Asianet Suvarna News Asianet Suvarna News

Gajanana and Gang: ಹಾಸ್ಯ ಪ್ರಧಾನ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ನಟಿ ಮೇಘನಾ ರಾಜ್

'ಇರುವುದೆಲ್ಲ ಬಿಟ್ಟು' ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಾಯಕನಾಗಿ ಗುರುತಿಸಿಕೊಂಡ ಶ್ರೀ ಮಹದೇವ್ ನಾಯಕನಾಗಿ ನಟಿಸಿರುವ 'ಗಜಾನನ ಅಂಡ್ ಗ್ಯಾಂಗ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ನಾಯಕಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ.

Shri Mahadev Aditi Prabhudeva starring Gajanana and Gang Movie Triler out gvd
Author
Bangalore, First Published Dec 22, 2021, 11:45 PM IST

'ಇರುವುದೆಲ್ಲ ಬಿಟ್ಟು' ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಾಯಕನಾಗಿ ಗುರುತಿಸಿಕೊಂಡ ಶ್ರೀ ಮಹದೇವ್ (Shri Mahadev) ನಾಯಕನಾಗಿ ನಟಿಸಿರುವ 'ಗಜಾನನ ಅಂಡ್ ಗ್ಯಾಂಗ್' (Gajanana and Gang) ಚಿತ್ರದ ಟ್ರೇಲರ್ (Trailer) ಬಿಡುಗಡೆಯಾಗಿದೆ. ಚಿತ್ರದಲ್ಲಿ ನಾಯಕಿಯಾಗಿ ಅದಿತಿ ಪ್ರಭುದೇವ (Aditi Prabhudeva) ಕಾಣಿಸಿಕೊಂಡಿದ್ದಾರೆ. 'ನಮ್ ಗಣಿ ಬಿಕಾಂ ಪಾಸ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ಮತ್ತು ನಿರ್ದೇಶಕನಾಗಿ ಪಾದರ್ಪಣೆ ಮಾಡಿದ್ದ ನಟ ಅಭಿಷೇಕ್ ಶೆಟ್ಟಿ (Abhishek Shetty) ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಈ ಚಿತ್ರದ ಟ್ರೇಲರ್‌ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಟಿ ಮೇಘನಾ ರಾಜ್​ (Meghana Raj) ಅವರು ಆಗಮಿಸಿದ್ದು, ಟ್ರೇಲರ್​ ಲಾಂಚ್​ ಮಾಡಿದ್ದಾರೆ. ಬಳಿಕ ಮಾತನಾಡಿದ ಮೇಘನಾ ಈ ಕಾರ್ಯಕ್ರಮಕ್ಕೆ ಬರಲು ಮೊದಲ ಕಾರಣ ಈ ಚಿತ್ರದ ನಾಯಕ ಶ್ರೀ ಮಹದೇವ್' ಇರುವುದೆಲ್ಲವ ಬಿಟ್ಟು' ಸಿನಿಮಾದಲ್ಲಿ ನನ್ನ​ ಜೊತೆಯಾಗಿ ನಟಿಸಿದ್ದರು. ಆ ಸ್ನೇಹದ ಕಾರಣಕ್ಕಾಗಿ. ಹಾಗೂ ಅದಿತಿ ಅಭಿನಯದ 'ರಂಗನಾಯಕಿ'  (Ranganayaki) ಚಿತ್ರವನ್ನು ನನ್ನ ತಾಯಿ ಪ್ರಮೀಳಾ ಜೋಷಾಯ್ ತುಂಬ ಮೆಚ್ಚಿಕೊಂಡಿದ್ದು, ಆ ಚಿತ್ರದ ಬಗ್ಗೆ ಅಮ್ಮ ನನ್ನ ಜೊತೆ ಅನೇಕ ಬಾರಿ ಮಾತನಾಡಿದ್ದಾರೆ. ಅದನ್ನು ಕೇಳಿ ಕೇಳಿ ನಾನು ಆ ಚಿತ್ರವನ್ನು ನೋಡದೇ ಇದ್ದರೂ ಕೂಡ ಅವರಿಗೆ ಅಭಿಮಾನಿಯಾಗಿದ್ದೇನೆ. ಆದಿತಿ ನನ್ನ ಫೇವರಿಟ್​ ಹೀರೋಯಿನ್​ಗಳಲ್ಲಿ ಒಬ್ಬರು. ಈ ಎಲ್ಲ ಕಾರಣಗಳಿಂದಾಗಿ ಚಿತ್ರದ ಟ್ರೇಲರ್​ ರಿಲೀಸ್​ಗೆ ಬಂದಿರುವುದಾಗಿ ಮೇಘನಾ ಹೇಳಿದರು. 

