ಲಾಕ್‌ಡೌನ್‌ನ ಈ ದಿನಗಳಲ್ಲಿ ಹಲವರು ವರ್ಕ್ ಫ್ರಂ ಹೋಮ್ ಮಾಡುತ್ತಿದ್ದಾರೆ. ಅರ್ಧ ಸಂಬಳ ಆದರೂ ಸಿಗುತ್ತಿದೆ. ಅದರೆ ಕಲಾವಿದರಿಗೆ ವರ್ಕ್ ಫ್ರಂ ಹೋಂ ಅಯ್ಕೆ ಎಲ್ಲಿದೆ? ಜಾಲತಾಣಗಳಲ್ಲಿ ಹಾಡು ಹಾಡಿ ಪೋಸ್ಟ್ ಮಾಡಬಹುದು. ಇದರಿಂದ ಜನರ ಜೊತೆ ಕನೆಕ್ಟ್ ಆದ ತೃಪ್ತಿ ಸಿಗುತ್ತಿದೆ ಅಷ್ಟೇ ಎನ್ನುತ್ತಾರೆ ಖ್ಯಾತ ಗಾಯಕಿ ಅರ್ಚನಾ ಉಡುಪ. 

ಮನೆ ಕೆಲಸವೆಲ್ಲಾ ಮುಗಿದ ಬಳಿದ ಫೇಸ್‌ಬುಕ್‌ನಲ್ಲಿ ಕಾಣಿಸಿಕೊಳ್ಳುತ್ತೇನೆ. ಕ್ಯಾಮೆರಾ ಆನ್ ಮಾಡಿ ಜನಗಳಿಗೋಸ್ಕರ ನಾನು ಕಲಿತ ಜೀವನ ಪಾಠ, ನನ್ನ ಅನುಭವಗಳ ಹಿನ್ನಲೆಯಲ್ಲಿ ಒಂದು ಸಂದೇಶ ಹಂಚಿಕೊಳ್ಳುತ್ತೇನೆ. ಸಂಬಂಧಿಸಿದ ಹಾಡು ಹೇಳುತ್ತೇನೆ. ತುಂಬಾ ಮಂದಿ ನಿಮ್ಮ ಮಾತಿಗೆ ಕಾಯುತ್ತಿರುತ್ತೇನೆ. ನಿಲ್ಲಿಸಬೇಡಿ' ಅಂತ ಹೇಳುತ್ತಾರೆ. ಇದರಿಂದ ಮನಸ್ಸಿಗೆ ಸಮಾಧಾನ ಆಗುತ್ತಿದೆ. ಈ ಪ್ರತಿಕ್ರಿಯೆಗಳನ್ನು ಕಂಡಾಗ ನಾನು ಪಾರ್ಟ್ ಟೈಂ ಕೌನ್ಸಲರ್ ಆಗಬಹುದೇನೋ ಅಂತ ತಮಾಷೆಗೆ ತಾಯಿ ಜೊತೆ ಹೇಳಿ ನಗುತ್ತಿದ್ದೆ. 

ವಿಮಾನ ತಾಯ್ನೆಲ ಸ್ಪರ್ಶಿಸಿದಾಗ ನಮ್ಮೆಲ್ಲರ ಕಣ್ಣು ತೋಯ್ದುಹೋಗಿತ್ತು! : ಸೌಂದರ್ಯಾ ಜಯಮಾಲ

ಕಳೆದ ವಾರ ಲಾಕ್‌ಡೌನ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಊಟ ಹಾಕಿಸಿದೆ. ಸುಮಾರು 17 ಸಂಗೀತ ಕಲಾವಿದರ ಕುಟುಂಬಗಳಿಗೆ ಸಣ್ಣದಾಗಿ ಒಂದು ಧನ ಸಹಾಯ ಮಾಡಿ ದಿನಸಿ ಕಿಟ್ ಒದಗಿಸಿ ಬಂದೆ. ಇದು ನನಗೆ ಆತ್ಮತೃಪ್ತಿ ಕೊಡುವ ಕೆಲಸಗಳು. 

ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವಂತೆ ಕಲೆಯಿಂದ ಪಡೆದಿದ್ದನ್ನು ಕಲಾವಿದರಿಗೆ ವಾಪಸ್ ಕೊಡುವ ಪ್ರಯತ್ನ ಮಾಡಿದ್ದೇನೆ. ಲಾಕ್‌ಡೌನ್ ಮುಗಿದರೂ ಕಲಾವಿದರಿಗೆ ಒಂದು ವರ್ಷ ಕಷ್ಟವಿದೆ. 

ಮದುವೆಯಾದ 17 ವರ್ಷಗಳಲ್ಲಿ ಗಂಡ ದಿನಪೂರ್ತಿ ಮನೆಯಲ್ಲೇ ಇರೋದು ಖುಷಿ ಕೊಟ್ಟಿದೆ. ಇವರ ಜತೆ ಕಾಫಿ ಕುಡಿಯುವ ಅಭ್ಯಾಸ ಮಾಡಿದ್ದೇನೆ. ನಾನು ಹಾಡುವಾಗ ಒಮ್ಮೊಮ್ಮೆ ಅವರು ತಬಬಲ ಹಿಡಿದು ಕೂರುತ್ತಾರೆ. ನಾನು ಹಾಡುತ್ತೇನೆ. ಪ್ರಚಾರಕ್ಕೆ ಬಾರದಿದ್ದರೂ ಒಳ್ಳೆಯ ಕಂಠ ಹೊಂದಿರುವ ಅವರು ನನ್ನ ಬಲವಂತಕ್ಕೆ ಎರಡು ಹಾಡು ಹಾಡಿದ್ದಾರೆ. ಅದು ಫೇಸ್‌ಬುಕ್‌ನಲ್ಲಿ ಪಾಪ್ಯುಲರ್ ಆಯಿತು. ಅವರಿಗೆ ತಂದೆ ಶಿವಮೊಗ್ಗ ಸುಬ್ಬಣ್ಣ ಥರ ಒಳ್ಳೆಯ ಕಂಠವಿದೆ.

 

ಕೆಲವೊಮ್ಮೆ ಮಗಳು, ಮಗ ಹೊಸರುಚಿ ಮಾಡುತ್ತಾರೆ. ಯುಗಾದಿ ದಿನ ಯೂಟ್ಯೂಬ್ ನೋಡಿ ಹೋಳಿಗೆ ಮಾಡಿದ್ದು ಅಕ್ಷಯ ತೃತೀಯ, ಗಂಡನ ಬರ್ತಡೇ ದಿನ ಜಾಮೂನು ಮಾಡಿದ್ದು ಮರೆಯಲಾಗದ ನೆನಪುಗಳು..!