Shiva Rajkumar: ಫಿಲಂ ಸಿಟಿಗೆ ಅಪ್ಪು ಹೆಸರಿಟ್ಟರೆ ಸಂತೋಷ, ಒತ್ತಾಯ ಮಾಡಲ್ಲ

ಮೈಸೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಫಿಲಂ ಸಿಟಿಗೆ ಪುನೀತ್‌ ರಾಜಕುಮಾರ್‌ ಹೆಸರಿಟ್ಟರೆ ಸಂತೋಷವಾಗುತ್ತದೆ. ಕುಟುಂಬ ಸದಸ್ಯನಾಗಿ ನಾನು ಆ ರೀತಿಯ ಒತ್ತಾಯ ಮಾಡುವುದಿಲ್ಲ. ಅಭಿಮಾನಿಗಳು ಅಭಿಮಾನದಿಂದ ಹೇಳುತ್ತಿದ್ದಾರೆ ಎಂದು ನಟ ಶಿವರಾಜಕುಮಾರ್‌ ತಿಳಿಸಿದರು.

Shivarajkumar Visits Theatres in Mysuru and Talks about James and Puneeth Rajkumar gvd

ಮೈಸೂರು (ಮಾ.18): ಮೈಸೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಫಿಲಂ ಸಿಟಿಗೆ (Film City) ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಹೆಸರಿಟ್ಟರೆ ಸಂತೋಷವಾಗುತ್ತದೆ. ಕುಟುಂಬ ಸದಸ್ಯನಾಗಿ ನಾನು ಆ ರೀತಿಯ ಒತ್ತಾಯ ಮಾಡುವುದಿಲ್ಲ. ಅಭಿಮಾನಿಗಳು ಅಭಿಮಾನದಿಂದ ಹೇಳುತ್ತಿದ್ದಾರೆ ಎಂದು ನಟ ಶಿವರಾಜ್‌ಕುಮಾರ್‌ (Shivarajkumar) ತಿಳಿಸಿದರು. ಪುನೀತ್‌ ಅಭಿನಯದ 'ಜೇಮ್ಸ್‌' (James) ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಮೈಸೂರಿನ ಡಿಆರ್‌ಸಿ, ಸಂಗಮ್‌ ಹಾಗೂ ಗಾಯತ್ರಿ ಚಿತ್ರಮಂದಿರಗಳಿಗೆ ಅವರು ಗುರುವಾರ ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಚಿತ್ರರಂಗಕ್ಕೆ ದುಡಿದವರು ಸಾಕಷ್ಟು ಜನರು ಇದ್ದಾರೆ. ಅವರ ಹೆಸರನ್ನು ಇಡಬಹುದು ಎಂದು ಪ್ರತಿಕ್ರಿಯಿಸಿದರು.

ಪುನೀತ್ ಹುಟ್ಟುಹಬ್ಬಕ್ಕೆ ಇಬ್ಬರೂ ಗಿಫ್ಟ್‌ಗಳನ್ನು ಶೇರ್ ಮಾಡುತ್ತಿದ್ದೆವು. ಅಪ್ಪುಗೆ ಬ್ರಾಂಡ್ ವಾಚ್, ಬೆಲ್ಟ್, ಗಾಗಲ್ಸ್ ಸೇರಿದಂತೆ ಹಲವು ವಸ್ತುಗಳನ್ನು ಕೊಟ್ಟಿದ್ದೇನೆ. ಅವನು ಸಹ ನನ್ನ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದ್ದಾನೆ. ಅಪ್ಪು ಎಲ್ಲರ ಹೃದಯದಲ್ಲೂ ಹಚ್ಚ ಹಸಿರಾಗಿ ಉಳಿದಿದ್ದಾರೆ. ರಾಜ್ಯಾದ್ಯಂತ ಇಂದು ಜೇಮ್ಸ್ ಚಿತ್ರ ಬಿಡುಗಡೆಯಾಗಿದ್ದು, ಅಭಿಮಾನಿಗಳು ನೆಚ್ಚಿನ ನಟನಿಗೆ ಗೌರವ ಸಲ್ಲಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದಾರೆ. ಗಾಯತ್ರಿ ಚಿತ್ರಮಂದಿರದ ಬಳಿ ಶಿವಣ್ಣನನ್ನು ಕಂಡ ಅಭಿಮಾನಿಗಳು ಹರ್ಷೋದ್ಘಾರ ವ್ಯಕ್ತಪಡಿಸಿದರು. ಕೆಲಕಾಲ ಅಭಿಮಾನಿಗಳ ಜತೆ ಕುಳಿತು ಶಿವಣ್ಣ ಜೇಮ್ಸ್ ಚಿತ್ರ ವೀಕ್ಷಿಸಿದರು.

