Asianet Suvarna News Asianet Suvarna News

ನಟಿ ಶ್ರುತಿ ಕೃಷ್ಣ ರೋಮಾಂಚಕಾರಿ ಸ್ಕೈಡೈವಿಂಗ್​ ವಿಡಿಯೋ: ಉಸಿರು ಬಿಗಿಹಿಡಿದು ನೋಡಿದ ಫ್ಯಾನ್ಸ್​

ಅತ್ಯಂತ ರೋಮಾಂಚಕಾರಿ ಕ್ರೀಡೆಗಳಲ್ಲಿ ಒಂದಾಗಿರುವ ಸ್ಕೈ ಡೈವಿಂಗ್​  ಮಾಡುವ ಮೂಲಕ ಸ್ಯಾಂಡಲ್​ವುಡ್​ ನಟಿ  ಶ್ರುತಿ ಕೃಷ್ಣ ಅದರ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಹೀಗಿದೆ ನೋಡಿ ಅವರ ಅನುಭವ...
 

Shruthi Krishnaa has shared a video of sky diving which is one of the most exciting sports suc
Author
First Published Oct 1, 2024, 9:55 PM IST | Last Updated Oct 2, 2024, 3:05 PM IST

ಎದೆ ಗಟ್ಟಿ ಇದ್ದವರಿಗೆ ಮಾತ್ರ ನಡೆಯುವ ಕ್ರೀಡೆ ಎನ್ನಿಸಿಕೊಂಡಿರುವ ಕೆಲವು ಕ್ರೀಡೆಗಳಲ್ಲಿ ಒಂದು ಸ್ಕೈ ಡೈವಿಂಗ್. ಕನ್ನಡದಲ್ಲಿ ಇದನ್ನು ಧುಮುಕುಕೊಡೆ ಎಂದೂ ಹೇಳಲಾಗುತ್ತದೆಯಾದರೂ, ಹಾಗೆ ಹೇಳಿದರೆ ಯಾರಿಗೂ ಅರ್ಥವಾಗದೇ ಹೋದೀತು.  ಸ್ಕೈ ಡೈವಿಂಗ್ ಅನ್ನು ಹೆಚ್ಚಾಗಿ ಬಂಗೀ ಜಂಪಿಂಗ್ ಮತ್ತು ಪ್ಯಾರಾ-ಗ್ಲೈಡಿಂಗ್‌ನಂತಹ ಕ್ರೀಡೆಗಳೊಂದಿಗೆ ಹೋಲಿಕೆ ಮಾಡಲಾಗುತ್ತದೆ.  ಇವುಗಳನ್ನು ಸಾಮಾನ್ಯವಾಗಿ ವೈಮಾನಿಕ ವಿಪರೀತ ಕ್ರೀಡೆಗಳೆಂದು ವಿವರಿಸಲಾಗುತ್ತದೆ. ಈ ಕ್ರೀಡೆಯನ್ನು ನುರಿತರ ಜೊತೆಯೇ ಆಡಬೇಕು. ಸ್ವಲ್ಪ ಎಡವಟ್ಟಾದರೂ ಅಷ್ಟೇ. ಸೀದಾ ಮೇಲೆ ಹೋಗುವುದೇ. ಇದೇ ಕಾರಣಕ್ಕೆ ಧೈರ್ಯ ಇದ್ದವರು ಮಾತ್ರ ಇದನ್ನು ಆಡಬೇಕು. ಇದೀಗ ನಟಿ ಶ್ರುತಿ ಕೃಷ್ಣಾ ಅವರು ಈ ಸಾಹಸಮಯ ರೋಮಾಂಚಕ ಕ್ರೀಡೆಯನ್ನು ಆಡಿದ್ದು, ಅದನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. 

