Asianet Suvarna News Asianet Suvarna News

Wrestlers Protest ಪಾರ್ಲಿ​ಮೆಂಟ್‌ ಮುತ್ತಿ​ಗೆಗೆ ಯತ್ನಿ​ಸಿ​ದ್ದ ಕುಸ್ತಿಪಟುಗಳ ವಿರು​ದ್ಧ ಎಫ್‌ಐಆರ್‌!

ಪಾರ್ಲಿ​ಮೆಂಟ್‌ ಮುತ್ತಿ​ಗೆಗೆ ಯತ್ನಿ​ಸಿ​ದ್ದ ಕುಸ್ತಿಪಟುಗಳು
ಗಲಭೆ ಸೇರಿ ವಿವಿಧ ಕಾಯ್ದೆ​ಗ​ಳಡಿ ಪ್ರಕ​ರಣ
ಸತ್ಯಾ​ಗ್ರಹ ಮತ್ತೆ ಶುರು​ವಾ​ಗ​ಲಿ​ದೆ: ಕುಸ್ತಿ​ಪ​ಟು​ಗ​ಳು

Delhi Police registers FIR against protest organisers wrestlers kvn
Author
First Published May 30, 2023, 9:17 AM IST

ನವ​ದೆ​ಹ​ಲಿ(ಮೇ.30): ಭಾರ​ತೀಯ ಕುಸ್ತಿ ಫೆಡ​ರೇ​ಶ​ನ್‌​(​ಡ​ಬ್ಲ್ಯು​ಎ​ಫ್‌​ಐ) ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ಸಿಂಗ್‌ರನ್ನು ಬಂಧಿ​ಸಲು ಒತ್ತಾ​ಯಿಸಿ ಭಾನು​ವಾ​ರ ನೂತನ ಸಂಸತ್‌ ಭವ​ನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕುಸ್ತಿ​ಪಟುಗಳ ವಿರುದ್ಧ ದೆಹಲಿ ಪೊಲೀ​ಸರು ಎಫ್‌​ಐ​ಆರ್‌ ದಾಖ​ಲಿ​ಸಿ​ದ್ದಾರೆ.

ಜಂತ​ರ್‌​ಮಂತ​ರ್‌​ನಿಂದ ಮೆರ​ವ​ಣಿಗೆ ಹೊರಟ ಕೂಡಲೇ ಕುಸ್ತಿ​ಪ​ಟು​ಗ​ಳನ್ನು ವಶಕ್ಕೆ ಪಡೆ​ದಿದ್ದ ಪೊಲೀ​ಸರು, ಅವರ ವಿರುದ್ಧ ಗಲಭೆ, ಪೊಲೀ​ಸರ ಕತ್ರ್ಯ​ವ್ಯಕ್ಕೆ ಅಡ್ಡಿ ಸೇರಿ​ದಂತೆ ವಿವಿಧ ಕಾಯ್ದೆ​ಗ​ಳಡಿ ಪ್ರಕ​ರಣ ದಾಖ​ಲಿ​ಸಿ​ದ್ದಾರೆ. ಅಲ್ಲದೇ, ಪ್ರತಿಭಟನಾ ಸ್ಥಳದಿಂದ 150 ಮಂದಿ, ದೆಹ​ಲಿಯ ವಿವಿಧ ಭಾಗಗಳಿಂದ 550ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ. ಎಫ್‌​ಐ​ಆರ್‌ ಬಗ್ಗೆ ಕಿಡಿ​ಕಾ​ರಿ​ರುವ ಕುಸ್ತಿ​ಪ​ಟು​ಗಳು, ಬ್ರಿಜ್‌ ವಿರುದ್ಧ ಎಫ್‌​ಐ​ಆ​ರ್‌ಗೆ 7 ದಿನ ತೆಗೆ​ದು​ಕೊಂಡಿದ್ದ ಪೊಲೀ​ಸರು, ನಮ್ಮ ವಿರುದ್ಧ 7 ಗಂಟೆ​ಗ​ಳೊ​ಳಗೆ ಕೇಸ್‌ ಹಾಕಿ​ದ್ದಾ​ರೆ’ ಎಂದಿ​ದ್ದಾರೆ.

ಪ್ರತಿ​ಭ​ಟ​ನೆಗೆ ಅವ​ಕಾ​ಶ​ವಿ​ಲ್ಲ: ಕುಸ್ತಿ​ಪ​ಟು​ಗ​ಳನ್ನು ಬಂಧಿಸಿದ ಬೆನ್ನ​ಲ್ಲೇ ಜಂತ​ರ್‌​ಮಂತರ್‌ ತೆರ​ವು​ಗೊ​ಳಿಸಿ ಅಲ್ಲಿದ್ದ ಹಾಸಿಗೆ, ಕೂಲರ್‌ ಸೇರಿ ಅಲ್ಲಿದ್ದ ಎಲ್ಲಾ ವಸ್ತು​ಗ​ಳನ್ನು ವಶ​ಕ್ಕೆ ಪಡೆ​ದಿ​ರುವ ಪೊಲೀ​ಸರು ಇನ್ನು ಪ್ರತಿ​ಭ​ಟ​ನೆಗೆ ಅವ​ಕಾ​ಶ​ವಿಲ್ಲ ಎಂದು ಸ್ಪಷ್ಟ​ಪ​ಡಿ​ಸಿ​ದ್ದಾ​ರೆ.

