ಪುನೀತ್ ರಾಜ್‌ಕುಮಾರ್ ಅವರ 50ನೇ ಹುಟ್ಟುಹಬ್ಬದಂದು ಕಂಠೀರವ ಸ್ಟುಡಿಯೋದಲ್ಲಿ ಕುಟುಂಬಸ್ಥರು ವಿಶೇಷ ಪೂಜೆ ಸಲ್ಲಿಸಿದರು. ಅಪ್ಪು ಅವರ ನೆಚ್ಚಿನ ಆಹಾರವನ್ನು ತಂದಿದ್ದರು. ಅಪ್ಪು ಇಲ್ಲದಿರುವುದಕ್ಕೆ ಅಕ್ಕ ಲಕ್ಷ್ಮಿ ಬೇಸರ ವ್ಯಕ್ತಪಡಿಸಿದರು. ಅಪ್ಪು ಜೊತೆಗಿನ ನೆನಪುಗಳನ್ನು ಹಂಚಿಕೊಂಡರು. ಅಪ್ಪುಗೆ ಕೇಸರಿ ಬಾತ್ ಮತ್ತು ಮೈದಾ ಸ್ವೀಟ್ ಅಂದರೆ ತುಂಬಾ ಇಷ್ಟ ಎಂದು ತಿಳಿಸಿದರು. ಅಪ್ಪು ಇಲ್ಲದಿರುವುದು ದುಃಖ ತಂದಿದೆ ಎಂದು ಲಕ್ಷ್ಮಿ ಹೇಳಿದರು.

ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬದ ಪ್ರಯುಕ್ತ ಕಂಠೀರವ ಸ್ಟುಡಿಯೋದಲ್ಲಿ ಕುಟುಂಬಸ್ಥರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಪ್ಪು ನೆಚ್ಚಿನ ಆಹಾರವನ್ನು ಮಾಡಿಕೊಂಡು ಬಂದಿದ್ದಾರೆ. ಈ ವೇಳೆ ಅಪ್ಪು ಇಲ್ಲದ ಆಚರಣೆ ಮಾಡುತ್ತಿರವುದಕ್ಕೆ ಅಕ್ಕ ಲಕ್ಷ್ಮಿ ಬೇಸರ ವ್ಯಕ್ತ ಪಡಿಸಿದ್ದಾರೆ. 'ಅಪ್ಪುಗೆ 50ನೇ ಹುಟ್ಟುಹಬ್ಬದ ಶುಭಾಶಯಗಳು. ನಿಮಗೂ ಈ ದಿನದ ಸುಭಾಶಯಗಳು. ಅಪ್ಪು ಇದ್ದಾಗ ಆಚರಣೆ ಮಾಡಿದರೆ ತುಂಬಾ ಖುಷಿಯಾಗುತ್ತಿತ್ತು. ಅದಕ್ಕಿಂತ 10ರಷ್ಟು ಅಭಿಮಾನಿಗಳು ಮುಂದೆ ನಿಂತು ಮಾಡುತ್ತಿರುವುದು ಖುಷಿಯಾಗುತ್ತಿದೆ. ಪುನೀತ್‌ ನನ್ನ ಮುದ್ದಿನ ತಮ್ಮ ಅವನೊಟ್ಟಿಗೆ ಹಲವು ಸಲ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದೀನಿ. ವಸಂತ ಗೀತ ಮತ್ತು ಭಾಗ್ಯವಂತ ಸಿನಿಮಾದಲ್ಲಿ ಸದಾ ಪಟ್ಟಿಗೆ ಹೋಗುತ್ತಿದ್ವಿ. ಅಪ್ಪು ಚಿಕ್ಕ ಹುಡುಗ ಇದ್ದಾಗ ಸ್ನಾನ ಮಾಡಿಸಿ ರೆಡಿ ಮಾಡಿ ಶೂಟಿಂಗ್‌ಗೆ ಕಳುಹಿಸುತ್ತಿದ್ವಿ' ಎಂದು ಮಾಧ್ಯಮಗಳಲ್ಲಿ ಲಕ್ಷ್ಮಿ ಮಾತನಾಡಿದ್ದಾರೆ. 

