಗದ ಶೂಟಿಂಗ್ ಮುಕ್ತಾಯಗೊಂಡಿದ್ದು, ಸದ್ಯ ಪೋಸ್ಟ್-ಪ್ರೊಡಕ್ಷನ್ ಕೆಲಸ ಮುಂಬೈನ ಶಾರುಖ್ ಒಡೆತನದ ರೆಡ್ ಚಿಲ್ಲೀಸ್ ಸ್ಟುಡಿಯೋದಲ್ಲಿ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ. ಮುಂಬೈ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನ ಹಲವಾರು ಪ್ರತಿಷ್ಠಿತ ಸ್ಟುಡಿಯೋಗಳಲ್ಲಿ VFX ಮತ್ತು CGI ಕೆಲಸಗಳು ನಡೆಯುತ್ತಿವೆ. ಪ್ರೀಮಿಯಂ ಲಾರ್ಜ್ ಫಾರ್ಮ್ಯಾಟ್ ಮತ್ತು ಐಮ್ಯಾಕ್ಸ್ ಥಿಯೇಟರ್‌ಗಳಲ್ಲಿ ಅದ್ಭುತ ಫೀಲ್ ಕೊಡುವ ರೀತಿಯಲ್ಲಿ ಸುಬ್ರಹ್ಮಣ್ಯ ಸಿನಿಮಾವನ್ನು ಕಟ್ಟಿಕೊಡಲಾಗುತ್ತಿದೆ.

ಝೈದ್‌ ಖಾನ್ 'ಕಲ್ಟ್' ಸಿನಿಮಾಗೆ ಗುಳಿಗೆನ್ನೆ ಚೆಲುವೆ ನಟಿ ರಚಿತಾ ರಾಮ್ ನಾಯಕಿ!

ಸುಬ್ರಹ್ಮಣ್ಯ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಚಿತ್ರತಂಡ ಶೀಘ್ರದಲ್ಲೇ ಅನಾವರಣಗೊಳಿಸಲು ಮುಂದಾಗಿದೆ. ಈ ಪೋಸ್ಟರ್ ಮೂಲಕ ಸುಬ್ರಹ್ಮಣ್ಯ ಪ್ರಪಂಚವನ್ನು ಚಿತ್ರತಂಡ ಪರಿಚಯಸಲು ಹೊರಟಿದೆ. ಸೋಷಿಯೋ ಫ್ಯಾಂಟಸಿ ಅಡ್ವೆಂಚರ್ಸ್ ಸಿನಿಮಾವನ್ನು ಎಸ್ ಜಿ ಮೂವೀ ಮೇಕರ್ಸ್ ಬ್ಯಾನರ್ ನಡಿ ತಿರುಮಲ ರೆಡ್ಡಿ ಮತ್ತು ಅನಿಲ್ ಕಡಿಯಾಲ ಬಂಡವಾಳ ಹಾಕಿದ್ದು, ಪ್ರವೀಣಾ ಕಡಿಯಾಲ ಹಾಗೂ ರಮಾ ಲಕ್ಷ್ಮೀ ಪ್ರಸ್ತುತಪಡಿಸುತ್ತಿದ್ದಾರೆ. ಸಲಾರ್ ಮತ್ತು ಕೆಜಿಎಫ್ ಸರಣಿ ಸಿನಿಮಾಗಳ ಸಂಗೀತ ನೀಡಿರುವ ರವಿ ಬಸ್ರೂರ್ ಈ ಚಿತ್ರಕ್ಕೂ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. 

ಫಸ್ಟ್ ಲುಕ್ ಗೂ‌‌‌ ಮೊದ್ಲೇ ಪ್ರೀ-ಲುಕ್ ರಿಲೀಸ್: ಸುಬ್ರಹ್ಮಣ್ಯ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಗೂ ಮುನ್ನ ಚಿತ್ರತಂಡ ಪ್ರೀ ಲುಕ್ ಅನಾವರಣ ಮಾಡಲಾಗಿದೆ. ಪಾಳು ಬಿದ್ದಿರುವ ದೇಗುಲದ ಮುಂದೆ ನಾಯಕ ಅದ್ವೆ ಕೈಯಲ್ಲಿ ಪಂಜು ಹಿಡಿದು ಬ್ಯಾಕ್ ಪೋಸ್ ಕೊಟ್ಟಿರುವ ಪ್ರೀ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಬಹಳ ಕುತೂಹಲ ಹೆಚ್ಚಿಸುವ ಪ್ರೀ ಲುಕ್ ಫಸ್ಟ್ ಲುಕ್ ಮೇಲೆ ನಿರೀಕ್ಷೆ ಹೆಚ್ಚಿಸಿದೆ.

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್‌ ಹುಟ್ಟುಹಬ್ಬ; ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ!

ವಿಘ್ನೇಶ್ ರಾಜ್ ಕ್ಯಾಮೆರಾ ಹಿಡಿದಿದ್ದು, ವಿಜಯ್ ಎಂ ಕುಮಾರ್ ಸಂಕಲನ ಸುಬ್ರಹ್ಮಣ್ಯ ಸಿನಿಮಾಕ್ಕಿದೆ.. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸುಬ್ರಹ್ಮಣ್ಯ ಸಿನಿಮಾ ತಯಾರಾಗುತ್ತಿದೆ. ಕಳೆದ 20 ವರ್ಷಗಳ ಹಿಂದೆ ಆ್ಯಕ್ಷನ್ ಕ್ವೀನ್ ಮಾಲಾಶ್ರೀಗೆ ಮೊದಲ ಬಾರಿಗೆ ಪಿ. ರವಿಶಂಕರ್ ಆ್ಯಕ್ಷನ್ ಕಟ್ ಹೇಳಿದ್ದರು. ದುರ್ಗಿ ಸಿನಿಮಾ ಡೈರೆಕ್ಷನ್ ಮಾಡುವ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದಿದ್ದರು. ಅವತ್ತಿಗೆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ ತೆಲುಗಿಗೆ ರಿಮೇಕ್ ಕೂಡ ಆಗಿತ್ತು. ಈಗ 20 ವರ್ಷದ ಬಳಿಕ ಮಗ ಅದ್ವೆಗಾಗಿ ಅವರು ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.

Latest Videos
Follow Us:
Download App:
  • android
  • ios