Asianet Suvarna News Asianet Suvarna News

ಸ್ಟಾರ್‌ ಸುವರ್ಣದಲ್ಲಿ ಸೀತಾರಾಮ್‌ ಬಿನೋಯ್‌ ಬಿಡುಗಡೆ

  • ಆ.15ರಂದು ಸ್ಟಾರ್‌ ಸುವರ್ಣದಲ್ಲಿ ಸೀತಾರಾಮ್‌ ಬಿನೋಯ್‌ ಬಿಡುಗಡೆ
  • ವಿಜಯ್‌ ರಾಘವೇಂದ್ರ ಸಿನಿಮಾ ಟಿವಿಯಲ್ಲಿ ಮೊದಲು, ಥೇಟರಲ್ಲಿ ಆಮೇಲೆ
Sitaram Binoy to be released on Star Suvarna on August 15th dpl
Author
Bangalore, First Published Aug 4, 2021, 11:04 AM IST
  • Facebook
  • Twitter
  • Whatsapp

ವಿಜಯ್‌ ರಾಘವೇಂದ್ರ ನಟನೆಯ, ದೇವಿಪ್ರಸಾದ್‌ ಶೆಟ್ಟಿನಿರ್ದೇಶನದ ‘ಸೀತಾರಾಮ್‌ ಬಿನೋಯ್‌’ ಸಿನಿಮಾ ಆ.15ರಂದು ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ಮೊದಲು ಟಿವಿಯಲ್ಲಿ ಬಿಡುಗಡೆಯಾಗಿ ಮರುದಿನ ಆ.16ರಂದು ಥಿಯೇಟರ್‌ನಲ್ಲಿ ರಿಲೀಸ್‌ ಆಗಲಿದೆ. ಕೊರೋನಾ ನಂತರ ಸಂದರ್ಭದಲ್ಲಿ ಇದೊಂದು ವಿಶಿಷ್ಟಪ್ರಯೋಗ ಮತ್ತು ಚಿತ್ರರಂಗದಲ್ಲಿ ಆಶಾದಾಯಕ ಬೆಳವಣಿಗೆ. ಆಗಸ್ಟ್‌ 8ರಂದು ಪುನೀತ್‌ ರಾಜ್‌ಕುಮಾರ್‌ ಅವರ ಪಿಆರ್‌ಕೆ ಯೂಟ್ಯೂಬ್‌ ಚಾನಲ್‌ನಲ್ಲಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಲಿದೆ.

ಥಿಯೇಟರ್‌ನಲ್ಲಿ ಬಿಡುಗಡೆಯಾಗುವ ಮೊದಲು ಸ್ಟಾರ್‌ ಸುವರ್ಣದಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ ಎಂಬ ಕೀರ್ತಿಯನ್ನು ಸೀತಾರಾಮ್‌ ಬಿನೋಯ್‌ ಸಿನಿಮಾ ಪಡೆದುಕೊಂಡಿದೆ. ಈ ಸಿನಿಮಾವನ್ನು ಈಗಾಗಲೇ ನೆಟ್‌ಫ್ಲಿಕ್ಸ್‌ ಓಟಿಟಿಯವರು ನೋಡಿ ಅಪ್ರೂವಲ್‌ ಮಾಡಿದ್ದು ಚಿತ್ರದ ಹೆಚ್ಚುಗಾರಿಕೆ. ಆದರೆ ತಡವಾಗಿ ಪ್ರಸಾರ ಮಾಡುವುದಾಗಿ ಹೇಳಿದ್ದರಿಂದ ನೆಟ್‌ಫ್ಲಿಕ್ಸ್‌ಗೆ ಕೊಡದೇ ಇದ್ದಿದ್ದು ಚಿತ್ರತಂಡದ ವಿಶ್ವಾಸ. ಹಾಗಾಗಿ ಅಮೆಜಾನ್‌ ಪ್ರೈಮ್‌ ಡಿಜಿಟಲ್‌ ಹಕ್ಕುಗಳನ್ನು ಪಡೆದುಕೊಂಡಿದೆ.

ಸ್ಟಾರ್‌ ಸುವರ್ಣ ಡಾನ್ಸ್‌ ರಿಯಾಲಿಟಿ ಶೋಗೆ ಹರಿಪ್ರಿಯಾ ಜಡ್ಜ್‌

ಇದು ಮಗಳೂರಿನ ದೇವಿಪ್ರಸಾದ್‌ ಶೆಟ್ಟಿಮತ್ತು ತೀರ್ಥಹಳ್ಳಿಯ ಸಾತ್ವಿಕ್‌ ಹೆಬ್ಬಾರ್‌ ಎಂಬ ಇಬ್ಬರು ಗೆಳೆಯರ ಸಾಹಸ. ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಇವರು ಒಂದು ಸಿನಿಮಾ ಮಾಡಲು ಓಡಾಡುತ್ತಿದ್ದರು. ಕೊರೋನಾ ಬಂದ ಮೇಲೆ ತಮ್ಮ ಸಿನಿಮಾ ಬೇರೆಯವರು ನಿರ್ಮಿಸುವುದು ಕಷ್ಟಎಂದರಿತು ತಾವೇ ನಿರ್ಮಾಣಕ್ಕೆ ಇಳಿದರು. ಈ ಚಿತ್ರದ ಕತೆ, ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದು ದೇವಿಪ್ರಸಾದ್‌.

ಒಂದು ಪುಟ್ಟಹಳ್ಳಿಯಲ್ಲಿ ನಡೆಯುವ ರಾಬರಿ ಹಿನ್ನೆಲೆಯ ಕತೆ. ಕ್ರೈಮ್‌ ಥ್ರಿಲ್ಲರ್‌ ಜಾನರ್‌ನ ಸಿನಿಮಾ. ಶಿವಮೊಗ್ಗದ ಕಲಾತರಂಗ ತಂಡದವರು, ಹರ್ಷ ನೀನಾಸಂ, ನಾಗರಾಜ್‌, ದೇವಿ ಪ್ರಕಾಶ್‌ ಸೇರಿದಂತೆ ಹೊಸ ಕಲಾವಿದರು ನಟಿಸಿದ್ದಾರೆ.

Follow Us:
Download App:
  • android
  • ios