Wrestlers Protest ಕುಸ್ತಿಪಟುಗಳ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಲ್ಲ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ಮತ್ತೆ ಸತ್ಯಾ​ಗ್ರ​ಹ: ಪೊಲೀ​ಸರು ಜಂತ​ರ್‌​ಮಂತರ್‌ ತೆರವು​ಗೊ​ಳಿ​ಸಿ​ದ ಹೊರ​ತಾ​ಗಿ​ಯೂ ಕುಸ್ತಿ​ಪ​ಟು​ಗಳು ಮತ್ತೆ ಸತ್ಯಾ​ಗ್ರಹ ನಡೆ​ಸು​ವು​ದಾಗಿ ತಿಳಿ​ಸಿ​ದ್ದಾರೆ. ‘ನಮ್ಮ ಹೋರಾಟ ಮುಗಿ​ದಿಲ್ಲ. ಪೊಲೀ​ಸ​ರಿಂದ ಬಿಡು​ಗ​ಡೆ​ಗೊಂಡ ಬಳಿಕ ಜಂತ​ರ್‌​ಮಂತ​ರ್‌​ನಲ್ಲೇ ಸತ್ಯಾ​ಗ್ರಹ ಆರಂಭಿ​ಸು​ತ್ತೇವೆ. ವಿದೇಶಿ ಮಣ್ಣಲ್ಲಿ ಭಾರ​ತದ ಮಹಿ​ಳೆ​ಯರು ಪದಕ ಗೆಲ್ಲ​ಲು ಸಾಧ್ಯ​ವಿ​ದ್ದರೆ, ತಮ್ಮದೇ ನೆಲ​ದಲ್ಲಿ ಹೋರಾಟ ಗೆಲ್ಲುವ ಸಾಮ​ರ್ಥ್ಯವೂ ಅವ​ರಿ​ಗಿದೆ. ಅದು​ವ​ರೆಗೂ ಹೋರಾಟ ನಿಲ್ಲಿ​ಸು​ವು​ದಿ​ಲ್ಲ’ ಎಂದು ಸಾಕ್ಷಿ ಮಲಿಕ್‌ ತೀಕ್ಷ್ಣ​ವಾಗಿ ಪ್ರತಿ​ಕ್ರಿ​ಯಿ​ಸಿ​ದ್ದಾರೆ.

ಕ್ರೀಡಾ​ಪ​ಟು​ಗಳ ಖಂಡ​ನೆ

ಕುಸ್ತಿಪಟುಗಳ ಮೇಲಿನ ಪೊಲೀ​ಸರ ದೌರ್ಜನ್ಯವನ್ನು ಖ್ಯಾತ ಕ್ರೀಡಾ​ಪ​ಟು​ಗಳು ಖಂಡಿ​ಸಿದ್ದಾರೆ. ಒಲಿಂಪಿಕ್ಸ್‌ ಚಾಂಪಿ​ಯನ್‌ ನೀರಜ್‌ ಚೋಪ್ರಾ, ಅಭಿ​ನವ್‌ ಬಿಂದ್ರಾ, ಫುಟ್ಬಾಲ್‌ ತಾರೆ ಸುನಿಲ್‌ ಚೆಟ್ರಿ, ಮಾಜಿ ಕ್ರಿಕೆ​ಟಿಗ ಇರ್ಫಾನ್‌ ಪಠಾಣ್‌ ಸೇರಿ ಹಲ​ವರು ಕುಸ್ತಿ​ಪ​ಟು​ಗ​ಳನ್ನು ಬೆಂಬ​ಲಿಸಿ ಟ್ವೀಟ್‌ ಮಾಡಿದ್ದು, ಶೀಘ್ರ ನ್ಯಾಯ ಸಿಗ​ಬೇಕು ಎಂದು ಒತ್ತಾ​ಯಿ​ಸಿ​ದ್ದಾ​ರೆ.

