ಕನ್ನಡ ಚಿತ್ರರಂಗದ ಬೇಡಿಕೆಯ ಸಂಗೀತ ನಿರ್ದೇಶಕ ಚರಣ್ ರಾಜ್‌ ಬಾಲಿವುಡ್‌ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಟಗರು, ಸಲಗ ಚಿತ್ರಗಳಿಗೆ ಅದ್ಭುತ ಸಂಗೀತ ನೀಡಿರುವ ಚರಣ್ ಯಾವ ಹಿಂದಿ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ ಗೊತ್ತಾ?

ಪರಭಾಷೆ ಗಾಯಕ ದುನಿಯಾ ವಿಜಿ ಚಿತ್ರದಲ್ಲಿ ಹಾಡೋಕೆ ಪಡೆದ ಸಂಭಾವನೆ ಇಷ್ಟೊಂದಾ? 

ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಚರಣ್ ರಾಜ್, ತಮ್ಮ ಸಂಗೀತ ಜರ್ನಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 2014ರಲ್ಲಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಚರಣ್‌ ಜೀವನದಲ್ಲಿ ಬಿಗ್ ಬ್ರೇಕ್ ಕೊಟ್ಟಂತ ಸಿನಿಮಾ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ 'ಟಗರು' ಸಿನಿಮಾ. ಇದಾದ ನಂತರ ದುನಿಯ ವಿಜಯ್ ನಟನೆ, ನಿರ್ದೇಶನದ 'ಸಲಗ' ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಚರಣ್ ಮೊದಲು ಸಂಗೀತ ನಿರ್ದೇಶನ ಮಾಡಿದ್ದು ಮಲಯಾಳಂನ 'ತಾಳಂ' ಚಿತ್ರಕ್ಕೆ.

ಹಿಂದಿ ಹಾಗೂ ಮಲಯಾಳಂ ಸಂಗೀತ ಕ್ಷೇತ್ರದಲ್ಲಿ ಸ್ನೇಹಿತರು ಹೆಚ್ಚಿರುವ ಕಾರಣ ಚರಣ್ ಬಾಲಿವುಡ್‌ನ ಚಿತ್ರವೊಂದರಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆದಿದ್ದಾರೆ. ಪ್ರಾಜೆಕ್ಟ್‌ ಬಗ್ಗೆ ತಂಡ ಯಾವ ಮಾಹಿತಿಯನ್ನು ಇನ್ನೂ ರಿವೀಲ್ ಮಾಡಿಲ್ಲ. ಕೆಲವು ದಿನಗಳ ಹಿಂದೆ ಅಭಿಷೇಕ್ ಅಂಬರೀಶ್‌ 'ಬ್ಯಾಡ್ ಮ್ಯಾನರ್ಸ್‌' ಚಿತ್ರದ ಮುಹೂರ್ತ ನಡೆದಿದೆ. ಈ ಚಿತ್ರಕ್ಕೂ ಚರಣ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ರಕ್ಷಿತ್ ಶೆಟ್ಟಿಯ 'ಸಪ್ತ ಸಾಗರದಾಚೆ ಎಲ್ಲೋ' ಹಾಗೂ ಡಾಲಿ ಧನಂಜಯ್ 'ಹೆಡ್‌ಬುಷ್' ಚಿತ್ರಕ್ಕೂ ಚರಣ್‌ ಸಂಗೀತ ಇರಲಿದೆ.