ಮುಚ್ಚುಮರೆ ಇಲ್ಲದೇ ನಟ ದರ್ಶನ್ ಕೇಸ್ ಬಗ್ಗೆ ಮುಕ್ತವಾಗಿ ಮಾತಾಡಿದ ಹಿರಿಯಣ್ಣ ಶಿವಣ್ಣ!
ಅಪ್ಪಾಜಿ, ತೂಗುದೀಪ ಶ್ರೀನಿವಾಸ್, ವಜ್ರಮುನಿ, ದಿನೇಶ್ ಅವ್ರೆಲ್ಲಾ ಜೊತೆಗೆ ಬೆಳೆದವ್ರು.. ಅಷ್ಟು ವ್ಯಾಲ್ಯೂಸ್ ಇತ್ತು. ಆ ಸುದ್ದಿ ಕೇಳಿದಾಗ ಶಾಕ್ ಆಯ್ತು, ಅಯ್ಯೋ ಯಾಕ್ ಹೀಗ್ ಆಯ್ತು ಅಂತ ಅನ್ನಿಸ್ತು.. ಈಗ ಕೇಸ್ ಕೋರ್ಟಲ್ಲಿ ಇದೆ, ವಾದ-ವಿವಾದ ನಡೆದು ತಪ್ಪು ಯಾರದ್ದು ಅಂತ ಕೋರ್ಟ್ನಲ್ಲಿ ನಿರ್ಧಾರ ಆಗುತ್ತೆ..
ಕರುನಾಡು ಚಕ್ರವರ್ತಿ ಖ್ಯಾತಿಯ ನಟ ಶಿವರಾಜ್‌ಕುಮಾರ್ (Shiva Rajkumar) ಅವರು ಕನ್ನಡದ ' D Boss' ಖ್ಯಾತಿಯ ನಟ ದರ್ಶನ್ (Actor Darshan) ಅವರ ಬಗ್ಗೆ ಇತ್ತೀಚೆಗೆ ಮಾತನ್ನಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ಹಿರಿಯ ಶಿವಣ್ಣ ಅವರು ನಟ ದರ್ಶನ್ ಬಗ್ಗೆ ಅದೇನು ಹೇಳಿದ್ದಾರೆ, ತಮ್ಮ ಫ್ಯಾಮಿಲಿ ಹಾಗೂ ತೂಗುದೀಪ ಶ್ರೀನಿವಾಸ್ ಕುಟುಂಬದ ಒಡನಾಟದ ಬಗ್ಗೆ ಏನೆಲ್ಲಾ ಹೇಳಿದ್ದಾರೆ ಎಂಬ ಬಗ್ಗೆ ವಿವರಣೆ ಇಲ್ಲಿದೆ ನೋಡಿ.. 'ದರ್ಶನ್ ಕೊಲೆ ಕೇಸ್ ಆರೋಪಿ' ಆಗಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಶಿವಣ್ಣ ಉತ್ತರಿಸಿದ್ದಾರೆ..
'ಆ ಸುದ್ದಿ ಕೇಳಿದ ತಕ್ಷಣ ಅನ್ನಿಸ್ತು.. ಹೌದಾ? ಯಾಕೆ, ಏನಾಯ್ತು ಅಂತ.. ಯಾಕಂದ್ರೆ, ನಾವೆಲ್ಲಾ ಚಿಕ್ಕ ವಯಸ್ಸಿಂದ ನೋಡಿರೋದು.. ತೂಗುದೀಪ ಶ್ರೀನಿವಾಸ್ ಫ್ಯಾಮಿಲಿ ಅಂದ್ರೆ ನಮ್ ಫ್ಯಾಮಿಲಿಗೆ ತುಂಬಾ ಹತ್ತಿರ.. ಅಪ್ಪಾಜಿ ( Dr Rajkumar) ಒಂದ್ ಕಾಲದಲ್ಲಿ ಹೇಳಿದ್ರು, 'ತೂಗುದೀಪ ಶ್ರೀನಿವಾಸ್ ಅವ್ರಿಗೆ ನಮ್ ಎಲ್ಲಾ ಸಿನಿಮಾಗಳಲ್ಲಿ ಪಾತ್ರ ಕೊಡ್ಬೇಕು' ಅಂತ.. ಅಂದ್ರೆ ಅಷ್ಟರಮಟ್ಟಿಗೆ ಅಪ್ಪಾಜಿ, ತೂಗುದೀಪ ಶ್ರೀನಿವಾಸ್, ವಜ್ರಮುನಿ, ದಿನೇಶ್ ಅವ್ರೆಲ್ಲಾ ಜೊತೆಗೆ ಬೆಳೆದವ್ರು..
ದೃಷ್ಟಿ ಬೀಳದಿರಲಿ ದೊಡ್ಮನೆ ಕುಟುಂಬದ ಈ ಫೋಟೋಗೆ ಅಂತಿರೋದ್ಯಾಕೆ ನೆಟ್ಟಿಗರು!
