Asianet Suvarna News Asianet Suvarna News

ತರುಣ್​ ಜೊತೆ ಮದ್ವೆ ಆದ್ಮೇಲೆ ದಪ್ಪ ಆಗಿದ್ಯಾಕೆ ಕೇಳಿದ್ರೆ ನಾಚುತ್ತಲೇ ನಟಿ ಸೋನಲ್​ ಮೊಂಥೆರೋ ಹೇಳಿದ್ದೇನು ಕೇಳಿ...

ನಿರ್ದೇಶಕ ತರುಣ್ ಸುಧೀರ್ ಅವರನ್ನು ಮದುವೆಯಾದ ಮೇಲೆ ನಟಿ ಸೋನಲ್ ಮೊಂಥೆರೋ ದಪ್ಪ ಆಗಿದ್ಯಾಕೆ ಎನ್ನುವ ಪ್ರಶ್ನೆಯನ್ನು ಕೇಳಿದಾಗ ನಟಿ ಏನು ಹೇಳಿದ್ರು ಕೇಳಿ... 
 

Sonal Monthero about weight gain after  marrying director Tarun Sudhir suc
Author
First Published Sep 20, 2024, 3:50 PM IST | Last Updated Sep 20, 2024, 4:49 PM IST

ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಅವರ ಅದ್ಧೂರಿ ವಿವಾಹ ಕಳೆದ ಆಗಸ್ಟ್​ 11ರಂದು ಬೆಂಗಳೂರಿನ ನಡೆದಿದೆ.  ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಈ ಜೋಡಿ  ತಮ್ಮ ನಾಲ್ಕು ವರ್ಷದ  ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದ್ದಾರೆ.  ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿತ್ತು. ಸೋನಲ್​ ಅವರ ಹುಟ್ಟುಹಬ್ಬದಂದೇ ಮದುವೆಯಾಗಿದ್ದು  ವಿಶೇಷವೇ. ಈ ವಿವಾಹಕ್ಕೆ ಕನ್ನಡದ ಸ್ಟಾರ್ ಕಲಾವಿದರ ದಂಡು, ರಾಜಕೀಯ ಗಣ್ಯರು ಭಾಗಿಯಾದರು.  ದಕ್ಷಿಣ ಭಾರತ ಶೈಲಿಯಲ್ಲಿ ಕಲ್ಯಾಣ ಮಂಟಪದ ಅಲಂಕಾರ ಮಾಡಲಾಗಿತ್ತು.  ಕೊನೆಗೆ ಜೋಡಿ ಮಂಗಳೂರಿನಲ್ಲಿ ಕ್ರೈಸ್ತ ಸಮುದಾಯದಂತೆ ಮದುವೆ ಮಾಡಿಕೊಂಡಿತು. ಇದಕ್ಕೆ ಕಾರಣ ಸೋನಲ್​ ಅವರು ಕ್ರೈಸ್ತ ಸಮುದಾಯಕ್ಕೆ ಸೇರಿದವರು.

ಈ ದಂಪತಿ ತಮ್ಮ ವೈವಾಹಿಕ ಜೀವನವನ್ನು ಸಂತಸದಿಂದ ಕಳೆಯುತ್ತಿದ್ದಾರೆ. ಆದರೂ ಸೆಲೆಬ್ರಿಟಿಗಳು ಅಂದ್ರೆ ಹಾಗೇ ಅಲ್ವಾ? ಹೋದಲ್ಲಿ, ಬಂದಲ್ಲಿ ಪ್ರಶ್ನೆ ಎದುರಾಗುತ್ತದೆ. ಇದೀಗ ಸೋನಲ್​ ಅವರಿಗೆ ಮದುವೆಯಾದ ಮೇಲೆ ಎಷ್ಟು ಕೆ.ಜಿ. ದಪ್ಪ ಆಗಿದ್ರಿ ಎಂದು ಪ್ರಶ್ನಿಸಲಾಗಿದೆ. ಈ ಪ್ರಶ್ನೆ ನಟಿಗೆ ಸ್ವಲ್ಪ ಇರುಸು ಮುರುಸು ಉಂಟು ಮಾಡಿದೆ. ಆದರೂ ಸಾವರಿಸಿಕೊಂಡ ಅವರು, ನಾಚುತ್ತಲೇ, ಡಯೆಟ್​ ಏನೂ ಮಾಡಿಲ್ಲ ಅನ್ನೋದು ನಿಜ. ಆದರೆ ಅದಕ್ಕಿಂತ ಹೆಚ್ಚಾಗಿ ಗಂಡ ತುಂಬಾ ಚೆನ್ನಾಗಿ ನೋಡಿಕೊಂಡ್ರೆ ಹೆಂಡತಿ ದಪ್ಪ ಆಗ್ತಾಳಂತೆ ಎಂದು ಹೇಳುವ ಮೂಲಕ ಪ್ರಶ್ನೆಗೆ ಉತ್ತರಿಸಿ ಅಲ್ಲಿಂದ ನಗುತ್ತಲೇ ಹೋಗಿದ್ದಾರೆ.