ಹೌದು. ಹುಟ್ಟುಹಬ್ಬದ ತಿಂಗಳಿನಲ್ಲಿಯೇ ನಾನು ಇಂಥ ಒಂದು ರೋಮಾಂಚನಕಾರಿಯಾಗಿ ಆಟ ಆಡಿರುವುದಕ್ಕೆ ಖುಷಿಯಾಗುತ್ತದೆ ಎಂದು ನಟಿ ಹೇಳಿಕೊಂಡಿದ್ದಾರೆ. ಅಂದಹಾಗೆ ಶ್ರುತಿ ಅವರು ಈ ಸೆಪ್ಟೆಂಬರ್​ 18ರಂದು 49 ವರ್ಷಗಳನ್ನು ಪೂರೈಸಿದ್ದಾರೆ. ಈ ಸಂದರ್ಭದಲ್ಲಿ, ಸಾಹಸಮಯ ಕ್ರೀಡೆಯಲ್ಲಿ ಪಾಲ್ಗೊಂಡು ಅದರ ರೋಮಾಂಚಕಾರಿ ಅನುಭವದ ಬುತ್ತಿಯನ್ನು ತೆರೆದಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಕ್ರೀಡೆಯ ಸಂಪೂರ್ಣ ಆನಂದವನ್ನು ನಾವು ಸವಿಯಬಹುದಾಗಿದೆ. ಅಂದಹಾಗೆ, ಶ್ರುತಿ, ನಟಿ ಹಾಗೂ ರಾಜಕಾರಣಿ  ಮಾತ್ರವಲ್ಲದೇ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಒಂದಾದ ಮೇಲೊಂದರಂತೆ ಅಳುವ ದೃಶ್ಯಗಳಲ್ಲಿಯೇ ನಟಿಸುತ್ತಾ, ಎಲ್ಲರನ್ನೂ ಅಳಿಸುತ್ತಿದ್ದ ಶ್ರುತಿ ಅವರು ಕನ್ನಡ ಚಿತ್ರರಂಗ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳ ಚಿತ್ರರಂಗದಲ್ಲಿಯೂ ಸಕತ್​ ಫೇಮಸ್​ ಆದವರು.  

ಡ್ರೆಸ್​ ಸರಿಮಾಡಿಕೊಳ್ಳೊಷ್ಟ್ರಲ್ಲಿ ಆಗಬಾರದ್ದು ಆಗೋಯ್ತು! ಎಲ್ಲಾ ಆದ್ಮೇಲೆ ಇನ್ನೇನು ಮಾಡೋದು ಕೇಳ್ತಿದ್ದಾರೆ ಟ್ರೋಲಿಗರು

1990 ರ ದಶಕದಲ್ಲಿ ಕನ್ನಡ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದ ಶ್ರುತಿ ಇಂದಿಗೂ ನಟನೆಯನ್ನು ಮುಂದುವರೆಸಿದ್ದಾರೆ. ತಮ್ಮ  25 ವರ್ಷಗಳ ವೃತ್ತಿಜೀವನದಲ್ಲಿ ಮೂರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದ ನಟಿ, ಲಾಕ್​ ಡೌನ್  ಸಮಯದಲ್ಲಿ ಶೂಟಿಂಗ್​ ಎಲ್ಲವೂ ಸ್ಟಾಪ್​ ಆಗಿದ್ದ ಸಂದರ್ಭದಲ್ಲಿ  ತಮ್ಮ ಮಗಳ ಜೊತೆ ಮೈಸೂರಿನ ಹತ್ತಿರ ಇರುವ ತಮ್ಮ 25 ಎಕರೆ ತೋಟದಲ್ಲಿ ವಾಸವಾಗಿದ್ದರು. ತಮ್ಮ ತೋಟದಲ್ಲಿ ಪರಿಸರ ಸ್ನೇಹಿ ಮನೆಯನ್ನು ಸಿಮೆಂಟ್ ಬಳಸದೆ, ಕೇವಲ ಕಲ್ಲು ಮಣ್ಣಿನಿಂದ ಸುಂದರವಾದ ಕಟ್ಟಿದ್ದಾರೆ.

