ರಚಿತಾ ರಾಮ್ ಮತ್ತು ಶ್ರೀನಗರ ಕಿಟ್ಟಿ ನಟಿಸಿರುವ "ಸಂಜು ವೆಡ್ಸ್ ಗೀತಾ ೨" ಚಿತ್ರ ಜನವರಿ ೧೦, ೨೦೨೫ ರಂದು ಬಿಡುಗಡೆಯಾಗಲಿದೆ. ನಾಗಶೇಖರ್ ನಿರ್ದೇಶನದ ಈ ಚಿತ್ರದ ಬಹುತೇಕ ಚಿತ್ರೀಕರಣ ಸ್ವಿಜರ್‌ಲ್ಯಾಂಡ್‌ನಲ್ಲಿ ನಡೆದಿದೆ. ಚಿತ್ರತಂಡವು ಶ್ರೇಯಾ ಘೋಷಾಲ್ ಅವರನ್ನು ಹಾಡಲು ಆಹ್ವಾನಿಸಿದ್ದರೂ, ಅವರು ಕನ್ನಡ ಹಾಡುಗಳನ್ನು ಹಾಡುವುದನ್ನು ನಿಲ್ಲಿಸಿರುವುದರಿಂದ ನಿರಾಕರಿಸಿದ್ದಾರೆ. ಹೀಗಾಗಿ ಸಂಗೀತಾ ರವೀಂದ್ರ ಅವರು ಹಾಡಿದ್ದು, ನಿರ್ದೇಶಕರು ಅವರನ್ನು "ಕನ್ನಡದ ಶ್ರೇಯಾ ಘೋಷಾಲ್" ಎಂದು ಬಣ್ಣಿಸಿದ್ದಾರೆ. ರಂಗಾಯಣ ರಘು, ಸಾಧು ಕೋಕಿಲಾ ಮತ್ತು ರಾಗಿಣಿ ಧ್ವಿವೇದಿ ಸಹ ಈ ಚಿತ್ರದಲ್ಲಿದ್ದಾರೆ.

ಕನ್ನಡ ಚಿತ್ರರಂಗದ ಡಿಂಪಲ್ ಹುಡುಗಿ ರಚಿತಾ ರಾಮ್ ಮತ್ತು ಶ್ರೀನಗರ ಕಿಟ್ಟಿ ನಟಿಸಿರುವ 'ಸಂಜು ವೆಡ್ಸ್‌ ಗೀತಾ' ಸಿನಿಮಾ ಇದೇ ಜನವರಿ 10,2025ರಂದು ರಿಲೀಸ್‌ಗೆ ಸಜ್ಜಾಗಿದೆ. ನಾಗಶೇಖರ್ ಆಕ್ಷನ್ ಕಟ್ ಹೇಳಿರುವ ಚಿತ್ರ ಇದಾಗಿದ್ದು ಈಗಾಗಲೆ ಎರಡು ಹಾಡುಗಳು ರಿಲೀಸ್ ಆಗಿದೆ. ಚಿತ್ರದ ಬಹುತೇಕ ದೃಶ್ಯಗಳನ್ನು ಸ್ವಿಜರ್‌ಲ್ಯಾಂಡ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಆದರೆ ಅಭಿಮಾನಿಗಳಿಗೆ ಬೇಸರ ಏನೆಂದರೆ ಶ್ರೇಯಾ ಘೋಷಾಲ್ ಹಾಡಿಲ್ಲ ಅಂತ. 

