ಪುನೀತ್‌ಗೆ ಲಿಂಗ ದೀಕ್ಷೆ ನೀಡಿದ್ದ ಹಾವೇರಿ ಸಿಂದಗಿ ಮಠದ ಶ್ರೀಗಳು

*  ಹಾವೇರಿ ಜಿಲ್ಲೆಯೊಂದಿಗೆ ಒಡನಾಟ ಹೊಂದಿದ್ದ ಅಪ್ಪು
*  ಪುನೀತ್‌ ನಿಧನದ ಸುದ್ದಿ ಕೇಳಿ ಅಭಿಮಾನಿಗಳಿಗೆ ಶಾಕ್‌
*  ಅಪ್ಪು ನಿಧನಕ್ಕೆ ಸಂಸದ ಶಿವಕುಮಾರ್‌ ಉದಾಸಿ ಸಂತಾಪ
 

Sindagi Math Shantaveera Swamiji Linga Deeksha to Puneeth Rajkumar grg

ಹಾವೇರಿ(ಅ.30):  ಪುನೀತ್‌ ರಾಜಕುಮಾರ್‌(Puneeth Rajkumar) ಅವರ ಅಕಾಲಿಕ ನಿಧನದ(Death) ಸುದ್ದಿ ಕೇಳಿ ಜಿಲ್ಲೆಯ ಜನರು ಕಂಬನಿ ಮಿಡಿಯುತ್ತಿದ್ದಾರೆ. ಜಿಲ್ಲೆಯೊಂದಿಗೆ ಹೊಂದಿದ್ದ ಒಡನಾಟ ಹೊಂದಿದ್ದ ಪ್ರೀತಿಯ ಅಪ್ಪು ಇನ್ನಿಲ್ಲ ಎನ್ನುವುದನ್ನು ಅರಗಿಸಿಕೊಳ್ಳಲಾಗದೇ ಅಭಿಮಾನಿಗಳು(Fans) ಕಣ್ಣೀರಿಡುತ್ತಿದ್ದಾರೆ.

ಜಿಲ್ಲೆಗೆ ಅನೇಕ ಬಾರಿ ಆಗಮಿಸಿದ್ದ ಪುನೀತ್‌ಗೆ ಇಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಹಾವೇರಿ(Haveri) ಸಿಂದಗಿ ಮಠದ ಲಿಂ. ಶಾಂತವೀರ ಸ್ವಾಮೀಜಿ(Shantaveera Swamiji) ಅವರೇ ಪುನೀತ್‌ ರಾಜ್‌ಗೆ ಬಾಲ್ಯದಲ್ಲಿ ಲಿಂಗದೀಕ್ಷೆ ನೀಡಿದ್ದಾರೆ ಎನ್ನುವುದು ಜಿಲ್ಲೆಯೊಂದಿಗಿನ ರಾಜಕುಮಾರ್‌ ಕುಟುಂಬಕ್ಕಿರುವ(Rajkumar Family) ನಂಟಿಗೆ ಸಾಕ್ಷಿ. ರಾಜಕುಮಾರ್‌ ಅವರ ಅಂದಿನ ಮದ್ರಾಸ್‌ ನಿವಾಸಕ್ಕೆ ಹೋಗಿ ಡಾ. ರಾಜ್‌ ಹಾಗೂ ಪುನೀತ್‌ ಅವರಿಗೆ ಸಿಂದಗಿ ಮಠದ(Sindagi Math) ಶ್ರೀಗಳು ಲಿಂಗದೀಕ್ಷೆ ನೀಡಿದ್ದರು.

ಎರಡು ವರ್ಷಗಳ ಹಿಂದೆ ನಗರಕ್ಕೆ ಪುನೀತ್‌ ಆಗಮಿಸಿದ್ದರು. ಜೂ. ರಾಜಕುಮಾರ್‌ ಖ್ಯಾತಿಯ ಅಶೋಕ ಬಸ್ತಿ ಅವರು ನಗರದಲ್ಲಿ ನಿರ್ಮಿಸುತ್ತಿರುವ ರಾಜಕುಮಾರ ಕಲಾಭವನಕ್ಕೆ ಪುನೀತ್‌ ರಾಜಕುಮಾರ್‌ ಅವರೇ ಶಂಕುಸ್ಥಾಪನೆ ನೆರವೇರಿಸಿದ್ದರು. ಹುಬ್ಬಳ್ಳಿಗೆ(Hubballi) ಹೋಗಿ ಬರುವ ವೇಳೆ ಅನೇಕ ಬಾರಿ ಹಾವೇರಿಗೆ ಆಗಮಿಸಿದ್ದರು. ಅವರ ಆಕಸ್ಮಿಕ ನಿಧನದ ಸುದ್ದಿ ಕೇಳಿ ಮಹಿಳೆಯರು, ಮಕ್ಕಳು, ವೃದ್ಧರಾದಿಯಾಗಿ ಕಂಬನಿ ಮಿಡಿಯುತ್ತಿದ್ದಾರೆ. ಯುವಕರಂತೂ ಅಕ್ಷರಶಃ ಕಣ್ಣೀರು ಹಾಕುತ್ತಿದ್ದಾರೆ. ವಿಧಿಯನ್ನು ಹಳಿಯುತ್ತಿದ್ದಾರೆ. ಪುನೀತ್‌ ನಿಧನದ ಹಿನ್ನೆಲೆಯಲ್ಲಿ ಜಿಲ್ಲೆಯ ಚಿತ್ರಮಂದಿರಗಳನ್ನು ಬಂದ್‌ ಮಾಡಿ ಗೌರವ ಸಲ್ಲಿಸಲಾಗಿದೆ. ಅಭಿಮಾನಿಗಳು ಪುನೀತ್‌ ಭಾವಚಿತ್ರ ಇಟ್ಟು ಅಂತಿಮ ನಮನ ಸಲ್ಲಿಸುತ್ತಿದ್ದಾರೆ.

