2007ರ ಸೂಪರ್ ಹಿಟ್ ಕನ್ನಡ ಸಿನಿಮಾ 'ಸ್ನೇಹನಾ ಪ್ರೀತಿನಾ' ನಿರ್ದೇಶಕ ಶಾಹುರಾಜ್‌ ಶಿಂಧೆ ಹೃದಯಾಘಾತದಿಂದ ಇಂದು (19 ನವೆಂಬರ್) ಬೆಳಗ್ಗೆ ಅಗಲಿದ್ದಾರೆ. ಈ ವಿಚಾರದ ಬಗ್ಗೆ ಗಾಯಕ ಅಜನೀಶ್ ಲೋಕನಾಥ್ ಸೋಷಿಯಲ್ ಮೀಡಿಯಾದಲ್ಲಿ ದುಃಖ ತೋಡಿಕೊಂಡು, ಕಂಬನಿ ಮಿಡಿದಿದ್ದಾರೆ. 

ಹಿರಿಯ ಕಲಾವಿದ ಡಾ. ಟಿ.ಬಿ. ಸೊಲಬಕ್ಕನವರ ಇನ್ನಿಲ್ಲ 

'ಶಾಕ್ ಆಗುತ್ತಿದೆ ನಿರ್ದೇಶಕ ಶಾಹುರಾಜ್‌ ಇನ್ನಿಲ್ಲ ಎಂಬುದನ್ನು ಕೇಳಿ. ಸ್ನೇಹನಾ ಪ್ರೀತಿನಾ, ಚಾಂಪಿಯನ್ ಸೇರಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.  ಅವರ ಕುಟುಂಬಕ್ಕೆ ದೇವರು ದುಃಖ ಮರೆಸುವ ಶಕ್ತಿ ನೀಡಲಿ ಎಂದು ಪಾರ್ಥಿಸುತ್ತೇನೆ,' ಎಂದು ಟ್ಟೀಟ್ ಮಾಡಿದ್ದಾರೆ. 

 

ಬರೋಬ್ಬರಿ 9 ವರ್ಷದ ಬಳಿಕೆ ಮತ್ತೊಮ್ಮೆ ನಿರ್ದೇಶಕ್ಕೆ ಎಂಟ್ರಿ ಕೊಟ್ಟು 'ರಂಗ ಮಂದಿರ' ಸಿನಿಮಾ ನಿರ್ದೇಶನ  ಮಾಡಿದರು. ಸಿನಿಮಾ ಫೋಸ್ಟ್‌ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, 2021ರಲ್ಲಿ ತೆರೆ ಕಾಣಬೇಕಿತ್ತು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಸಿನಿಮಾ ರಿಲೀಸ್ ಆಗುವ ಮುನ್ನವೇ ಪ್ರತಿಭಾನ್ವಿತ ನಿರ್ದೇಶಕರು ಇಹಲೋಕ ತ್ಯಜಿಸಿದ್ದಾರೆ.

ನಟ ಮಂಡ್ಯ ರಮೇಶ್‌ಗೆ ಪಿತೃ ವಿಯೋಗ