Asianet Suvarna News Asianet Suvarna News

ಸ್ವಂತ ಮನೆ, ಸೈಟ್ ಮಾರಿ ಬಾಡಿಗೆ ಮನೆಯಲ್ಲಿರುವೆ: ಹಿರಿಯ ನಟ ಶ್ರೀನಿವಾಸ್ ಮೂರ್ತಿ

 6 ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡಿದ ಶ್ರೀನಿವಾಸ್ ಮೂರ್ತಿ. ಕೈ ಹಿಡಿಯಲಿಲ್ಲ ನಿರ್ಮಾಣ ಎಂದು ಹೇಳಿದ್ದು ಯಾಕೆ?

Sold own house and property to produce kannada films says actor Srinivas Murthy vcs
Author
First Published Jun 9, 2023, 11:48 AM IST

ಕನ್ನಡ ಚಿತ್ರರಂಗದ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶ್ರೀನಿವಾಸ್ ಮೂರ್ತಿ ಒಮ್ಮೆ ಸಿನಿಮಾ ನಿರ್ಮಾಣ ಮಾಡಲು ಮುಂದಾದರು. ನಿರ್ಮಾಣದಿಂದ ಇಷ್ಟು ವರ್ಷ ಸಂದಾಪನೆ ಮಾಡಿದನ್ನು ಕಳೆದುಕೊಂಡೆ ಎಂದು ಹೇಳಿಕೊಂಡಿದ್ದಾರೆ.

'ಸಿನಿಮಾ ನಿರ್ಮಾಪಕನಾಗಬೇಕು ಎಂದು ಆಸೆ ಕಟ್ಟಿ ನಮ್ಮ ಸಂಸ್ಥೆಯಲ್ಲಿ ಸುಮಾರು 6 ಸಿನಿಮಾ ಮಾಡಿದೆ ಆದರೆ ಒಂದೂ ಕೈ ಅಂಟಲಿಲ್ಲ. ಎಷ್ಟೇ ಚೆನ್ನಾಗಿರುವ ಸಿನಿಮಾ ಮಾಡಿದರೂ ಹಣೆ ಬರಹ ನೆಟ್ಟಗಿರಬೇಕು..ಸಿನಿಮಾಗೆ ನನಗೆ ಇಷ್ಟ ಆಗುತ್ತೆ ಅದರೆ ಕಲೆಕ್ಷನ್ ಆಗಲ್ಲ. ನಿರ್ಮಾಣದಲ್ಲಿ 100ಕ್ಕೆ 5 ಜನ ಗೆಲ್ಲುತ್ತಾರೆ ಹೀಗಾಗಿ ನನಗೆ ಯಾವ ಯಶಸ್ಸು ಸಿಗಲಿಲ್ಲ.  ಸಿನಿಮಾಣದಕ್ಕೆ ಕೈ ಹಾಕಿ ಬಹಳ ಹೊಡೆತ ಬಿದ್ದಿದೆ. 2003ರಲ್ಲಿ ದೇವರ ಮಕ್ಕಳು ಎನ್ನುವ ಸಿನಿಮಾವನ್ನು ನಿರ್ದೇಶನ ಮಾಡಿದೆ. ಸಿನಿಮಾದಲ್ಲಿ ಇರುವುದು ನನ್ನ ಮಗನೇ ಅವನಿಗೆ ಬೆಸ್ಟ್‌ ಚೈಲ್ಡ್‌ ಆರ್ಟಿಸ್ಟ್‌ ಅವಾರ್ಡ್‌ ಕೂಡ ಬಂದಿದೆ.  ಅವಾರ್ಡ್‌ ಹಿಡಿದುಕೊಂಡು ಎನು ಮಾಡಬೇಕು ಹಣ ಇಲ್ಲದಿದ್ದರೆ?' ಎಂದು ಕನ್ನಡದ ಖಾಸಗಿ ಸಂದರ್ಶನದಲ್ಲಿ ಶ್ರೀನಿವಾಸ್ ಮೂರ್ತಿ ಮಾತನಾಡಿದ್ದಾರೆ.

