ನಟ ಸುಂದರ್ ಕೃಷ್ಣ ಅರಸು 'ಅದೊಂದು' ತಪ್ಪಿನಿಂದಲೇ ಸಾವನ್ನಪ್ಪಿದರೋ ಹೇಗೆ?

ನಟ ಸುಂದರ್ ಕೃಷ್ಣ ಅರಸು ಅವರಿಗೆ ಯಾವುದೇ ಕೆಟ್ಟ ಚಟಗಳೂ ಇರಲಿಲ್ಲ. ಅದರೆ, ಅವರಿಗೆ ಅಪಾರವಾದ ಸಿನಿಮಾ ಪ್ರೀತಿಯಿತ್ತು. ಒಂದು ತಪ್ಪು ನಿರ್ಧಾರ ಅವರ ಬದುಕನ್ನು ಮುಗಿಸಿ ಬಿಟ್ಟಿತಾ? ಅಥವಾ ಅದು ವಿಧಿ ಲಿಖಿತವೇ ಆಗಿತ್ತಾ?

Kannada villain actor Sundar Krishna Urs died at 52 age srb

ಕನ್ನಡದ ಹೆಸರಾಂತ ನಟ ಸುಂದರ್ ಕೃಷ್ಣ ಅರಸು (Sundar Krishna Urs) ಗೊತ್ತಿಲ್ಲದವರು ಕಡಿಮೆ. ಇಂದಿನ ಜನರೇಶನ್‌ಗೆ ಈ ಹೆಸರು ಹೊಸದು ಎನ್ನಿಸಬಹುದು. ಆದರೆ 70-80ರ ದಶಕದ ಕನ್ನಡ ಸಿನಿ ಪ್ರೇಕ್ಷಕರಿಗೆ ಸುಂದರ್ ಕೃಷ್ಣ ಅರಸ್ ಬಹಳಷ್ಟು ಪ್ರಸಿದ್ಧ ಹೆಸರು. ಹೆಚ್ಚಾಗಿ ಖಡಕ್ ವಿಲನ್ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದರೂ ಸಾಕಷ್ಟು ವಿಭಿನ್ನ ಪಾತ್ರಗಳಲ್ಲಿ ಕೂಡ ಅವರು ಕಾಣಿಸಿಕೊಂಡಿದ್ದಾರೆ. ಡಾ ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಅನಂತ್‌ನಾಗ್ ಮುಂತಾದ ದಿಗ್ಗಜರೊಂದಿಗೂ ಅವರು ನಟಿಸಿದ್ದಾರೆ. 

ನಟ ಸುಂದರ್ ಕೃಷ್ಣ ಅರಸು ಅವರು ಅಂದು ಬಹಳಷ್ಟು ಹೆಸರು ಮಾಡಿದ್ದ ನಟರಾಗಿದ್ದರು. ಆದರೆ, ಕೇವಲ 52ನೇ ವರ್ಷಕ್ಕೇ ಅವರು ವಿಧಿವಶರಾದರು. ಅಷ್ಟು ಬೇಗ ಅವರು ಅಸು ನೀಗಿದ್ದು ಹೇಗೆ ಗೊತ್ತೇ? ಅದನ್ನು ತಿಳಿದರೆ ಯಾರದೇ ಕಣ್ಣಂಚು ಒದ್ದೆಯಾಗುತ್ತದೆ. ಅವರ ಸಿನಿಮಾ ಪ್ರೀತಿ ಹಾಗೂ ನಿರ್ಮಾಪಕರ ಮೇಲಿನ ಗೌರವ ಕಂಡು ಅಭಿಮಾನ ಉಕ್ಕಿ ಹರಿಯುತ್ತದೆ. ಹಾಗಿದ್ದರೆ ಸುಂದರ್ ಕೃಷ್ಣ ಅರಸು ಅವರಿಗೆ ಏನಾಗಿತ್ತು? ಇಲ್ಲಿದೆ ಡೀಟೇಲ್ಸ್..

ಸಾಧು ಕೋಕಿಲ ಬಗ್ಗೆ ಉಪೇಂದ್ರ ಹೇಳಿದ್ದೇನು? ರಕ್ತ ಕಣ್ಣೀರು ಟೈಮಲ್ಲಿ ಏನ್ ಮಾಡಿದ್ರಂತೆ..!?