ನಾನು ಮಾಡುವ ಕೇಸರಿ ಬಾತ್‌ ಅಂದ್ರೆ ಅಪ್ಪಾಜಿಗೆ ತುಂಬಾ ಇಷ್ಟ. ಹೀಗಾಗಿ ಅಪ್ಪುಗೂ ಇಷ್ಟ. ಪ್ರತಿ ವರ್ಷ ಮಾಡಿಕೊಂಡು ಬಂದು ಕೊಡುತ್ತೀನಿ. ಅಪ್ಪುನೇ ನಮಗೆ ಗಿಫ್ಟ್‌ ಕೊಡುತ್ತಿದ್ದ ನಾವು ಏನೂ ಕೊಡುತ್ತಿರಲಿಲ್ಲ. ಅಪ್ಪುಗೆ ಚಿಕ್ಕ ಚಿಕ್ಕ ಗಿಫ್ಟ್ ಇಷ್ಟ ಆಗುತ್ತಿರಲಿಲ್ಲ ದೊಡ್ಡದಾಗಿ ಕೊಡಬೇಕು ಅದಿಕ್ಕೆ ಅವನಿಗೆ ಏನ್ ಇಷ್ಟ ಅಂತ ಅವನಿಗೆ ಗೊತ್ತು ನಾವು ಏನೂ ಕೊಡಲು ಆಗುತ್ತಿರಲಿಲ್ಲ. ಈ ರೀತಿ ಗಿಫ್ಟ್‌ ಬೇಕು ಅಂತ ಯಾವತ್ತೂ ಅಪ್ಪು ಕೇಳಿಲ್ಲ ಇನ್ನೂ ನಿಮಗೆ ಏನ್ ಬೇಕು ಕೇಳಿ ನಾನು ಕೊಡಿಸುತ್ತೀನಿ ಎನ್ನುತ್ತಿದ್ದ. ಅಪ್ಪು ನಮ್ಮ ಜೊತೆ ಹುಟ್ಟಿರುವುದೇ ದೊಡ್ಡ ಗಿಫ್ಟ್. ಅಪ್ಪು ಸಿನಿಮಾ ಪ್ರೀ ರಿಲೀಸ್‌ ನೋಡಲು ನಾನು ಹೋಗಿಲ್ಲ ನನ್ನ ಮೊಮ್ಮಗು ಮನೆಯಲ್ಲಿ ಇತ್ತು ಆದರೆ ನಮ್ಮ ಮೊಮ್ಮಕ್ಕಳು ಬಂದು ನೋಡಿದ್ದಾರೆ. ಅವನು ವಿಡಿಯೋ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾನೆ ದಯವಿಟ್ಟು ಅದನ್ನು ನೋಡಿ ಸಪೋರ್ಟ್ ಮಾಡಿ ಎಂದು ಲಕ್ಷ್ಮಿ ಅವರು ಹೇಳಿದ್ದಾರೆ. 

ಅಪ್ಪು ಕೊನೆಯ ದಿನ ಈ ವಿಚಾರದ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದರು; ಸತ್ಯ ಬಿಚ್ಚಿಟ್ಟ ರಾಘವೇಂದ್ರ ರಾಜ್‌ಕುಮಾರ್ ಸೊಸೆ

ಅಪ್ಪುಗೆ ನಾನು ಮಾಡುವ ಮೈದಾ ಸ್ವೀಟ್ ಅಂದ್ರೆ ತುಂಬಾ ಇಷ್ಟ. ಈಗ ಅಪ್ಪಾಜಿ ಅಮ್ಮ ಮತ್ತು ಅಪ್ಪುಗೆ ಮಾಡಿಕೊಂಡು ಬರುತ್ತೀನಿ. ನಮ್ಮ ಫ್ಯಾಮಿಲಿಯಲ್ಲಿ ಎಲ್ಲರಿಗೂ ಇಷ್ಟವಾಗುತ್ತದೆ. ನಾನು ಚೆನ್ನೈನಲ್ಲಿ ಇದ್ದಾಗ ಮಸಾಲ ಚಿತ್ರಾನ್ನ ಅಪ್ಪುಗೆ ಇಷ್ಟ ಆಗುತ್ತಿತ್ತು. ಕೊರೋನಾ ಸಮಯದಲ್ಲಿ ರೆಸಿಪಿ ಕೊಡು ಎಂದು ಕೇಳುತ್ತಿದ್ದ ಹೇಳಿದ್ದೆ, ಅದನ್ನು ಟ್ರೈ ಮಾಡಿ ಸೂಪರ್ ಆಗಿ ಬಂದಿತ್ತು ನಿಮ್ಮ ಮನೆಗೂ ಮಾಡಿ ಕಳುಹಿಸುತ್ತೀನಿ ಎಂದು ಹೇಳಿದ್ದ. ನಾವು ಅವನನ್ನು ಎತ್ತಿ ಬೆಳೆಸಿದ್ದೀವಿ ಈಗ ಅವನು ಇಲ್ಲ ಅಂತ ತುಂಬಾ ಬೇಸರ ಇದೆ. ಜನರು ಆಚರಣೆ ಮಾಡುತ್ತಿರುವುದು ನೋಡಿ ಖುಷಿಯಾಗುತ್ತಿದೆ ಎಂದಿದ್ದಾರೆ ಲಕ್ಷ್ಮಿ. 

ಮುಖಕ್ಕೆ ಹೊಡೀತೀನಿ ಇದು ನಾನು ಕೊಡ್ತಿರೋ ವಾರ್ನಿಂಗ್; ಶಿಶಿರ್‌-ಐಶ್ವರ್ಯಗೆ ವಾರ್ನಿಂಗ್ ಕೊಟ್ಟ ಒಳ್ಳೆ ಹುಡುಗ ಪ್ರಥಮ್