ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷನ್ ಬಂಧನಕ್ಕೆ ಆಗ್ರಹಿಸಿ ನಡೆಸತ್ತಿರುವ ಕುಸ್ತಿಪಟುಗಳ ಪ್ರತಿಭಟನೆ ದಿಡೀರ್ ಯು ಟರ್ನ್ ಪಡೆದುಕೊಂಡಿದೆ. ಹರಿದ್ವಾರದಲ್ಲಿ ನದಿಗೆ ಪದಕ ಎಸೆಯಲು ಮುಂದಾಗಿದ್ದ ಕುಸ್ತಿಪಟುಗಳ ಹೋರಾಟಕ್ಕೆ ರೈತ ಮುಖಂಡ ನರೇಶ್ ಟಿಕಾಯತ್ ಎಂಟ್ರಿಕೊಟ್ಟಿದ್ದಾರೆ. ಇದರ ಪರಿಣಾಮ ಕುಸ್ತಿಪಟುಗಳ ತಮ್ಮ ಪದಕ ಟಿಕಾಯತ್‌ಗೆ ನೀಡಿದ್ದಾರೆ.

ನವದೆಹಲಿ(ಮೇ.30):ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವು ಕುಸ್ತಿಪಟುಗಳು ದೆಹಲಿಯಲ್ಲಿ ಸತತ ಪ್ರತಿಭಟನೆ ನಡೆಸುತ್ತಿದ್ದಾರೆ. ಕುಸ್ತಿಪಟುಗಳ ಹೋರಾಟಕ್ಕೆ ಕೇಂದ್ರ ನಾಯಕರು ಸೊಪ್ಪಿ ಹಾಕಿಲ್ಲ. ಇತ್ತ ವಿಪಕ್ಷಗಳು ಸಂಪೂರ್ಣ ಬೆಂಬಲ ಸೂಚಿಸಿದೆ. ಹಲವು ಕ್ರೀಡಾಪಟುಗಳು ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ್ದಾರೆ. ಇದರ ನಡುವೆ ಬ್ರಿಜ್ ಭೂಷಣ್ ಬಂಧನಕ್ಕೆ ಆಗ್ರಹಿಸಿ ಹೋರಾಟ ತೀವ್ರಗೊಳಿಸಿದ ಕುಸ್ತಿಪಟುಗಳು ಇಂದ ಹರಿದ್ವಾರದಲ್ಲಿ ತಮ್ಮ ಪದಕಗಳನ್ನು ನದಿ ಎಸೆಯುವುದಾಗಿ ಘೋಷಿಸಿದ್ದರು. ಇದಕ್ಕಾಗಿ ಹರಿದ್ವಾರ ತಲುಪಿದ ಕುಸ್ತಿಪಟುಗಳ ಹೋರಾಟದ ನಡುವೆ ರೈತ ಮುಖಂಡ ನರೇಶ್ ಟಿಕಾಯತ್ ಎಂಟ್ರಿಕೊಟ್ಟಿದ್ದಾರೆ. ಕುಸ್ತಿಪಟುಗಳ ಜೊತೆ ಮಾತುಕತೆ ನಡೆಸಿದ ಟಿಕಾಯತ್ 5 ದಿನದ ಕಾಲಾವಕಾಶ ಕೇಳಿದ್ದಾರೆ. ಹೀಗಾಗಿ ಕುಸ್ತಿಪಟುಗಳು ಪದಕ ನದಿಗೆ ಎಸೆಯುವ ಹೋರಾಟ ಕೈಬಿಟ್ಟು,ಟಿಕಾಯತ್‌ಗೆ ಹಸ್ತಾಂತರಿಸಿದ್ದಾರೆ. 