4 ದಿನದ ಪುಟ್ಟ ಕಂದನಿಗೆ ಪುನೀತ್ ಎಂದು ಹೆಸರಿಟ್ಟ ಶಿವರಾಜ್ ಕುಮಾರ್

ಅಪ್ಪು ಪ್ರತಿ ಬಾರಿ ಆತನ ಸಿನಿಮಾ ಬಿಡುಗಡೆಯಾದಾಗಲೂ ಶಿವಣ್ಣ, ಚಿತ್ರ ಹೇಗಿದೆ ಎಂದು ಕೇಳುತ್ತಿದ್ದ. ನಾನು ಪ್ರತಿಕ್ರಿಯೆ ಹೇಳುತ್ತಿದ್ದೆ. ಆದರೆ ಈ ಬಾರಿ ಕೇಳಲು ಅವನಿಲ್ಲ ಎಂಬ ಸಂಕಟ ಕಾಡುತ್ತಿದೆ. ಜೇಮ್ಸ್‌ ಸಿನಿಮಾಗೆ ಡಬ್ಬಿಂಗ್‌ ಮಾಡುವ ವೇಳೆ ನನಗೆ ತುಂಬಾ ನೋವಾಗುತ್ತಿತ್ತು ಎಂದು ಕಟ್ಟೀರಿಟ್ಟರು. ಇನ್ನು ಶಕ್ತಿಧಾಮ ಸೇರಿದಂತೆ ನಗರದ ವಿವಿಧೆಡೆ ನಡೆದ ಪುನೀತ್‌ ಹುಟ್ಟುಹಬ್ಬದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಶಿವರಾಜಕುಮಾರ್‌ ಭಾಗಿಯಾಗಿದ್ದರು. ಪಡುವಾರಹಳ್ಳಿಯ ಅಪ್ಪು ಅಭಿಮಾನಿಗಳು ನಿರ್ಮಿಸಿರುವ ಪುನೀತ್‌ ಪ್ರತಿಮೆಯನ್ನು ಶಿವರಾಜಕುಮಾರ್‌ ಅನಾವರಣಗೊಳಿಸಿದರು.

ಫಸ್ಟ್‌ ಶೋ ನೋಡಿದ ರಾಘಣ್ಣ: ವೀರೇಶ್‌ ಥಿಯೇಟರ್‌ನಲ್ಲಿ ಫಸ್ಟ್‌ ಡೇ ಫಸ್ಟ್‌ ಶೋವನ್ನು ಅಭಿಮಾನಿಗಳೊಂದಿಗೆ ನೋಡಿದ ರಾಘವೇಂದ್ರ ರಾಜ್‌ಕುಮಾರ್‌ (Raghavendra Rajkumar), ‘ಇಷ್ಟೊಂದು ಜನ ಎದೆಯೊಳಗೆ ಅಪ್ಪುವನ್ನು ಇಟ್ಟುಕೊಂಡು ಬಂದಿದ್ದಾರೆ, ಹೀಗಿರುವಾಗ ಅಪ್ಪು ಇಲ್ಲ ಅಂತ ನಾನು ಹೇಗೆ ಹೇಳಲಿ, ಈ ವೀರೇಶ್‌ ಚಿತ್ರಮಂದಿರದಲ್ಲಿ ನಮ್ಮ ತಂದೆ ರಾಜ್‌ಕುಮಾರ್‌ (Dr Rajkumar) ಅವರು ನಾವು ಮೂರೂ ಜನ ಮಕ್ಕಳ ಮೊದಲ ಸಿನಿಮಾದ ಶೋಗಳನ್ನ ನೋಡುತ್ತಿದ್ದರು. ಇವತ್ತೂ ಇಲ್ಲಿ ಅಪ್ಪ ಹಾಗೂ ಅಪ್ಪು ನಮ್ಮ ಜೊತೆಗೆ ಕೂತು ಸಿನಿಮಾ ನೋಡುತ್ತಿದ್ದಾರೆ ಅಂತಲೇ ಭಾವನೆ. ಇದು ಕೇವಲ ಸಿನಿಮಾ ಅಲ್ಲ’ ಎಂದು ಹೇಳಿದರು.

Puneeth Rajkumar: ರಾಜ್ಯಾದ್ಯಂತ ಅಪ್ಪು ಹುಟ್ಟುಹಬ್ಬ: 'ಜೇಮ್ಸ್' ಬಿಡುಗಡೆಯ ಸಂಭ್ರಮ

ಈಗಲೇ 3 ವಾರದ ಟಿಕೆಟ್‌ ಬುಕ್‌: ವೀರೇಶ್‌ ಚಿತ್ರಮಂದಿರವೊಂದರಲ್ಲೇ ಈವರೆಗೆ 7200 ಸೀಟು ಬುಕಿಂಗ್‌ ಆಗಿದೆ. ರಾಜ್ಯದ ಶೇ.90 ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ ಪ್ರದರ್ಶನಗೊಂಡಿದೆ. ಗುರುವಾರ ಒಂದೇ ದಿನ ರಾಜ್ಯದಲ್ಲಿ ಸುಮಾರು 2500 ಶೋಗಳಾಗಿವೆ. ಇದರಿಂದ ತೆರಿಗೆ ಹೊರತುಪಡಿಸಿ 22 ರಿಂದ 25 ಕೋಟಿ ರು. ಗಳಿಕೆಯ ನಿರೀಕ್ಷೆ ಇದೆ. ಮೂರು ವಾರಗಳಿಗೆ ಚಿತ್ರದ ಶೇ.80 ಟಿಕೆಟ್‌ ಬುಕಿಂಗ್‌ ಆಗಿದೆ ಅಂತ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್‌ ಹೇಳಿದ್ದಾರೆ. 

ಹೊರ ರಾಜ್ಯದಲ್ಲೂ ಮೆಚ್ಚುಗೆ: ಹೊರ ರಾಜ್ಯದಲ್ಲಿ ಬೇರೆ ಭಾಷೆಗಳ ಜೇಮ್ಸ್‌ ಶೋಗೂ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಅಲ್ಲೂ ಜೇಮ್ಸ್‌ ಸಿನಿಮಾವನ್ನು ಜನ ಮೆಚ್ಚಿಕೊಳ್ಳುತ್ತಿದ್ದಾರೆ ಅಂತ ನಿರ್ಮಾಪಕ ಕಿಶೋರ್‌ ಪತ್ತಿಕೊಂಡ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios