ನಿರ್ಲಜ್ಜತೆಯ ವಿರಾಟರೂಪ, ಬೇಸರ ತರುತ್ತೆ; ಮಹಿಳಾ ರೆಸ್ಲರ್ ಎಳೆದಾಟಕ್ಕೆ ಕವಿರಾಜ್, ಸುನಿ ಅಸಮಧಾನ

ನಿರ್ಲಜ್ಜತೆಯ ವಿರಾಟರೂಪ, ಬೇಸರ ತರುತ್ತೆ ಎಂದು ನಿರ್ದೇಶಕ ಸಿಂಪಲ್ ಸುನಿ ಮತ್ತು ಕವಿರಾಜ್ ಇಬ್ಬರೂ ಮಹಿಳಾ ರೆಸ್ಲರ್ ಎಳೆದಾಟದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. 

simple suni and kaviraj reacts about women wresters protest sgk

ಭಾರ​ತೀಯ ಕುಸ್ತಿ ಫೆಡ​ರೇ​ಶ​ನ್‌​(​ಡ​ಬ್ಲ್ಯು​ಎ​ಫ್‌​ಐ) ಅಧ್ಯಕ್ಷ ಬ್ರಿಜ್‌ ​ಭೂ​ಷಣ್‌ ಸಿಂಗ್‌ರನ್ನು ಬಂಧಿ​ಸಲು ಒತ್ತಾ​ಯಿಸಿ ಭಾನು​ವಾ​ರ ನೂತನ ಸಂಸತ್‌ ಭವ​ನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕುಸ್ತಿ​ಪಟುಗಳನ್ನು ದೆಹಲಿಯ ಜಂತರ್ ಮಂತರ್‌ನಲ್ಲಿ ಪೊಲೀಸರು ತಡೆಯಲು ಯತ್ನಿಸಿದಾಗ ಎಳೆದಾಟ ಉಂಟಾಗಿ ಹೀನಾಯ ಘಟನೆ ಸಂಭವಿಸಿದೆ. ಈ ಘಟನೆ ಈಗ ಬಾರಿ ಚರ್ಚೆಗೆ ಕಾರಣವಾಗಿದೆ. ಮಹಿಳಾ ಕುಸ್ತಿ ಪಟುಗಳನ್ನು ಪೊಲೀಸರು ಎಳೆದಾಡಿದ ಫೋಟೋಗಳು ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ಕಳೆದ ಮೂರ್ನಾಲ್ಕು ತಿಂಗಳಿಂದ  ರೆಸ್ಲರ್‌ಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನವಾಗಲೇಬೇಕು, ಅಲ್ಲಿಯವರೆಗೆ ನಾವು ಧರಣಿ ಕೂರುತ್ತೇವೆ ಎಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಏನು ಪ್ರಯೋಜನವಾಗದೇ ಇದ್ದಾಗ ಕ್ರೀಡಾಪಟುಗಳು ಸಂಸತ್ ಉದ್ಘಾಟನೆಯ ದಿನ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಆದರೆ ರೆಸ್ಲರ್‌ಗಳ ಈ ಯೋಜನೆಗೆ ದೆಹಲಿ ಪೊಲೀಸರು ಬ್ರೇಕ್ ಹಾಕಿದ್ದರು. ಜಂತರ್ ಮಂತರ್‌ ಮೈದಾನದಲ್ಲಿಯೇ ರೆಸ್ಲರ್‌ಗಳನ್ನು ತಡೆದಿದ್ದರು. ದೇಶಕ್ಕೆ ಹೆಮ್ಮೆ, ಕೀರ್ತಿ ತಂಡ ಕ್ರೀಡಾಪಟುಗಳ ಸ್ಥಿತಿ ನೋಡಿ ಅನೇಕರು ಅಸಮಾಧಾನ, ಬೇಸರ ಹೊರಹಾಕುತ್ತಿದ್ದಾರೆ. ಈ ಬಗ್ಗೆ ಕನ್ನಡಗ ನಿರ್ದೇಶಕ ಸಿಂಪಲ್ ಸುನಿ ಹಾಗೂ ಚಿತ್ರಸಾಹಿತಿ ಕವಿರಾಜ್ ಸಾಮಾಜಿಕ ಜಾಲತಾಣದ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.  

Wrestlers Protest ಪಾರ್ಲಿ​ಮೆಂಟ್‌ ಮುತ್ತಿ​ಗೆಗೆ ಯತ್ನಿ​ಸಿ​ದ್ದ ಕುಸ್ತಿಪಟುಗಳ ವಿರು​ದ್ಧ ಎಫ್‌ಐಆರ್‌!

