Asianet Suvarna News Asianet Suvarna News

ಜಮೀರ್ ಖಾನ್ ಮಗ ಝೈದ್‌ ಖಾನ್ ಜೋಡಿಯಾದ ಗುಳಿಗೆನ್ನೆ ಚೆಲುವೆ ನಟಿ ರಚಿತಾ ರಾಮ್..!

'ಬನಾರಸ್' ಬಿಡುಗಡೆಯಾಗಿ ಒಂದೂವರೆ ವರ್ಷಗಳಾದರೂ ಆ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ಝೈದ್‍ ಖಾನ್‍ ಯಾವೊಂದು ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ. ಒಂದೊಳ್ಳೆಯ ಕಥೆ ಮತ್ತು ಪಾತ್ರಕ್ಕಾಗಿ ಹುಡುಕಾಟ ನಡೆಸುತ್ತಿರುವುದಾಗಿ ಹೇಳಿದ್ದ ಝೈದ್‍, ಈ ವರ್ಷದ..

Sandalwood beauty Rachita Ram acts in Zaid khans upcoming movie Cult srb
Author
First Published Sep 2, 2024, 12:21 PM IST | Last Updated Sep 2, 2024, 2:19 PM IST

ಸ್ಯಾಂಡಲ್‌ವುಡ್ ಸುಂದರಿ ರಚಿತಾ ರಾಮ್ಮ (Rachita Ram) ತ್ತೊಂದು ಸಿನಿಮಾಗೆ ಆಯ್ಕೆಯಾಗಿದ್ದಾರೆ. ಈ ಮೊದಲು 'ಬನಾರಸ್' ಚಿತ್ರದ ಮೂಲಕ ಸುದ್ದಿಯಾಗಿದ್ದ ನಟ ಝೈದ್ ಖಾನ್ (Zaid Khan), ಇಧಿಗ ಅನಿಲ್ ಕುಮಾರ್ ನಿರ್ದೇಶನದ 'ಕಲ್ಟ್‌' ಚಿತ್ರದಲ್ಲಿ ನಾಯಕರಾಗಿದ್ದು, ಅದಕ್ಕೆ ರಚಿತಾ ರಾಮ್ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಇತ್ತೀಚೆಗಷ್ಟೇ ನಟಿ ರಚಿತಾ ರಾಮ್ ಅವರು ರಜನಿಕಾಂತ್ ಸಿನಿಮಾದಲ್ಲಿ ನಟಿಸುತ್ತಿರುವುದು ಸುದ್ದಿಯಾಗಿತ್ತು. 

'ಬನಾರಸ್' ಬಿಡುಗಡೆಯಾಗಿ ಒಂದೂವರೆ ವರ್ಷಗಳಾದರೂ ಆ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ಝೈದ್‍ ಖಾನ್‍ ಯಾವೊಂದು ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ. ಒಂದೊಳ್ಳೆಯ ಕಥೆ ಮತ್ತು ಪಾತ್ರಕ್ಕಾಗಿ ಹುಡುಕಾಟ ನಡೆಸುತ್ತಿರುವುದಾಗಿ ಹೇಳಿದ್ದ ಝೈದ್‍, ಈ ವರ್ಷದ ಆರಂಭದಲ್ಲಿ 'ಕಲ್ಟ್' ಎಂಬ ಚಿತ್ರ ಒಪ್ಪಿದ್ದರು. ಯುಗಾದಿಯ ಪ್ರಯುಕ್ತ ಪೋಸ್ಟರ್‍ ಬಿಡುಗಡೆ ಆಗಿತ್ತು. ಆ ನಂತರ ಚಿತ್ರತಂಡದಿಂದ ಯಾವೊಂದು ಸುದ್ದಿಯೂ ಇರಲಿಲ್ಲ. 

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್‌ ಹುಟ್ಟುಹಬ್ಬ; ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ!

ಇದೀಗ ಚಿತ್ರಕ್ಕೆ ನಾಯಕಿಯ ಆಯ್ಕೆ ಆಗಿದೆ. ರಚಿತಾ ರಾಮ್‍ ಅಭಿನಯದ ಶಬರಿ, ಲವ್‍ ಮೀ ಆರ್‍ ಹೆಟ್‍ ಮೀ, ಚಿತ್ರಗಳ ಸುದ್ದಿಯೇ ಇಲ್ಲ. ಈ ಚಿತ್ರಗಳ ಚಿತ್ರೀಕರಣ ಆಗಿದೆಯಾದರೂ, ಮುಂದೇನು ಗೊತ್ತಿಲ್ಲ. ಇನ್ನು, ಸಂಜು ವೆಡ್ಸ್ ಗೀತಾ 2 ಚಿತ್ರವನ್ನು ಹೊರತುಪಡಿಸಿದರೆ ರಚಿತಾ ರಾಮ್ ಕನ್ನಡದಲ್ಲಿ ಯಾವೊಂದು ಚಿತ್ರವನ್ನೂ ಒಪ್ಪಿರಲಿಲ್ಲ. ರಚಿತಾ ಮುಂದಿನ ನಡೆಯೇನು? ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. 

ಝೈದ್ ಖಾನ್‍ ಅಭಿನಯದ 'ಕಲ್ಟ್' ಚಿತ್ರಕ್ಕೆ ರಚಿತಾ ಇದೀಗ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.  ಈ ಚಿತ್ರವನ್ನು ಉಪಾಧ್ಯಕ್ಷ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸಿದ್ದು, ಈ ಚಿತ್ರದಲ್ಲಿ ಝೈದ್‍ ಖಾನ್‍ ವಿಭಿನ್ನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ 'ಬ್ಲಡಿ ಲವ್‍' ಎಂಬ ಟ್ಯಾಗ್‍ಲೈನ್‍ ಇದ್ದು, ಚಿತ್ರದ ಕಥೆ ಏನಿರಬಹುದು ಎಂಬ ಕುತೂಹಲ ಶುರುವಾಗಿದೆ. 

ಅಪರ್ಣಾ ನುಡಿಮುತ್ತುಗಳು ಭಾರೀ ವೈರಲ್ ಆಗ್ತಿವೆ; ಕಾಲೇಜಿನಲ್ಲಿ ಅದೆಂಥ ಮುತ್ತಿನಂಥ ಮಾತು..!

ಆಶ್ರಿತ್ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ಜೆ.ಎಸ್. ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕಿದೆ. ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಅತ್ತ ತಮಿಳು ಮೂಲದ, ಪ್ಯಾನ್ ಇಂಡಿಯಾ ಸಿನಿಮಾಲದಲ್ಲಿ ಕೂಡ ಮಿಂಚಲಿರುವ ನಟಿ ರಚಿತಾ ರಾಮ್ ಅವರು ಇತ್ತ ಕನ್ನಡದಲ್ಲಿ ಕೂಡ ನಟನೆ ಮುಂದುವರಿಸಿದ್ದಾರೆ. ಈ ಮೂಲಕ ತಾವಿನ್ನೂ ರೇಸ್‌ನಲ್ಲಿ ಇರುವ ಸ್ಪಷ್ಟ ಸಂದೇಶ ನೀಡಿದ್ದಾರೆ ರಚಿತಾ ರಾಮ್!

Latest Videos
Follow Us:
Download App:
  • android
  • ios