ಭಾರತೀಯ ಕಿಸಾನ್ ಯುನಿಯನ್ ಅಧ್ಯಕ್ಷ ನರೇಶ್ ಟಿಕಾಯತ್ ಹರಿದ್ವಾರಕ್ಕೆ ಆಗಮಿಸಿ ಕುಸ್ತಿಪಟುಗಳ ಜೊತೆ ಮಾತುಕತೆ ನಡೆಸಿದ್ದಾರೆ. ತಾವು ಮುಡಿಗೇರಿಸಿಕೊಂಡ ಪದಕಗಳನ್ನು ಗಂಗಾ ನದಿಗೆ ಎಸೆಯಲು ಸಜ್ಜಾಗಿದ್ದ ಕುಸ್ತಿಪಟುಗಳು ತಮ್ಮ ಹೋರಾಟ ಕೈಬಿಟ್ಟಿದ್ದಾರೆ. ಟಿಕಾಯತ್ 5 ದಿನದ ಕಾಲಾವಕಾಶ ಕೇಳಿದ್ದಾರೆ. ಈ 5 ದಿನದಲ್ಲಿ ನ್ಯಾಯ ಒದಗಿಸಿಕೊಡುವ ಭರವಸೆಯನ್ನು ನೀಡಿದ್ದಾರೆ.

Wrestlers Protest ಪಾರ್ಲಿ​ಮೆಂಟ್‌ ಮುತ್ತಿ​ಗೆಗೆ ಯತ್ನಿ​ಸಿ​ದ್ದ ಕುಸ್ತಿಪಟುಗಳ ವಿರು​ದ್ಧ ಎಫ್‌ಐಆರ್‌!

ಟಿಕಾಯತ್ ನೀಡಿದ ಭರವಸೆ ಹಿನ್ನಲೆಯಲ್ಲಿ ಕುಸ್ತಿಪಟುಗಳು ಹೋರಾಟ ಕೈಬಿಟ್ಟು ಹರಿದ್ವಾರದಿಂದ ಮರಳಿದ್ದಾರೆ. ಇದೀಗ ಕುಸ್ತಿಪಟುಗಳ ಹೋರಾಟ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಹೋರಾಟಕ್ಕೆ ಬಹುತೇಕ ಕ್ರೀಡಾಪಟುಗಳು, ವಿಪಕ್ಷಗಳು ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಇದು ಕೇಂದ್ರ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಖಂಭವಾಗಿದೆ. 

Scroll to load tweet…

ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ರನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಈಗ ತಮ್ಮ ಹೋರಾಟವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ. ತಾವು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸುವಂತೆ ಒಲಿಂಪಿಕ್‌ ಪದಕ ವಿಜೇತರು ಸೇರಿ ತಾರಾ ವಿದೇಶಿ ಅಥ್ಲೀಟ್‌ಗಳನ್ನು ಸಂಪರ್ಕಿಸಲು ಯೋಜನೆ ರೂಪಿಸಿದ್ದಾರೆ ಎಂದು ತಿಳಿದುಬಂದಿದೆ. ‘ನಾವು ಈ ಪ್ರತಿಭಟನೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದೇವೆ. ಹಲವು ದೇಶಗಳ ಒಲಿಂಪಿಕ್ಸ್‌ ಪದಕ ವಿಜೇತರು, ಅಂ.ರಾ. ಕ್ರೀಡಾಪಟುಗಳನ್ನು ಸಂಪರ್ಕಿಸಲಿದ್ದೇವೆ. ಅವರ ಬೆಂಬಲ ಕೋರಿ ಪತ್ರ ಬರೆಯಲಿದ್ದೇವೆ’ ಎಂದು ಏಷ್ಯನ್‌ ಗೇಮ್ಸ್‌ ಚಿನ್ನ ವಿಜೇತ ಕುಸ್ತಿಪಟು ವಿನೇಶ್‌ ಫೋಗಾಟ್‌ ಸುದ್ದಿಗಾರರಿಗೆ ತಿಳಿಸಿದ್ದರು.

Wrestlers Protest 'ಹಾಡುಹಗಲೇ ಪ್ರಜಾಪ್ರಭುತ್ವದ ಕಗ್ಗೊಲೆ': ಕುಸ್ತಿಪಟುಗಳನ್ನು ಬಂಧಿಸಿದ ಡೆಲ್ಲಿ ಪೊಲೀಸರು..!