2-3 ದಿನಗಳಿಂದ ಫುಲ್‌ ಸುಸ್ತಾಗಿದ್ದೇನೆ ಎನ್ನುತ್ತಲೇ ಹೆಂಡ್ತಿಯ ಕರಾಮತ್ತು ತಿಳಿಸಿದ ತರುಣ್‌ ಸುಧೀರ್‌!
 
ಇದಕ್ಕೂ ಮುಂಚೆ ಕ್ರೈಸ್ತ ಸಂಪ್ರದಾಯದಂತೆ ಮದುವೆ ನಡೆಯುತ್ತಿದ್ದಾಗ, ತರುಣ್​ ಅವರು ಹೇಳಿರುವ ಮಾತೂ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗಿತ್ತು. ತರುಣ್‌ ಅವರು ಇಂಗ್ಲಿಷ್‌ನಲ್ಲಿಯೇ ಮಾತನಾಡಬೇಕು ಎನ್ನುವ ಕಾರಣಕ್ಕೆ ಸೋನಲ್‌ ಅವರಿಗೆ ಉದ್ದ ಭಾಷಣ ಬರೆದುಕೊಟ್ಟಿದ್ದರು. ಅದನ್ನು ಪ್ರಸ್ತಾಪಿಸುತ್ತಲೇ ತರುಣ್‌ ಎಲ್ಲರನ್ನೂ ನಕ್ಕು ನಗಿಸಿದ್ದರು ತರುಣ್​.  ಉದ್ದ ಭಾಷಣ ಇರುವ ಪೇಪರ್‌ ತೋರಿಸುತ್ತಲೇ ತರುಣ್‌ ಹಾಸ್ಯ ಮಾಡಿದ್ದರು. ತರುಣ್‌ ಅವರು ಮೈಕ್‌ ಎದುರು ನಿಂತು ಹೇಳಿದ್ದೇನೆಂದರೆ, ನಾನು ಲೈಫ್‌ನಲ್ಲಿ ಇಷ್ಟು ನರ್ವಸ್‌ ಆಗಿದ್ದೇ ಇಲ್ಲ.  2-3 ದಿನಗಳಿಂದ ಫುಲ್‌ ಸುಸ್ತಾಗಿದ್ದೇನೆ. ಇದಕ್ಕೆ ಕಾರಣ, ನನ್ನ ಹೆಂಡ್ತಿ ಇಷ್ಟು ಉದ್ದ ಸ್ಪೀಚ್‌ ಬರೆದುಕೊಟ್ಟಿದ್ದಾಳೆ. ನೀವು ಇಂಗ್ಲಿಷ್‌ನಲ್ಲಿಯೇ ಮಾತನಾಡಬೇಕು ಎಂದು ಹೇಳಿದ್ದಾಳೆ ಎಂದರು. ನಂತರ ಅವರು, ಒಂದು ವೇಳೆ ಭಾಷಣ ಮಾಡುವಷ್ಟು ಇಂಗ್ಲಿಷ್‌ ಚೆನ್ನಾಗಿ ಬರೋದೇ ಆಗಿದ್ರೆ, ಸಿನಿಮಾ ಇಂಡಸ್ಟ್ರಿಯಲ್ಲಿ ಯಾಕೆ ಇರ್ತಿದ್ದೆ, ಅಮೆರಿಕದಲ್ಲೋ ಇನ್ನೆಲ್ಲೋ ಒಳ್ಳೆ ಜಾಬ್‌ ಮಾಡಿಕೊಂಡು ಇರ್ತಿದ್ದೆ ಎಂದು ಹೇಳುವ ಮೂಲಕ ಇಂಗ್ಲಿಷ್‌ಗಿಂತ ಕನ್ನಡವೇ ಮೇಲು ಎಂದು ತೋರಿಸಿಕೊಟ್ಟಿದ್ದಾರೆ. ಇದನ್ನು ಕೇಳುತ್ತಿದ್ದಂತೆಯೇ ಅಲ್ಲಿದ್ದವರು ಬಿದ್ದೂ ಬಿದ್ದೂ ನಕ್ಕಿದ್ದರು. ಖುದ್ದು ಸೋನಲ್‌ ಅವರೂ ನಕ್ಕು ನಕ್ಕು ಸುಸ್ತಾಗಿದ್ದರು. 