ಕವಿರಾಜ್ ಬೇಸರ 

'ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎನ್ನಲಾದ ಅತ್ಯಂತ ಗಂಭೀರ ಆರೋಪವಿರುವ ಒಬ್ಬೇ ಒಬ್ಬ ರೌಡಿ ಸಂಸದನ ರಕ್ಷಣೆಗೆ ನಿಂತು, ಒಲಿಂಪಿಕ್ ಪದಕ ಗೆದ್ದು ಇಡೀ ದೇಶವೇ ಹೆಮ್ಮೆ ಪಡುವಂತ ಅತ್ಯುನ್ನತ ಸಾಧನೆಗೈದು , ಇದೀಗ ಎರಡು ತಿಂಗಳಿಂದ ಬೀದಿಯಲ್ಲೇ ಬದುಕುತ್ತಾ ನ್ಯಾಯಕ್ಕಾಗಿ ಮೊರೆಯಿಡುತ್ತಿರುವ ಕ್ರೀಡಾಪಟುಗಳನ್ನು ಇಷ್ಟು ಹೀನಾಯವಾಗಿ ನಡೆಸಿಕೊಳ್ಳುತ್ತಾರೆಂದರೆ
ಆತ್ಮಸಾಕ್ಷಿಯನ್ನು ಸಂಪೂರ್ಣ ಕೊಂದುಕೊಂಡ , ಹೃದಯವೇ ಇಲ್ಲದ ಆಡಳಿತವೊಂದು ಮಾತ್ರ ಈ ಮಟ್ಟಿನ ಕ್ರೂರಿಯಾಗಬಹುದು. ನಿರ್ಲಜ್ಜತೆಯ ವಿರಾಟರೂಪ ದರ್ಶನವಿದು.
(Enough is enough. ಇದನ್ನೂ ಸಮರ್ಥಿಸಿ ಕಮೆಂಟ್ ಮಾಡುವವರು , ಈ ಹೊತ್ತಿನಲ್ಲೂ ಈ ಹೆಣ್ಣುಮಕ್ಕಳ ಪರ ನಿಲ್ಲದವರು ನನ್ನ ಪ್ರಕಾರ ಮನುಷ್ಯರೇ ಅಲ್ಲಾ)' ಎಂದು ಹೇಳಿದ್ದಾರೆ.

ಟಿಕಾಯತ್ ಎಂಟ್ರಿಯಿಂದ ಕುಸ್ತಿಪಟು ಪ್ರತಿಭಟೆನೆಯಲ್ಲಿ ಯು ಟರ್ನ್, ಪದಕ ನದಿಗೆ ಎಸೆಯುವ ಹೋರಾಟಕ್ಕೆ ಬ್ರೇಕ್!

ಸಿಂಪಲ್ ಸುನಿ ಅಸಮಾಧಾನ 

'ದೇಶಕ್ಕೆ ಕೀರ್ತಿ, ಪದಕ ತಂದ ಕ್ರೀಡಾ"ಪಟು"ಗಳನ್ನು ಈ ರೀತಿ ಎಳೆದೊಯ್ಯೋವುದನ್ನು ನೋಡಲು ಬೇಸರ ತರುತ್ತದೆ. ವಿಷಯ ಇಷ್ಟು ಗಂಭೀರವಾದಮೇಲೆ 'ದೊಡ್ಡವರು' ಹೋಗಿ ಮಾತನಾಡುವುದು ಉತ್ತಮ. ಕಂಪ್ಲೇಂಟ್ ಆಗಿದೆ ಕೋರ್ಟ್ ಅಲ್ಲಿದೆ. ನ್ಯಾಯಲಯದ ನಂಬಿಕೆ ಇಡಲೇಬೇಕು. ಆದರೆ ಬ್ರಿಜ್ ಭೂಷಣ್ ಸಿಂಗ್ ಆತ ಮಾಡಿದ್ದಾನೋ ಇಲ್ಲವೋ...ಆತನ ಹಿಂದಿನ ಚಟುವಟಿಕೆ ಗಳನ್ನು ನೋಡಿದರೆ ( ಮರ್ಡರ್ ಮಾಡಿರುವುದನ್ನು ಹೇಳಿದ್ದು... ದಾವುದ್‌ಗೆ ಸಹಾಯ ಮಾಡಿರುವುದಕ್ಕೆ ಸಜೆ ) ಅಷ್ಟು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದು ಆತ ಈ ರೀತಿ (president of wrestling federation of india) post ನಲ್ಲಿ ಇದ್ದಾರೆ ಎಂದರೆ. ಆತ ಕಾನೂನು ಮೇಲೆ ಪ್ರಭಾವ ಬೀರಿದರು ಆಶ್ಚರ್ಯವಿಲ್ಲ' ಎಂದಿದ್ದಾರೆ.

Latest Videos
Follow Us:
Download App:
  • android
  • ios