ನಟ ಸುಂದರ್ ಕೃಷ್ಣ ಅರಸು ಅವರಿಗೆ ಯಾವುದೇ ಕೆಟ್ಟ ಚಟಗಳೂ ಇರಲಿಲ್ಲ. ಅದರೆ, ಅವರಿಗೆ ಅಪಾರವಾದ ಸಿನಿಮಾ ಪ್ರೀತಿಯಿತ್ತು. ಒಂದು ತಪ್ಪು ನಿರ್ಧಾರ ಅವರ ಬದುಕನ್ನು ಮುಗಿಸಿ ಬಿಟ್ಟಿತಾ? ಅಥವಾ ಅದು ವಿಧಿ ಲಿಖಿತವೇ ಆಗಿತ್ತಾ? ಹಾಗಿದ್ದರೆ ಆಗಿದ್ದೇನು ಅಂದರೆ, ನಟ ಸುಂದರ್ ಕೃಷ್ಣ ಅರಸು ಅವರಿಗೆ ಟೈಫಾಯಿಡ್ ಜ್ವರ ಬಂದಿತ್ತಂತೆ. ವೈದ್ಯರು ಸಿನಿಮಾ ಶೂಟಿಂಗ್‌ಗೆ ಆಗ ಹೋಗುವುದು ಬೇಡ ಅಂದಿದ್ದರಂತೆ. 

ಆದರೆ, ನಟ ಸುಂದರ್ ಕೃಷ್ಣ ಅರಸು ಅವರದು ಒಂದು ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಇತ್ತು. ಸುಧಾರಾಣಿ ಹಾಗು ಶಶಿಕುಮಾರ್ ನಟನೆಯ 'ಸ್ವಾತಿ' ಚಿತ್ರವದು. ಆ ಚಿತ್ರದಲ್ಲಿ ಅವರದು ಬಹು ಮುಖ್ಯವಾದ ಪಾತ್ರವಾಗಿತ್ತು. ಚಿಕ್ಕಮಗಳೂರಿನಲ್ಲಿ ಶೂಟಿಂಗ್ ಇತ್ತು. ನಿರ್ಮಾಪಕರ ಕಡೆಯಿಂದ ಕಾಲ್ ಬಂದಾಗ, ಜ್ವರ ಆಗಿರುವ ಸಂಗತಿ ಹೇಳಿ, ಬರಲಾಗುವುದಿಲ್ಲ ಎಂದಿದ್ದರಂತೆ. ಆದರೆ, ಕ್ಲೈಮ್ಯಾಕ್ಸ್ ಶೂಟಿಂಗ್, ಸ್ವಲ್ಪವೇ ಹೊತ್ತು ಎಂದಾಗ ಓಕೆ ಅಂತ ಹೇಳಿ ಹೊರಟುಬಿಟ್ಟರಂತೆ. 

ಮತ್ತೆ ಬಂದ್ರು ಕಾಶೀನಾಥ್ ಮಗ ಅಭಿಮನ್ಯು; ಎಲ್ಲಿಗೆ ಪಯಣ ಯಾವುದೋ ದಾರಿ..!?

ನಿರ್ಮಾಪಕರಿಗೆ ನಷ್ಟವಾಗುವುದು ಬೇಡ ಎಂದು ಟೈಫಾಯಿಡ್ ಇದ್ದಗಲೂ ಒಪ್ಪಿಕೊಂಡು ಶೂಟಿಂಗ್‌ ಮಾಡಿಕೊಟ್ಟರು. ಶೂಟಿಂಗ್‌ ಏನೋ ಮುಗಿಯಿತು, ಆದರೆ, ಅದಾದ ಬಳಿಕ ಸುಂದರ್ ಕೃಷ್ಣ ಅರಸು ಅವರ ಆರೋಗ್ಯ ಮತ್ತಷ್ಟು ಹದಗೆಟ್ಟು ಆಸ್ಪತ್ರೆ ಸೇರಿಕೊಂಡರು. ಐದಾರು ದಿನಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಗುಣಮುಖರಾಗಲೇ ಇಲ್ಲ. ಕೊನೆಗೂ ಅವರು ಇಹಲೋಕ ತ್ಯಜಿಸಿಬಿಟ್ಟರು. ಕೇವಲ 52 ವರ್ಷಕ್ಕೇ ಪ್ರತಿಭಾನ್ವಿತ ನಟರೊಬ್ಬರನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿತು. 

Latest Videos
Follow Us:
Download App:
  • android
  • ios