ಉತ್ತರ ಕನ್ನಡದಲ್ಲಿ ಪುನೀತ್‌ ಹೆಜ್ಜೆ: ಫ್ಯಾನ್ಸ್‌ಗೆ ಬರಸಿಡಿಲಿನಂತಾದ ಅಪ್ಪು ಅಗಲಿಕೆ

ರಾಣಿಬೆನ್ನೂರಿನ ಜತೆ ಪುನೀತ್‌ ನಂಟು

ಚಿತ್ರನಟ ಪುನೀತ್‌ ರಾಜಕುಮಾರ(Ranebennur) ರಾಣಿಬೆನ್ನೂರು ನಗರಕ್ಕೆ ಎರಡು ಬಾರಿ ಭೇಟಿ ನೀಡಿದ್ದರು ಎಂದು ಅಭಿಮಾನಿಗಳು ನೆನಪು ಮಾಡಿಕೊಂಡಿದ್ದಾರೆ.

ಐದು ಚಲನಚಿತ್ರ(Movies) ಮಂದಿರಗಳಿರುವ ನಗರದಲ್ಲಿ ಅಪ್ಪು ಚಿತ್ರದಿಂದ ಹಿಡಿದು ಇತ್ತೀಚಿನ ಯುವರತ್ನದ ವರೆಗೆ ಅವರ ಹೆಚ್ಚಿನ ಚಿತ್ರಗಳು ಬಹುತೇಕ ಎಲ್ಲ ಚಿತ್ರಮಂದಿರಗಳಲ್ಲಿ ನಟ ಪುನೀತ್‌ ರಾಜಕುಮಾರ ಅವರ ಚಲನಚಿತ್ರಗಳು ಬಿಡುಗಡೆಗೊಂಡು ಯಶಸ್ವಿಯಾಗಿವೆ.

2009ರಲ್ಲಿ ಮಿಲನ ಚಲನಚಿತ್ರ ಜನದಟ್ಟಣೆಯಲ್ಲಿ ಪ್ರದರ್ಶನಗೊಂಡ ಹಿನ್ನೆಲೆಯಲ್ಲಿ ನಗರಕ್ಕೆ ಮೊದಲ ಬಾರಿಗೆ ಆಗಮಿಸಿ ಅಭಿಮಾನಿಗಳಲ್ಲಿ ಹುರುಪು ತುಂಬಿದ್ದರು. 2019ರ ಫೆಬ್ರುವರಿ ತಿಂಗಳಿನಲ್ಲಿ ಬಿಡುಗಡೆಯಾದ ನಟಸಾರ್ವಭೌಮ ಚಲನಚಿತ್ರದ ಪ್ರಚಾರಕ್ಕಾಗಿ ನಗರದ ವೀಣಾ ಚಲನಚಿತ್ರ ಮಂದಿರಕ್ಕೆ ಎರಡನೇ ಬಾರಿ ಭೇಟಿ ನೀಡಿ ಪ್ರೇಕ್ಷಕರಲ್ಲಿ ಹರ್ಷ ಮೂಡಿಸಿದ್ದರು.

ತಾಲೂಕಿನ ಸುಕ್ಷೇತ್ರ ದೇವರಗುಡ್ಡ ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್‌ ಗುರೂಜಿ ಅವರು ಪುನೀತ್‌ ರಾಜಕುಮಾರ ಜತೆ ನಿಕಟ ಸಂಪರ್ಕ ಹೊಂದಿದ್ದರು. ಒಂದು ಬಾರಿ ಅವರ ಜತೆ ಹೆಲಿಕ್ಯಾಪ್ಟರ್‌ನಲ್ಲಿ ಪ್ರಯಾಣ ಕೂಡ ಮಾಡಿದ್ದರು.

ಪುನೀತ್‌ ನಿಧನಕ್ಕೆ ಸಂಸದ ಉದಾಸಿ ಸಂತಾಪ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದ, ಅಭಿಮಾನಿಗಳ ಪ್ರೀತಿಯ ಅಪ್ಪು, ನಟ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ ಅವರು ನಮ್ಮನ್ನಗಲಿದ ಸುದ್ದಿ ಕೇಳಿ ಅಘಾತವಾಯಿತು. ಕನ್ನಡ ಚಿತ್ರರಂಗ ಒಬ್ಬ ಪ್ರತಿಭಾವಂತ ಕಲಾವಿದನನ್ನು ಕಳೆದುಕೊಂಡು ಬಡವಾಗಿದೆ. ಅಗಲಿದ ಪುನೀತ್‌ ರಾಜಕುಮಾರ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಿ, ಅವರ ಅಪಾರ ಅಭಿಮಾನಿ ಬಳಗ ಹಾಗೂ ಕುಟುಂಬಕ್ಕೆ ಈ ನೋವು ಭರಿಸುವ ಶಕ್ತಿ ದಯಪಾಲಿಸಲಿ ಎಂದು ಸಂಸದ ಶಿವಕುಮಾರ ಉದಾಸಿ(Shivkumar Udasi) ಸಂತಾಪ(Condolences) ಸೂಚಿಸಿದ್ದಾರೆ.
 

Latest Videos
Follow Us:
Download App:
  • android
  • ios