ಕೃಷಿಯಲ್ಲಿಯೂ ವಿಪರೀತ ಆಸಕ್ತಿ ಇರುವ ಶ್ರುತಿಯವರು  ಸಾವಯುವ ಕೃಷಿ ಮೂಲಕ ತಮ್ಮ ತೋಟದಲ್ಲಿ ಅನೇಕ ತರಕಾರಿ ಬೆಳೆಸಿದ್ದಾರೆ. ಹಿಂದೊಮ್ಮೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದ ನಟಿ, ತಮ್ಮ  ತೋಟದಲ್ಲಿ  ಮಹಿಳೆಯರೇ ಹೆಚ್ಚು ಕೆಲಸ ಮಾಡುತ್ತಾರೆ ಎಂದಿದ್ದರು.  ತಮ್ಮ ತೋಟದಲ್ಲಿ ಬೆಳೆದಿದ್ದು ಸ್ವಲ್ಪವೇ ಆದರೂ ಆಗಿರುವ ಖುಷಿ ಮಾತ್ರ ಟನ್ ಗಟ್ಟಲೇ ಎಂದಿದ್ದರು. ಇದೀಗ ತಮ್ಮ ಅಪ್ಪ-ಅಮ್ಮ ತೋಟವನ್ನು ವೀಕ್ಷಿಸುತ್ತಿರುವ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ ನಟಿ. ನನ್ನ ತೋಟದಲ್ಲಿ, ಹೆತ್ತವರೊಂದಿಗೆ ಎಂಬ ಶೀರ್ಷಿಕೆ ಕೊಟ್ಟಿರುವ ನಟಿಯ ಅಪ್ಪ-ಅಮ್ಮ ಅವರು ತೋಟವನ್ನು ವೀಕ್ಷಣೆ ಮಾಡುತ್ತಿರುವುದನ್ನು ನೋಡಬಹುದು.

ದೇವಲೋಕದ ಅಪ್ಸರೆ ನನ್ನನ್ನು ಬಿಟ್ಟು ಮುದುಕನನ್ನು ಮದ್ವೆಯಾದ್ಲು! ರಾಮ್‌ ಗೋಪಾಲ್‌ ವರ್ಮಾ ಮಾತು ಮತ್ತೆ ಮುನ್ನೆಲೆಗೆ

 ಇನ್ನು ಶ್ರುತಿ ಅವರ ಸಿನಿ ಪಯಣದ ಕುರಿತು ಹೇಳುವುದಾದರೆ, ಗೌರಿ ಗಣೇಶ (1991), ಆಗತಾ (1995), ಕಲ್ಕಿ (1996), ಗೌಡ್ರು (2004), ಅಕ್ಕ ತಂಗಿ (2008) ಮತ್ತು ಪುಟ್ಟಕ್ಕನ ಹೈವೇ (2011) ಮುಂತಾದ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಅವರು ಹೆಸರುವಾಸಿಯಾಗಿದ್ದಾರೆ. ಅವರು ನಟ ಶರಣ್ ಅವರ ಸಹೋದರಿ . 2016 ರಲ್ಲಿ ಬಿಗ್ ಬಾಸ್ ಕನ್ನಡದ ಮೂರನೇ ಸೀಸನ್ ಕೂಡ ಗೆದ್ದವರು.  ಅವರು ಈಚೆಗೆ ತಮ್ಮ ಮಗಳು ಗೌರಿ (Gowri) ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ವಿಷಯ ಶೇರ್​ ಮಾಡಿಕೊಂಡಿದ್ದರು. ನಟನೆಗೆ ಬೇಕಾಗಿರುವ ತಯಾರಿ ಮಾಡಿಕೊಂಡೇ ಮಗಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾಳೆ. ಗೌರಿಗೆ ಒಳ್ಳೆಯ ಕಥೆಗಳು ಅರಸಿ ಬರುತ್ತಿವೆ. ಬೇರೆಯವರ ಬ್ಯಾನರ್‌ನಲ್ಲಿ ಲಾಂಚ್ ಆಗುತ್ತಾಳೆ ಎಂದು ನಟಿ ಹೇಳಿದ್ದರು. 

Latest Videos
Follow Us:
Download App:
  • android
  • ios