ಉಡುಗೊರೆ ಬೇಕೆಂದು ಹಠ ಮಾಡಿದಕ್ಕೆ ಅಪ್ಪ ರಕ್ತ ಮಾರಿದರು: ನಟಿ ಅನಸೂಯ ಭಾರದ್ವಾಜ್ ಭಾವುಕ

'ಈಗ ಅನಿಸುತ್ತಿದೆ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಬಾರದು ಎಂದು ಹಾಕಿದ್ದೇ ದೊಡ್ಡ ತಪ್ಪು. ಸಿಕ್ಕ ಪಾತ್ರಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೆ ಯಾವ ತೊಂದರೆ ಆಗುತ್ತಿರಲಿಲ್. ಸಿನಿಮಾ ಬಿಟ್ಟು ನಮಗೆ ಬೇರೆ ಯಾವ ಪ್ರಪಂಚ ಗೊತ್ತಿಲ್ಲ ನಮ್ಮ ರಂಗದಲ್ಲಿ ಇರುವುದು ನಮಗೆ ಗೊತ್ತಿರುವ ವೃತ್ತಿ ಎಂದು ಒಳ್ಳೆ ಕಥೆ ಹಿಡಿದು ಮಾಡಿದೆ ಆದರೆ ಸಂಪಾದನೆ ಮಾಡಿದ್ದು ಎಲ್ಲಾ ನಿರ್ಮಾಣದಲ್ಲಿ ಕಳೆದುಕೊಂಡೆ ಸ್ವಂತ ಮನೆ ಸೈಟ್‌ ಎಲ್ಲಾ ಮಾರಿಕೊಂಡೆ. ಒಂದೊಂದು ಸಿನಿಮಾ ಒಂದೊಂದು ಸೈಟ್ ಮಾರಿ ಸಾಲ ತೀರಿಸುವುದು. ಬಾಡಿಗೆ ಮನೆಯಲ್ಲಿದ್ದರೂ ನೆಮ್ಮದಿಯಾಗಿದ್ದೀವಿ ದೇವರು ನಮಗೆ ಕಡಿಮೆ ಮಾಡಿಲ್ಲ ನನಗೆ ಶಕ್ತಿ ಇದೆ ದೇವರು ಕೆಲಸ ಕೊಡುತ್ತಿದ್ದಾನೆ ಮಾಡುತ್ತಿದ್ದೀನಿ. ಬೆಂಗಳೂರಿಗೆ ಬಂದಾಗ ನಮ್ಮ ಬಳಿ ಏನೂ ಇರಲಿಲ್ಲ ಒಂದು ಸೂಟ್‌ಕೇಸ್‌ ಹಿಡಿದುಕೊಂಡು ಬಂದಾಗ ಇಷ್ಟು ಮಾಡಲು ದೇವರು ಕೊಟ್ಟಿರುವುದೇ ಖುಷಿ ಅದಿಕ್ಕೆ ದೇವರಿಗೆ ಕೈ ಮುಗಿಯಬೇಕು. ದೇವರು ಕೊಟ್ಟ ಅವನೇ ಕಿತ್ತುಕೊಂಡ' ಎಂದು ಶ್ರೀನಿವಾಸ್ ಮೂರ್ತಿ ಹೇಳಿದ್ದಾರೆ.

ದುಡ್ಡು ಕೊಟ್ಟು ನಟಿ ಅನಸೂಯ ಭಾರದ್ವಾಜ್ ಮಾನ ಕಳೆದ ಸ್ಟಾರ್ ನಟ; ವಿಜಯ್ ದೇವರಕೊಂಡ ವಿರುದ್ಧ ಗರಂ!

'ಭೂಮಿಗೆ ಬಂದ ಭಗವಂತ ಧಾರಾವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ಪಾತ್ರ ಮಾಡಲು ನವೀನ್ ಕೃಷ್ಣ ಅವರಿಗೆ ಆಸಕ್ತಿನೇ ಇರಲಿಲ್ಲ ಡೈರೆಕ್ಷನ್ ಅಂತ ಬ್ಯುಸಿಯಾಗಿದ್ದೆ ಒಳ್ಳೆ ಹೆಸರು ಮಾಡಿದ. ಡೈರೆಕ್ಷನ್ ಚೆನ್ನಾಗಿ ಬರುತ್ತಿದೆ ಇರಲಿ ಎಂದು ಯೋಚನೆ ಮಾಡಿ ಕಥೆ ಒಪ್ಪಿಕೊಂಡ. ಸಾಮಾನ್ಯ ಸೀರಿಯಲ್‌ಗಳ ರೀತಿ ಇಲ್ಲ ಭೂಮಿಗೆ ಬಂದ ಭಗವಂತ ಧಾರಾವಾಹಿ...ನಾನು ಸತ್ಯ ಧಾರಾವಾಹಿಯಲ್ಲಿ ನಟಿಸುತ್ತಿರುವೆ ಅದೇ ಅತ್ತೆ ಸೊಸೆ ಜಗಳ ಕಾಟ ಕೊಡುವುದು ಎಲ್ಲಾ ಇದೆ... ಕಥೆಯಲ್ಲಿ ವಿಶೇಷತೆ ಇರಬೇಕು ಆ ವಿಶೇಷತೆ ಈ ಧಾರಾವಾಹಿಯಲ್ಲಿ ಇದೆ. ಟಿಆರ್‌ಪಿ ಅದು ಇದು ಅಂತಾರೆ ನನಗೆ ಗೊತ್ತಿಲ್ಲ ಕಥೆ ಚೆನ್ನಾಗಿರುವುದು ಮೊದಲು' ಎಂದಿದ್ದಾರೆ ಶ್ರೀನಿವಾಸ್ ಮೂರ್ತಿ. 


 

Follow Us:
Download App:
  • android
  • ios