ಹಿರಿಯ ಕಲಾವಿದ ಡಾ. ಟಿ.ಬಿ. ಸೊಲಬಕ್ಕನವರ ಇನ್ನಿಲ್ಲ
ಹುಬ್ಬಳ್ಳಿ(ನ.19): ಜಕ್ಕೂರಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ಮಾದರಿ ಗ್ರಾಮದ ಪರಿಕಲ್ಪನೆ ಮತ್ತು ಸಾಕಾರಗೊಳಿಸಿದ ನಾಡಿನ ಹಿರಿಯ ಕಲಾವಿದ ಡಾ. ಟಿ.ಬಿ. ಸೊಲಬಕ್ಕನವರ(71) ಇಂದು(ಗುರುವಾರ) ಬೆಳಿಗ್ಗೆ ಮಹಾಮಾರಿ ಕೋವಿಡ್-19ಗೆ ಬಲಿಯಾಗಿದ್ದಾರೆ.
ಕೊರೋನಾ ದಾಳಿಗೆ ತುತ್ತಾಗಿದ್ದ ಡಾ. ಟಿ.ಬಿ. ಸೊಲಬಕ್ಕನವರ ಅವರನ್ನ ಹುಬ್ಬಳ್ಳಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೊಲಬಕ್ಕನವರ ಇಂದು ಬೆಳಗಿನ ಜಾವ ಇಲಲೋಕ ತ್ಯಜಿಸಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಹಾವೇರಿ ಜಿಲ್ಲೆಯ ರಾಕ್ ಗಾರ್ಡನ್ ಪಕ್ಕ ಹೊಸ ವರ್ಕ್ ಶಾಪ್ ಹತ್ತಿರ ಜರುಗಲಿದೆ ಎಂದು ಅವರ ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.
ಇತ್ತೀಚೆಗೆ ಮಾದರಿ ಗ್ರಾಮ ಉದ್ಘಾಟಿಸಿ ಕಲಾವಿದ ಸೊಲಬಕ್ಕನವರ ಕಲೆ ಮತ್ತು ಕಾರ್ಯವನ್ನು ಶ್ಲಾಘಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಡಾ. ಟಿ.ಬಿ. ಸೊಲಬಕ್ಕನವರ ಅವರು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಹಾಗೂ ಹಾವೇರಿ ಜಿಲ್ಲೆಯಲ್ಲಿರುವ ರಾಕ್ ಗಾರ್ಡ್ ರೂವಾರಿಯಾಗಿದ್ದರು.
ಇತ್ತೀಚೆಗಷ್ಟೇ ಬೆಂಗಳೂರಿನ ಜಕ್ಕೂರಿನ ಶ್ರೀರಾಮಪುರ ಅಡ್ಡರಸ್ತೆಯಲ್ಲಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ನಿರ್ಮಿಸಿರುವ ಮಾದರಿ ಪಾರಂಪರಿಕ ಗ್ರಾಮವನ್ನು ಸಿಎಂ ಯಡಿಯೂರಪ್ಪ ಉದ್ಘಾಟಿಸಿದ್ದರು.
ರಾಜ್ಯದ ಎಲ್ಲ ಗ್ರಾಮಗಳ ಜೀವನ ಕ್ರಮವನ್ನು ಬಿಂಬಿಸುವ ಪಾರಂಪರಿಕ ಗ್ರಾಮ ಅದ್ಭುತವಾಗಿ ಮೂಡಿ ಬಂದಿದ್ದು, ಹಿಂದಿನ ಕಾಲದ ಗ್ರಾಮ ಜೀವನವನ್ನು ಹಳ್ಳಿಯ ಮತ್ತು ನಗರದ ಮಕ್ಕಳು ನೋಡಿ ತಿಳಿದುಕೊಳ್ಳಲು ಇದು ಉತ್ತಮ ವೇದಿಕೆಯಾಗಿದೆ ಈ ಮಾದರಿ ಪಾರಂಪರಿಕ ಗ್ರಾಮ
ಮಾದರಿ ಪಾರಂಪರಿಕ ಗ್ರಾಮದಲ್ಲಿ ಗ್ರಾಮ ಬದುಕಿನ ಚಿತ್ರಣವನ್ನು ಎಳೆಎಳೆಯಾಗಿ ಬಿಡಿಸಿದ್ದ ಡಾ. ಟಿ.ಬಿ. ಸೊಲಬಕ್ಕನವರ
ಸಂಸಾರ ಸಹಿತ ಬುತ್ತಿಕಟ್ಟಿಕೊಂಡು ಬಂದು ಅರ್ಧ ದಿನ, ಇಲ್ಲಿದ್ದು ಗ್ರಾಮಗಳ ಪರಂಪರೆ ಕಣ್ತುಂಬಿಕೊಳ್ಳಬೇಕು. ಇಂತಹ ಕಲಾಕೃತಿಯನ್ನು ರಚಿಸಿದ ಕಲಾವಿದರನ್ನು ಹೊಗಳಲು ಪದಗಳು ಸಿಗುತ್ತಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಯಡಿಯೂರಪ್ಪ
ಕರ್ನಾಟಕ ರಾಜ್ಯದ ಗ್ರಾಮಗಳು ಹೇಗಿದ್ದವು ಎಂಬುದು ಇಲ್ಲಿಗೆ ಬಂದರೆ ಗೊತ್ತಾಗುತ್ತದೆ. ನಮ್ಮ ಯುವ ಜನತೆ ಈ ಪಾರಂಪರಿಕೆ ಗ್ರಾಮಕ್ಕೆ ಬರಬೇಕು. ಇಡೀ ರಾಜ್ಯದ ಶಾಲಾ - ಕಾಲೇಜು ಮಕ್ಕಳನ್ನು ಇಲ್ಲಿಗೆ ಪ್ರವಾಸಕ್ಕೆ ಕರೆದುಕೊಂಡು ಬರಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ
ನಗರಗಳಲ್ಲಿನ ಬಹುತೇಕರು ಹಳ್ಳಿಯಿಂದಲೇ ಬಂದಿದ್ದರೂ ಕೂಡ ಈಗ ಮೂಲದಿಂದ ದೂರವಾಗುತ್ತಿದ್ದಾರೆ. ಅವರಿಗೆ ಇಪ್ಪತ್ತು-ಮೂವತ್ತು ವರ್ಷಗಳ ಹಿಂದಿನ ಗ್ರಾಮೀಣ ಬದುಕನ್ನು ಈ ಪಾರಂಪರಿಕ ಗ್ರಾಮ ನೆನಪಿಸಲಿದೆ.
ಡಾ. ಟಿ.ಬಿ. ಸೊಲಬಕ್ಕನವರ ಮತ್ತವರ ತಂಡ ನಿರ್ಮಿಸಿದ ಈ ಪಾರಂಪರಿಕ ಗ್ರಾಮವನ್ನ ಸುಮಾರು 12 ಕೋಟಿ ರು. ವೆಚ್ಚದಲ್ಲಿ ಮೂರು ವರ್ಷದಲ್ಲಿ ನಿರ್ಮಾಣವಾಗಿರುವ ಈ ಪಾರಂಪರಿಕ ಗ್ರಾಮದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ, ಬಹುತೇಕ ಗ್ರಾಮ ಸಮುದಾಯದ ಜೀವನ ಕ್ರಮದ ಚಿತ್ರಣವಿದೆ.