ಕುಸ್ತಿಪಟುಗಳ ಒದ್ದಾಟ ನೋಡಿ ನಿದ್ದೆ ಬರ​ಲಿ​ಲ್ಲ

ನಮ್ಮ ಕುಸ್ತಿ​ಪ​ಟು​ಗಳ ಭಯಾ​ನಕ ಚಿತ್ರ ನನ್ನನ್ನು ತೀವ್ರ​ವಾಗಿ ಕಾಡುತ್ತಿ​ದೆ. ಅವರನ್ನು ಎಳೆದಾಡಿದ ದೃಶ್ಯಗಳನ್ನು ನೋಡಿ ನಿದ್ದೆ ಬರಲಿಲ್ಲ. ಇದು ಕ್ರೀಡಾ ಸಂಸ್ಥೆ​ಗ​ಳಲ್ಲಿ ಸುರ​ಕ್ಷತಾ ಕ್ರಮ​ಗ​ಳನ್ನು ಅಳ​ವ​ಡಿ​ಸಿ​ಕೊ​ಳ್ಳಲು ಉತ್ತಮ ಸಮಯ. ಪ್ರತಿ​ಯೋರ್ವ ಕ್ರೀಡಾ​ಪಟು ಕೂಡಾ ಸುರ​ಕ್ಷಿತ, ಸಶಕ್ತ ವಾತಾ​ವ​ರ​ಣಕ್ಕೆ ಅರ್ಹ​ರು. ಇಂತಹ ಪ್ರಕರಣಗಳನ್ನು ನಾಜೂಕಾಗಿ ನಿಭಾಯಿಸಬೇಕು.

-ಅಭಿ​ನವ್‌ ಬಿಂದ್ರಾ, ಒಲಿಂಪಿಕ್ಸ್‌ ಚಿನ್ನ ವಿಜೇತ ಶೂಟ​ರ್‌

ಇಂದಿ​ನಿಂದ ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟ​ನ್‌

ಬ್ಯಾಂಕಾ​ಕ್‌: ಥಾಯ್ಲೆಂಡ್‌ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿ ಮಂಗ​ಳ​ವಾ​ರ​ದಿಂದ ಆರಂಭ​ಗೊ​ಳ್ಳ​ಲಿದ್ದು, ಇತ್ತೀ​ಚಿನ ಟೂರ್ನಿ​ಗ​ಳಲ್ಲಿ ಪದಕ ಬರ ಎದು​ರಿ​ಸು​ತ್ತಿ​ರುವ ಪಿ.ವಿ.​ಸಿಂಧು, ಕಿದಂಬಿ ಶ್ರೀಕಾಂತ್‌ ಸೇರಿ​ದಂತೆ ಭಾರ​ತದ ಪ್ರಮು​ಖ ಶಟ್ಲ​ರ್‌​ಗಳು ಕಣ​ಕ್ಕಿ​ಳಿ​ಯ​ಲಿ​ದ್ದಾರೆ. ಆದರೆ ಭಾನು​ವಾ​ರ​ವಷ್ಟೇ ಮಲೇಷ್ಯಾ ಮಾಸ್ಟ​ರ್ಸ್‌ ಪ್ರಶಸ್ತಿ ಗೆದ್ದಿದ್ದ ಎಚ್‌.​ಎ​ಸ್‌.​ಪ್ರ​ಣಯ್‌ ಟೂರ್ನಿ​ಯಲ್ಲಿ ಆಡು​ತ್ತಿಲ್ಲ. 

ಪುರು​ಷರ ಸಿಂಗ​ಲ್ಸ್‌​ನಲ್ಲಿ ಲಕ್ಷ್ಯ ಸೇನ್‌, ಆರ್ಲಿ​ಯಾನ್ಸ್‌ ಮಾಸ್ಟ​ರ್ಸ್‌ ಚಾಂಪಿ​ಯನ್‌ ಪ್ರಿಯಾನ್ಶು ರಾಜಾ​ವತ್‌ ಕೂಡಾ ಸ್ಪರ್ಧಿ​ಸು​ತ್ತಿ​ದ್ದಾರೆ. ಇನ್ನು ಮಹಿಳಾ ಸಿಂಗ​ಲ್ಸ್‌​ನಲ್ಲಿ ಸಿಂಧು ಜೊತೆ ಸೈನಾ ನೆಹ್ವಾಲ್‌ ಕಣ​ಕ್ಕಿ​ಳಿ​ಯ​ಲಿದ್ದಾರೆ. ತಾರಾ ಪುರು​ಷ ಡಬಲ್ಸ್‌ ಜೋಡಿ, ವಿಶ್ವ ನಂ.4 ಸಾತ್ವಿ​ಕ್‌-ಚಿರಾಗ್‌ ಶೆಟ್ಟಿ ಪದಕ ಗೆಲ್ಲುವ ನಿರೀ​ಕ್ಷೆ​ಯ​ಲ್ಲಿದ್ದು, ಅಶ್ವಿನಿ ಭಟ್‌-ಶಿಖಾ ಗೌತಮ್‌ ಮಹಿಳಾ ಡಬ​ಲ್ಸ್‌​ನಲ್ಲಿ ಆಡ​ಲಿ​ದ್ದಾ​ರೆ.

Follow Us:
Download App:
  • android
  • ios