 ಅಂದಹಾಗೆ ತರುಣ್​ ಮತ್ತು ಸೋನಲ್​  ನಡುವಿನ ವಯಸ್ಸಿನ ಅಂತರ  11 ವರ್ಷ. ತರುಣ್ ಸುಧೀರ್‌ಗೆ 41 ವರ್ಷ ವಯಸ್ಸಾಗಿದೆ. ಇನ್ನು ನಟಿ ಸೋನಲ್ ಮೊಂಥೆರೋಗೆ 29 ವರ್ಷ ವಯಸ್ಸಾಗಿದೆ. ಸೋನಲ್‌  ಎಕ್ಕ ಸಕ್ಕ ಎಂಬ ತುಳು ಸಿನಿಮಾ ಮೂಲಕ ಎಂಟ್ರಿ ಕೊಟ್ಟರು.  ಬಳಿಕ ಯಮುನಕ್ಕ ಸೇರಿದಂತೆ ಕೆಲವು ತುಳು ಚಿತ್ರಗಳಲ್ಲಿ ನಟಿಸಿದ್ದಾರೆ. 2018ರಲ್ಲಿ ಅಭಿಸಾರಿಕೆ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಎಂಟ್ರಿ ಕೊಟ್ಟರು. 2019ರಲ್ಲಿ ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಬಳಿಕ ತರುಣ್ ನಿರ್ದೇಶನದ ರಾಬರ್ಟ್ ಚಿತ್ರದಲ್ಲಿ ಸೋನಲ್ ಪ್ರಮುಖ ಪಾತ್ರದಲ್ಲಿ ನಟಿಸಿದರು. ಆನಂತರ ಶುಗರ್‌ ಫ್ಯಾಕ್ಟರಿ, ಬನಾರಸ್‌, ಗರಡಿ, ಮದುವೆ ದಿಬ್ಬಣ, ಡೆಮೊ ಪೀಸ್‌, ಶಂಭೋ ಶಿವ ಶಂಕರ್‌ ಸಿನಿಮಾಗಳಲ್ಲಿ ನಟಿಸಿದರು. ಬಳಿಕ ಉಪೇಂದ್ರ ನಟನೆಯ ಬುದ್ಧಿವಂತ 2, ರೋಲೆಕ್ಸ್ ಹಾಗೂ ಮಾರ್ಗರೆಟ್ ಲವ್ ಆಫ್ ರಾಮಾಚಾರಿ ಚಿತ್ರದಲ್ಲಿ ಸೋನಲ್ ಅಭಿನಯಿಸಿದ್ದಾರೆ.  

ಮೇಕಪ್​ ಮಾಡುವಾಗಲೇ ನಟಿ ಸೋನಲ್​ ಅರಿಶಿಣದ ಕೊಂಬು ಮಾಯ! ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​

Latest Videos
Follow Us:
Download App:
  • android
  • ios