ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ನಟಿ ಶ್ರದ್ಧಾ ಶ್ರೀನಾಥ್‌ ಇದುವರೆಗೂ ತಮ್ಮ ವೃತ್ತಿ ಜೀವನದಲ್ಲಿ ಆಯ್ಕೆ ಮಾಡಿರದಂತ ವಿಭಿನ್ನ ಪಾತ್ರಕ್ಕೆ ಸೈ ಎಂದಿದ್ದಾರೆ. ಅದುವೇ ಐಎಎಸ್‌ ಅಧಿಕಾರಿಯಾಗಿ ಎನ್ನಲಾಗಿದೆ. 

ಪಕ್ಕದ ಭಾಷೆಯಲ್ಲಿ ಮಿಂಚುತ್ತಿರುವ ಯೂ ಟರ್ನ್‌ ಬೆಡಗಿ ಶ್ರದ್ಧಾ ಶ್ರೀನಾಥ್ 

ಉನ್ನಿಕೃಷ್ಣನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ಮಾಲಿವುಡ್ ನಟ ಮೋಹನ್‌ಲಾಲ್‌ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರೀಕರಣದ ಬಗ್ಗೆ ಮಾತುಕತೆ ನಡೆಯುತ್ತಿದ್ದು, ನ.23ರಂದು ಕೇರಳದಲ್ಲಿ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ.

ಲಾಯರ್‌ ಆಗಿ ವೃತ್ತಿ ಆರಂಭಿಸಿದ ಶ್ರದ್ಧಾ, ಮೊದಲು ಅಭಿನಯಿಸಿದ್ದು ಮಾಲಿವುಡ್‌ ಚಿತ್ರದಲ್ಲಾದರೂ ಹಿಟ್ ತಂದುಕೊಟ್ಟಿದ್ದು ನಮ್ಮ ಹೆಮ್ಮೆಯ ನಿರ್ದೇಶಕ ಪವನ್ ಕುಮಾರ್ ಅವರ ಯ ಟರ್ನ್‌ ಸಿನಿಮಾ.  2015ರಲ್ಲಿ Kohinoor ಚಿತ್ರದ ನಂತರ ಬರೋಬ್ಬರಿ 5 ವರ್ಷಗಳ ಬಳಿಕ ಮತ್ತೆ ಮಲಯಾಳಂ ಸಿನಿಮಾಗೆ ಸಹಿ ಮಾಡಿದ್ದಾರೆ ಈ ಮೂಗೂತಿ ಸುಂದರಿ.

ಮದ್ವೆ ಆದ್ಮೇಲೆ ನಟಿಯರಿಗೆ ಡಿಮ್ಯಾಂಡ್ ಕಮ್ಮಿ ಆಗುತ್ತಾ? ದಯವಿಟ್ಟು ಉತ್ತರಿಸಿ ಎಂದ ನಟಿ! 

5 ವರ್ಷದ ವೃತ್ತಿ ಜೀವನದ ಅವಧಿಯಲ್ಲಿ ಶ್ರದ್ಧಾ ಸುಮಾರು 13 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಹಾಗೂ 5 ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇತ್ತೀಚಿಗೆ ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಂಡ 'ಕೃಷ್ಣ ಆ್ಯಂಡ್ ಹಿಸ್ ಲೀಲಾ' ಹಲವು ಕಾರಣಗಳಿಗಾಗಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು.