ಶಿವರಾಜ್‌ಕುಮಾರ್ ಅವರಿಗೆ ಇಂದು 64ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ಸ್ಯಾಂಡಲ್‌ವುಡ್‌ನ ಗಣ್ಯರು ಹಾಗೂ ಅಭಿಮಾನಿಗಳು ಶಿವಣ್ಣನಿಗೆ ಪ್ರೀತಿಯ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಅವರಿಗೆ 64ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. 'ಕಾಂತಾರ' ನಿರ್ದೇಶಕ ರಿಷಬ್ ಶೆಟ್ಟಿ, ನಟ ಧನಂಜಯ, ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಸೇರಿದಂತೆ ಚಿತ್ರರಂಗದ ಗಣ್ಯರು ಶಿವಣ್ಣನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಅವರಿಗೆ ಇಂದು 64ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ಸ್ಯಾಂಡಲ್‌ವುಡ್‌ನ ಗಣ್ಯರು ಹಾಗೂ ಅಭಿಮಾನಿಗಳು ಶಿವಣ್ಣನಿಗೆ ಪ್ರೀತಿಯ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗಣ್ಯರಿಂದ ಶುಭಾಶಯಗಳ ಸುರಿಮಳೆ

'ಕಾಂತಾರ' ಚಿತ್ರದ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ತಮ್ಮ ಎಕ್ಸ್ ಖಾತೆಯಲ್ಲಿ ಶಿವಣ್ಣನಿಗೆ ವಿಶ್ ಮಾಡಿದ್ದಾರೆ. ಶಿವರಾಜ್‌ಕುಮಾರ್ ಅವರನ್ನು 'ಕರುನಾಡ ಚಕ್ರವರ್ತಿ' ಎಂದು ಬಣ್ಣಿಸಿರುವ ಅವರು, "ನಮ್ಮ ಪ್ರೀತಿಯ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಅಣ್ಣನಿಗೆ ಹುಟ್ಟುಹಬ್ಬದ ಶುಭಾಶಯಗಳು" ಎಂದು ಬರೆದುಕೊಂಡಿದ್ದಾರೆ.

ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್, ಶಿವಣ್ಣ ಜೊತೆ ಕೆಲಸ ಮಾಡಿದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಅವರೊಂದಿಗೆ ಕೆಲಸ ಮಾಡಿದ್ದು 'ಸೌಭಾಗ್ಯ ಮತ್ತು ಆಶೀರ್ವಾದ' ಎಂದು ಹೇಳಿದ್ದಾರೆ. "ನಾನು ಕೆಲಸ ಮಾಡಿದ ಅತ್ಯುತ್ತಮ ಮತ್ತು ವಿನಮ್ರ ವ್ಯಕ್ತಿಗಳಲ್ಲಿ ನೀವು ಒಬ್ಬರು. ನಿಮ್ಮೊಂದಿಗೆ ಎರಡು ಚಿತ್ರಗಳಲ್ಲಿ ಕೆಲಸ ಮಾಡಿದ್ದು ನಿಜಕ್ಕೂ ನನ್ನ ಸೌಭಾಗ್ಯ, ಶಿವಣ್ಣ ಗಾರು. ನಿಮ್ಮೊಂದಿಗೆ ಕಳೆದ ಪ್ರತಿ ಕ್ಷಣವೂ ವಿನಯ, ಶ್ರದ್ಧೆ ಮತ್ತು ಸಮರ್ಪಣೆಯ ಪಾಠ. ನಿಮ್ಮನ್ನು ಭೇಟಿಯಾಗಿ ಆಶೀರ್ವಾದ ಪಡೆಯುವುದನ್ನು ನಾನು ಯಾವಾಗಲೂ ಗೌರವಿಸುತ್ತೇನೆ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು! ದೇವರು ನಿಮಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ಇನ್ನಷ್ಟು ಬ್ಲಾಕ್‌ಬಸ್ಟರ್ ಯಶಸ್ಸನ್ನು ನೀಡಲಿ. ಯಾವಾಗಲೂ ಪ್ರೀತಿ ಮತ್ತು ಗೌರವ," ಎಂದು ಜಾನಿ ಮಾಸ್ಟರ್ ಬರೆದಿದ್ದಾರೆ.

'ಟಗರು' ಖ್ಯಾತಿಯ ನಟ ಡಾಲಿ ಧನಂಜಯ ಕೂಡ ಒಂದು ಸುಂದರವಾದ ಪೋಸ್ಟರ್ ಹಂಚಿಕೊಂಡು, "ಹ್ಯಾಪಿ ಬರ್ತ್‌ಡೇ ಶಿವಣ್ಣ" ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಶುಭ ಕೋರಿದ್ದಾರೆ.

'ಸಪ್ತ ಸಾಗರದಾಚೆ ಎಲ್ಲೋ' ಖ್ಯಾತಿಯ ನಿರ್ದೇಶಕ ಹೇಮಂತ್ ಎಂ. ರಾವ್, ಸದ್ಯ ಶಿವಣ್ಣ ಜೊತೆ '666: ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾ ಮಾಡುತ್ತಿದ್ದಾರೆ. ಅವರು ಕೂಡ ಮನಮುಟ್ಟುವಂತೆ ಬರೆದುಕೊಂಡಿದ್ದಾರೆ. "ನಿಮ್ಮ ಜೊತೆಗಿದ್ದು, ನಿಮ್ಮ ನಟನೆಯ ಮ್ಯಾಜಿಕ್ ನೋಡುವುದೇ ನನ್ನ ಕೆಲಸದ ಒಂದು ದೊಡ್ಡ ಸೌಭಾಗ್ಯ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು, ನಿಮ್ಮ ಶಿವಣ್ಣ. ಲವ್ ಯೂ," ಎಂದು ಹೇಮಂತ್ ರಾವ್ ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ '666' ಚಿತ್ರದ ಮೇಕಿಂಗ್‌ನ ಒಂದು ವಿಡಿಯೋವನ್ನೂ ಅವರು ಹಂಚಿಕೊಂಡಿದ್ದಾರೆ.

ಅನನ್ಯ ಸಿನಿಪಯಣ

ಶಿವರಾಜ್‌ಕುಮಾರ್ ಅವರು 'ಓಂ', 'ಜನುಮದ ಜೋಡಿ', 'ನಮ್ಮೂರ ಮಂದಾರ ಹೂವೆ', 'ಸಿಂಹದ ಮರಿ', 'AK 47', 'ಜೋಗಿ', 'ಭಜರಂಗಿ', 'ಮಫ್ತಿ', 'ಶಿವಲಿಂಗ', 'ಟಗರು' ಸೇರಿದಂತೆ ಹಲವು ಸೂಪರ್‌ಹಿಟ್ ಚಿತ್ರಗಳ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಶಿವಣ್ಣ ಕೊನೆಯದಾಗಿ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ರಜನಿಕಾಂತ್ ನಟನೆಯ 'ಜೈಲರ್ 2' ಹಾಗೂ ರಾಮ್ ಚರಣ್ ಅಭಿನಯದ 'ಪೆದ್ದಿ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.