ಬಾಲ್ಯ ಗೆಳತಿ ನತಾಶಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ವರುಣ್ ಧವನ್ ಈಗ ಸೋಷಿಯಲ್ ಮೀಡಿಯಾ ಸ್ಟಾರ್ ಅಗಿದ್ದಾರೆ. ಎಲ್ಲೇ ನೋಡಿದರೂ ನವ ವಧು-ವರನ ಫೋಟೋಗಳು ಹರಿದಾಡುತ್ತಿವೆ. ಅಭಿಮಾನಿಗಳು ಹಾಗೂ ಸಿನಿ ಸ್ನೇಹಿತರು ಶುಭ ಕೋರುತ್ತಿದ್ದಾರೆ. ಕೇವಲ 200 ಮಂದಿ ಮಾತ್ರ ಭಾಗಿಯಾಗಿದ್ದ ಮದುವೆ ಕಾರ್ಯಕ್ರಮ ಹೇಗಿತ್ತು ಎಂಬುದೇ ನೆಟ್ಟಿಗರು ಆಲೋಚನೆಯಾಗಿದೆ.

IAS ಅಧಿಕಾರಿಯಾದ ಅಪ್ಪಟ ಕನ್ನಡದ ನಟಿ ಶ್ರದ್ಧಾ ಶ್ರೀನಾಥ್! 

ಸೋಷಿಯಲ್ ಮೀಡಿಯಾದಲ್ಲಿ 'ಹ್ಯಾಪಿ ಮ್ಯಾರಿಡ್ ಲೈಫ್‌' ಎಂದು ವಿಶ್ ಮಾಡುವುದು ತುಂಬಾನೇ ಕಾಮನ್. ಕನ್ನಡ ಚಿತ್ರರಂಗದ ಮೂಲಕ ಜನಪ್ರಿಯತೆ ಪಡೆದು ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ಶ್ರದ್ಧಾ ಶ್ರೀನಾಥ್ ಹೇಗಿ ವಿಶ್ ಮಾಡಿದ್ದಾರೆ ಗೊತ್ತಾ? 

ಶ್ರದ್ಧಾ ಇನ್‌ಸ್ಟಾ ಸ್ಟೋರಿ:
'ಮತ್ತೊಬ್ಬ ಅದ್ಭುತ ಕಲಾವಿದ ಮದುವೆಯಾಗಿದ್ದಾರೆ. ವರುಣ್ ಮತ್ತೆ ಸಿನಿಮಾ ಮಾಡುತ್ತಾರಾ? ಅವರನ್ನು ಮತ್ತೆ ಆನ್‌ ಸ್ಕ್ರೀನ್‌ ನೋಡ್ತೀವೋ ಇಲ್ಲವೋ ಅಂತ ಬೇಸರ. ಹೆಂಡತಿ ಹಾಗೂ ಅತ್ತೆ-ಮಾತು ಖಂಡಿತವಾಗಿಯೂ ವರುಣ್‌ ಅವರನ್ನು ಬೇರೆ ನಟಿಯರ ಜೊತೆ ನೋಡಲು ಇಷ್ಟ ಪಡುವುದಿಲ್ಲ. ಮದುವೆ ಆಗಿದೆ ಎನ್ನುವ ಕಾರಣ ಪುರುಷ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಬಹುದು. ಆದರೂ ಪರ್ಸನಲ್‌ ಲೈಫ್‌ ಹಾಗೂ ವರ್ಕ್‌ ಲೈಫ್‌ ಹೇಗೆ ಸಂಭಾಳಿಸುತ್ತಾರೋ ಏನೋ. ಕಷ್ಟವಿದೆ. ವರುಣ್‌ನನ್ನು ಮಿಸ್ ಮಾಡಿಕೊಳ್ಳುತ್ತೀನಿ. ಶುಭವಾಗಲಿ ವರುಣ್,' ಎಂದು ಶ್ರದ್ಧಾ ಶ್ರೀನಾಥ್ ಬರೆದುಕೊಂಡಿದ್ದಾರೆ.

ವರುಣ್ ಧವನ್ ಮದ್ವೆಗೆ ಕರಣ್ ಜೋಹರ್ ಹೊಸ ಅವತಾರ; 'ನಿಮ್ದು ಯಾವ ದೇಶ?' ಎಂದ ನೆಟ್ಟಿಗರು! 

ಸಾಮಾನ್ಯವಾಗಿ ನಟಿಯರು ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಮೊದಲು ಕೇಳಿ ಬರುವ ಪ್ರಶ್ನೆಯೇ ಕೆಲಸ ಬಿಡುತ್ತಿದ್ದೀರಾ? ಗುಡ್‌ ನ್ಯೂಸ್ ಯಾವಾಗ, ಕೆಲಸ ಮಾಡಿದರೂ ಮಹಿಳಾ ಪ್ರಧಾನ ಸಿನಿಮಾನೇ ಆಯ್ಕೆ ಮಾಡಿಕೊಳ್ಳಬೇಕು ಎಂದು. ಇದೇ ಪ್ರಶ್ನೆಯನ್ನು ಶ್ರದ್ಧಾ ವರುಣ್‌ ಫೋಸ್ಟ್‌ಗೆ ಬರೆದಿದ್ದಾರೆ. ಮಹಿಳೆಯರಿಗೆ ಮಾತ್ರವಲ್ಲದೇ ಪುರುಷರಿಗೂ ಈ ಪ್ರಶ್ನೆ ಕೇಳಬೇಕು, ಸದಾ ಹೆಣ್ಣು ಮಕ್ಕಳನ್ನು ಮಾತ್ರ ಪ್ರಶ್ನಿಸುವುದು ಎಷ್ಟು ಸರಿ? ಗಂಡಸರಿಗೂ ಕೇಳಬೇಕು. ಶ್ರದ್ಧಾ ಮಾಡಿರುವುದು ಸರಿಯೇ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.