Gajanana and Gang: ಶ್ರೀ ಮಹದೇವ್-ಅದಿತಿ ಪ್ರಭುದೇವ ಚಿತ್ರದ ಫಸ್ಟ್‌ಲುಕ್ ರಿಲೀಸ್

ಬಿಡುಗಡೆಯಾದ ಟ್ರೇಲರ್‌ನಲ್ಲಿ 'ಗಜಾನನ ಅಂಡ್ ಗ್ಯಾಂಗ್'ನ ಕಾಲೇಜ್ ಕಥೆಯಿದೆ. ಕಾಲೇಜಿನ ಹಿರೋ, ಹಿರೋಯಿನ್, ಗೆಳೆಯರು ಹಾಗೂ ವಿಲನ್‌ ಸುತ್ತ ಚಿತ್ರದ ಕಥೆ ಸಾಗುತ್ತದೆ. ಹಾಸ್ಯಮಿಶ್ರಿತ ಸಂಭಾಷಣೆಗಳು ನೋಡುಗರಿಗೆ ಕಚಗುಳಿಯನ್ನಿಡುತ್ತದೆ. ಹಾಗೆ ಸೆಂಟಿಮೆಂಟ್ ದೃಶ್ಯಗಳು ಮನಕಲುಕುತ್ತವೆ. ಈ ಸಿನಿಮಾದ ಶೀರ್ಷಿಕೆಯೇ ಹೇಳುವಂತೆ ಇದರಲ್ಲೊಂದು ಫ್ರೆಂಡ್​ಶಿಪ್​ ಕಥೆಯಿದೆ. ನೀನು ಯಾವತ್ತು ಇವರ ಸಹವಾಸ ಬಿಡುತ್ತೀಯೋ ಅವತ್ತು ಉದ್ಧಾರ ಆಗುತ್ತೀಯ ಎಂದು ಒಂದು ದೃಶ್ಯದಲ್ಲಿ ಹಾಗೆ ಮತ್ತೊಂದು ಸೀನ್‌ನಲ್ಲಿ 'ಎಂತಹ ಪರಿಸ್ಥಿತಿಯಲ್ಲೂ ಏನೇ ಆದರೂ ನಿನ್ನ ಫ್ರೆಂಡ್ಸ್​ ಬಿಟ್ಟುಕೊಡಬೇಡ' ಎಂಬ ಡೈಲಾಗ್ ಶ್ರೀಗೆ ಅದಿತಿ​ ಹೇಳುವುದು ಸಸ್ಪೆನ್ಸ್ ಆಗಿ ಟ್ರೇಲರ್‌ನಲ್ಲಿ ಮೂಡಿಬಂದಿದೆ.