ಹೌದು! ಸಂಜು ವೆಡ್ಸ್‌ ಗೀತಾ 2 ನಿರ್ದೇಶಕರಾದ ನಾಗಶೇಖರ್ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. 'ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ನಮ್ಮ ಚಿತ್ರಕ್ಕೆ ಹಾಡಬೇಕು ಎಂದು ಪ್ಲ್ಯಾನ್ ಮಾಡಿದ್ವಿ. ಮ್ಯೂಸಿಕ್ ಕಂಪೋಸ್ ಮಾಡುವ ಸಮಯದಲ್ಲಿ ಶ್ರೇಯಾ ಅಂತ ಇತ್ತು ಏಕೆಂದರೆ ನಾನು ಮಾಡಿರುವ ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಹಾಡಿದ್ದಾರೆ. ಸಂಜು ಮತ್ತು ಗೀತಾ ಚಿತ್ರದಲ್ಲಿ ಗಗನವೇ ಭಾಗಿ ಹಾಗೂ ಸಂಜು ವೆಡ್ಸ್ ಗೀತಾ ಚಿತ್ರದ ಹಾಡನ್ನು ಹಾಡಿದ್ದರು. ಅದೇ ತರದ್ದ ಒಂದು ಹಾಡನ್ನು ಮತ್ತೆ ಕ್ರಿಯೇಟ್ ಮಾಡಬೇಕು ಅಂದುಕೊಂಡು ಸಂಪರ್ಕ ಮಾಡಿದಾಗ ಶ್ರೇಯಾ ಅವರು ಹಾಡಲ್ಲ ಅಂತ ಹೇಳ್ತಾರೆ ಏಕೆಂದರೆ ಬಹುತೇಕ ಕನ್ನಡದ ಹಾಡುಗಳನ್ನು ಹಾಡುವುದಕ್ಕೆ ನಿಲ್ಲಿಸಿದ್ದಾರೆ. ಕಾರಣ ಏನು ಅಂತ ಸರಿಯಾಗಿ ಗೊತ್ತಿಲ್ಲ ಅದು ನಮಗೆ ಬೇಡ ಅಂತ ಸುಮ್ಮನಿದ್ದೀನಿ' ಎಂದು ನಾಗಶೇಖರ್ ಮಾತನಾಡಿದ್ದಾರೆ.

ಬೆಂಗಳೂರಿನಲ್ಲಿ ಎರಡು ಸೈಟ್ ಖರೀದಿಸಿದ ಸೋನು ಶ್ರೀನಿವಾಸ್ ಗೌಡ; ಈ ವರ್ಷ ಮನೆ ಕಟ್ಟಿಸೋದು ಕನ್ಫರ್ಮ್‌ ಅಂತೆ

'ಅವಾಗ ನನಗೆ ಅನಿಸಿದ್ದು ನಮ್ಮಲೂ ಒಂದು ಶ್ರೇಯಾ ಘೋಷಾಲ್‌ನ ಹುಡುಕ ಬೇಕು ಅಂತ. ಹುಟ್ಟಾಕುವ ಶಕ್ತಿ ನಮಗಂತೂ ಇಲ್ಲ ಆದರೆ ಹುಡುಕುವ ಶಕ್ತಿ ಇದೆ. ನನಗೆ ಒಬ್ಬರು ಕರೆ ಮಾಡಿದ್ದರು ಶ್ರೇಯಾ ಘೋಷಾಲ್ ಕನ್ನಡದ ಹಾಡು ಹಾಡುತ್ತಿಲ್ಲ ನಿಮ್ಮ ಚಿತ್ರಕ್ಕೆ ಹೇಗೆ ಹಾಡಿದರು ಅಂತ. ಅದಿಕ್ಕೆ ಇಲ್ಲ ನಮ್ಮ ಚಿತ್ರಕ್ಕೂ ಹಾಡಿಲ್ಲ ಅಂದೆ. ಇವತ್ತು ರಿಲೀಸ್ ಆಗಿರುವ ಹಾಡನ್ನು ಹಾಡಿರುವುದು ಶ್ರೇಯಾ ಅಲ್ವಾ ಅಂದ್ರು. ಹೀಗಾಗಿ ನಾನು ಸಂಗೀತಾ ರವೀಂದ್ರ ಅವರನ್ನು ಕನ್ನಡ ಶ್ರೇಯಾ ಘೋಷಾಲ್ ಎಂದು ಹೇಳಲು ಇಷ್ಟ ಪಡುತ್ತೀವಿ' ಎಂದು ನಾಗಶೇಖರ್ ಹೇಳಿದ್ದಾರೆ. ಇನ್ನು ಚಿತ್ರದಲ್ಲಿ ರಂಗಾಯಣ ರಘು, ಸಾಧು ಕೋಕಿಲಾ ಮತ್ತು ರಾಗಿಣಿ ಧ್ವಿವೇದಿ ಅಭಿನಯಿಸಿದ್ದಾರೆ. 

ಹೆತ್ತವರ ಹೆಣಕ್ಕೆ ಬೆಂಕಿ ಇಡಲು ಗಂಡು ದಿಕ್ಕಿಲ್ಲದ ಮನೆ ಎಂದು ಅವಮಾನ ಮಾಡಿದ್ದಾರೆ: ಕಣ್ಣೀರಿಟ್ಟ ಚೈತ್ರಾ ಕುಂದಾಪುರ