ಸೈಮಾ ಅವಾರ್ಡ್ ಕನ್ನಡ-2024 ವಿಜೇತರು ಯಾರು? ಕುತೂಹಲಕ್ಕೆ ಉತ್ತರ ಇಲ್ಲಿದೆ!
ಈ ಬಾರಿ ಕನ್ನಡಕ್ಕೆ ಒಟ್ಟೂ ಹತ್ತೊಂಬತ್ತು (19) ಪ್ರಶಸ್ತಿಗಳು ಬಂದಿವೆ. ದರ್ಶನ್ ನಟನೆಯ 'ಕಾಟೇರ' ಚಿತ್ರಕ್ಕೆ ಬೆಸ್ಟ್ ಕನ್ನಡ ಸಿನಿಮಾ ಅವಾರ್ಡ್ ಲಭಿಸಿದೆ. ಹಾಗಿದ್ದರೆ ಈ ಬಾರಿಯ ಸೈಮಾ..
ಸೈಮಾ ಅವಾರ್ಡ್-2024 ಘೋಷಣೆಯಾಗಿದೆ. ಈ ಬಾರಿ ಕನ್ನಡಕ್ಕೆ ಒಟ್ಟೂ ಹತ್ತೊಂಬತ್ತು (19) ಪ್ರಶಸ್ತಿಗಳು ಬಂದಿವೆ. ನಿರೀಕ್ಷೆಯಂತೆಯೇ ದರ್ಶನ್ ನಟನೆಯ 'ಕಾಟೇರ' ಚಿತ್ರಕ್ಕೆ ಬೆಸ್ಟ್ ಕನ್ನಡ ಸಿನಿಮಾ ಅವಾರ್ಡ್ ಲಭಿಸಿದೆ. ಹಾಗಿದ್ದರೆ ಈ ಬಾರಿಯ ಸೈಮಾ-2024 ಅವಾರ್ಡ್ ಯಾರಯಾರ ಪಾಲಾಗಿದೆ, ನೋಡಿ.. ಕನ್ನಡ ನಟ ದುನಿಯಾ ವಿಜಯ್ ತೆಲುಗಿನ 'ವೀರ ಸಿಂಹ ರೆಡ್ಡಿ' ಚಿತ್ರಕ್ಕೆ ಉತ್ತಮ ಖಳನಟ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ನಟ ಸುಂದರ್ ಕೃಷ್ಣ ಅರಸು 'ಅದೊಂದು' ತಪ್ಪಿನಿಂದಲೇ ಸಾವನ್ನಪ್ಪಿದರೋ ಹೇಗೆ?
ಉತ್ತಮ ಸಿನಿಮಾ: ಕಾಟೇರ
ಉತ್ತಮ ನಟ: ರಕ್ಷಿತ್ ಶೆಟ್ಟಿ (ಸಪ್ತ ಸಾಗರದಾಚೆ ಎಲ್ಲೋ)
ಉತ್ತಮ ನಟಿ: ಚೈತ್ರಾ ಜೆ ಆಚಾರ್ (ಟೋಬಿ)
ಉತ್ತಮ ನಿರ್ದೇಶಕ: ಹೇಮಂತ್ ರಾವ್ (ಸಪ್ತ ಸಾಗರದಾಚೆ ಎಲ್ಲೋ- ಸೈಡ್-ಎ)
ಉತ್ತಮ ಚೊಚ್ಚಲ ನಿರ್ದೇಶಕ: ನಿತಿನ್ ಕೃಷ್ಣಮೂರ್ತಿ ()ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ)
ಉತ್ತಮ ನಟ: (ಕ್ರಿಟಿಕ್ಸ್): ಧನಂಜಯ್ (ಗುರುದೇವ್ ಹೊಯ್ಸಳ)
ಉತ್ತಮ ನಟಿ (ಕ್ರಿಟಿಕ್ಸ್): ರುಕ್ಮಿಣಿ ವಸಂತ್ (ಸಪ್ತ ಸಾಗರದಾಚೆ ಎಲ್ಲೋ-ಸೈಡ್-ಎ)
ಉತ್ತಮ ಚೊಚ್ಚಲ ನಟಿ: ಆರಾಧನಾ ರಾಮ್ (ಕಾಟೇರ)
ಉತ್ತಮ ಖಳನಾಯಕ: ರಮೇಶ್ ಇಂದಿರಾ (ಸಪ್ತ ಸಾಗರದಾಚೆ ಎಲ್ಲೋ-ಸೈಡ್-ಎ)
ಉತ್ತಮ ಸಂಗೀತ ನಿರ್ದೇಶಕ: ವಿ ಹರಿಕೃಷ್ಣ (ಕಾಟೇರ)
ಉತ್ತಮ ಹಿನ್ನೆಲೆ ಗಾಯಕಿ: ಮಂಗ್ಲಿ (ಕಾಟೇರ)
ಉತ್ತಮ ಹಿನ್ನೆಲೆ ಗಾಯಕ: ಕಪಿಲ್ ಕಪಿಲನ್ (ಸಪ್ತ ಸಾಗರದಾಚೆ ಎಲ್ಲೋ-ಸೈಡ್-ಎ)
ಉತ್ತಮ ಚೊಚ್ಚಲ ಕಲಾವಿದ: ಶಿಶಿರ ಬೈಕಡಿ (ಡೇರ್ ಡೆವಿಲ್ ಮುಸ್ತಫಾ)
ಉತ್ತಮ ಚೊಚ್ಚಿಲ ನಿರ್ಮಾಣ: ಕೈವ
ಉತ್ತಮ ಸಾಹಿತ್ಯ: ಧನಂಜಯ್ (ಟಗರು ಪಲ್ಯ)
ಉತ್ತಮ ಪೋಷಕ ನಟ: ನವೀನ್ ಶಂಕರ್ (ಹೊಂದಿಸಿ ಬರೆಯಿರಿ)
ಉತ್ತಮ ಪೋಷಕ ನಟಿ: ಸಂಯುಕ್ತ ಹೊರನಾಡು (ಟೋಬಿ)
ಉತ್ತಮ ಹಾಸ್ಯ ನಟ: ಅನಿರುದ್ದ ಆಚಾರ್ಯ (ಆಚಾರ್ಯ & ಕೋ)
ಐವತ್ತು ವರ್ಷಗಳ ಅಮೋಘ ಸಿನಿ ಸಾಧನೆ: ಶಿವರಾಜ್‌ಕುಮಾರ್
ಬಿಡುಗಡೆ ಹೊಸ್ತಿಲಲ್ಲಿರುವ 'ದೇವರ'ಗೆ ಢವ ಢವ ಯಾಕಾಗ್ತಿದೆ? ರಾಜಮೌಳಿ ಕಾಡ್ತಿದಾರಾ?
ಕನ್ನಡ ಸಿನಿರಂಗದಲ್ಲಿ ಐವತ್ತು (50) ವರ್ಷಗಳ ಸಾಧನೆಗಾಗಿ ನಟ ಶಿವರಾಜ್‌ಕುಮಾರ್ ಅವರು ಈ ಬಾರಿಯ ಸೈಮಾ ವಿಶೇಷ ಪ್ರಶಸ್ತಿಯನ್ನು ಎದ್ದುಕೊಂಡಿದ್ದಾರೆ. ಈ ಪ್ರಶಸ್ತಿ ವಿತರಣಾ ಸಮಾರಂಭ ದುಬೈನಲ್ಲಿ ನಡೆಯಿತು.