Shri Mahadev Aditi Prabhudeva starring Gajanana and Gang Movie Triler out gvd

ಪಕ್ಕಾ ಹಾಸ್ಯ ಪ್ರಧಾನ ಮತ್ತು ಯುವಪೀಳಿಗೆ ಸುತ್ತ ಗಿರಕಿ ಹೊಡೆಯುವ ಕಥೆ 'ಗಜಾನನ ಅಂಡ್ ಗ್ಯಾಂಗ್' ಚಿತ್ರದಲ್ಲಿದ್ದು, ಚಿತ್ರದ ನಿರ್ದೇಶಕ ಅಭಿಷೇಕ್ ಚಿತ್ರದ ಪ್ರಮುಖ ಘಟ್ಟದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ರಿವರ್ಸ್ ಸ್ಕ್ರೀನ್ ಪ್ಲೇ ಇರುತ್ತದೆ. ಕ್ಯೂಟ್, ಚಾಕಲೇಟ್ ಹೀರೋ, ಲವ್ವರ್ ಬಾಯ್ ಇಮೇಜ್‌ಗಿಂತ ವಿಭಿನ್ನವಾದ ಪಾತ್ರವಿದು. ನಾನಲ್ಲದಿರುವ ಪಾತ್ರವಿದು, ಎರಡು ಕಾಲಘಟ್ಟದಲ್ಲಿ ಕಥೆ ನಡೆಯುತ್ತದೆ. ನಾನು ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಗಜ ಎಂಬುದು ನನ್ನ ಪಾತ್ರದ ಹೆಸರು ಎಂದು ಶ್ರೀ ಮಹದೇವ್ ಹೇಳಿದ್ದಾರೆ. ಹಾಗೂ ಅದಿತಿ ಪ್ರಭುದೇವ ಈ ಚಿತ್ರದಲ್ಲಿ ಮಿಡಲ್ ​ಕ್ಲಾಸ್ ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದು. ಅವರದ್ದು ಒಂದು ರೀತಿ ಎಮೋಷನಲ್ ಆಗಿರುವ ಪಾತ್ರ.

Lets Break Up: ರಚನಾ, ಶ್ರೀ ಮಹದೇವ್‌ ನಟನೆಯ ಫಸ್ಟ್‌ಲುಕ್ ರಿಲೀಸ್

ಇನ್ನು ಚಿತ್ರದ ಟೈಟಲ್ ನೋಡಿದಾಕ್ಷಣ ಕಾಮಿಡಿ ಶೈಲಿಯ ಸಿನಿಮಾ ಅನಿಸಿದರೂ, ಯಾವುದೇ ಶೈಲಿಗೆ ಸೀಮಿತವಾಗದ ಸಿನಿಮಾ ಇದು. ಎಲ್ಲ ಅಂಶಗಳನ್ನೂ ಸೇರಿಸಿ, ಎಲ್ಲ ವರ್ಗದವರಿಗೂ ಕನೆಕ್ಟ್ ಆಗುವ ಕಥೆ ಈ ಚಿತ್ರದಲ್ಲಿದೆ ಎಂದು ಚಿತ್ರದ ನಿರ್ದೇಶಕ ಅಭಿಷೇಕ್ ಶೆಟ್ಟಿ ಹೇಳಿದ್ದಾರೆ. ಬೃಂದಾವನ್ ಎಂಟರ್ ಪ್ರೈಸಸ್ ಅಡಿಯಲ್ಲಿ ಯುಎಸ್ ನಾಗೇಶ್ ಕುಮಾರ್ (Nagesh Kumar US) ನಿರ್ಮಾಪಕರಾಗಿ 'ಗಜಾನನ ಅಂಡ್ ಗ್ಯಾಂಗ್' ಚಿತ್ರಕ್ಕೆ ಹಣ ಹೂಡುತ್ತಿದ್ದು, ಚಿತ್ರದ ಹಾಡುಗಳಿಗೆ ಪ್ರದ್ಯುತನ್ (Praddyottan) ಸಂಗೀತ ಸಂಯೋಜಿಸಿದ್ದಾರೆ. ಉದಯ ಲೀಲ ಕ್ಯಾಮರಾ ಕೈಚಳಕ, ವಿಜೆಟ್ ಚಂದ್ರ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿದೆ.
 

Follow Us:
Download App:
  • android
  • ios