ಅಷ್ಟು ವ್ಯಾಲ್ಯೂಸ್ ಇತ್ತು. ಆ ಸುದ್ದಿ ಕೇಳಿದಾಗ ಶಾಕ್ ಆಯ್ತು, ಅಯ್ಯೋ ಯಾಕ್ ಹೀಗ್ ಆಯ್ತು ಅಂತ ಅನ್ನಿಸ್ತು.. ಈಗ ಕೇಸ್ ಕೋರ್ಟಲ್ಲಿ ಇದೆ, ವಾದ-ವಿವಾದ ನಡೆದು ತಪ್ಪು ಯಾರದ್ದು ಅಂತ ಕೋರ್ಟ್ನಲ್ಲಿ ನಿರ್ಧಾರ ಆಗುತ್ತೆ.. ನಾವ್ ಏನ್ ಮಾಡೋಕಾಗುತ್ತೆ? ಆದ್ರೆ ನಮಗೆ ಬೇಸರ ಅಂತ ಖಂಡಿತ ಆಗುತ್ತೆ ಯಾಕ್ ಹೀಗಾಯ್ತು ಅಂತ..!
'ದೇವರ ಮಗ' ಚಿತ್ರದಲ್ಲಿ ಅವ್ರೇ ಬಂದು ಈ ಚಿತ್ರದಲ್ಲಿ ನಾನು ನಟಿಸ್ತೀನಿ ಅಂದಾಗ ನಾನು 'ಅಯ್ಯೋ, ನೀನು ಇಷ್ಟು ಹ್ಯಾಂಡ್‌ಸಮ್ ಆಗಿದೀಯ.. ಹೀರೋ ಆಗಿನೇ ಮಾಡಬಹುದು' ಅಂತ ಹೇಳಿದ್ದೆ.. ಅದಕ್ಕೆ ಅವ್ನು.. ಇಲ್ಲ, ನಾನು ನಿಮ್ ಜೊತೆ ಆಕ್ಟ್ ಮಾಡ್ಬೇಕು, ಇದ್ರಲ್ಲೂ ಮಾಡ್ತೀನಿ ಅಂತ ಆ ಚಿತ್ರದಲ್ಲಿ ನಟಿಸಿದ್ದ.. ಅಮೇಲೆ ಮೆಜೆಸ್ಟಿಕ್ ಅಂತ ಅವ್ನೇ ಹೀರೋ ಆಗಿರೋ ಮೂವಿ ಬಂತು.. ಅವ್ನು ಆಮೇಲೆ ಬಿಗ್ ಹೀರೋ ಆದ.. ಅದೆಲ್ಲಾ ನಮ್ಗೆ ಖುಷಿನೇ..
ವಿಜಯ ರಾಘವೇಂದ್ರಗೆ ಜೋಡಿಯಾದ ಡಾಕ್ಟರ್ ಅಶ್ವಿನಿ; ಚಿನ್ನಾರಿ ಮುತ್ತನಿಗೆ ಹೊಸ ಗೃಹಮಂತ್ರಿ!
ಆದ್ರೆ ಈಗಾಗಿರೋದ್ರ ಬಗ್ಗೆ ನಮಗೆ ಗೊತ್ತಿಲ್ಲ. ಅಲ್ಲೇನಾಗಿದೆ ಅಂತಾನೆ ಗೊತ್ತಿಲ್ದೇ ಏನು ಹೇಳೋದು.. ನಾವು ಊಹೆ ಮಾಡ್ಕೊಂಡು ಹೇಳೋಕೆ ಆಗಲ್ಲ.. ದರ್ಶನ್ ಯಾವಾಗ್ಲೇ ನಾನು ಇರುವಲ್ಲಿ ಬಂದ್ರೂ ತುಂಬಾ ರೆಸ್ಪೆಕ್ಟ್ ಕೊಡ್ತಾ ಇದ್ದ, ನನ್ ಪಕ್ಕದಲ್ಲಿ ಕೂತ್ಕೊತಾ ಇರ್ಲಿಲ್ಲ.. ನಾನೇ ಎಷ್ಟೋ ಸಾರಿ ಅವ್ನ ಎಳೆದು ಪಕ್ಕದಲ್ಲಿ ಕೂರಿಸ್ಕೊತಾ ಇದ್ದೆ..
ಕಾವೇರಿ ಚಳುವಳಿನಲ್ಲಿ ನೀವೇ ನೋಡಿದೀರಲ್ಲ.. ಅವ್ನು ನನ್ ಕಾಲಿಗೆ ಬಿದ್ದು ನಮಸ್ಕಾರ ಮಾಡಿ, ಆಮೇಲೆ ದೂರದಲ್ಲಿ ಚೇರ್ ಎಳ್ಕೊಂಡು ಕೂತ್ಕೊಂಡ.. ಆದ್ರೆ, ನಾನೇ ಅವೆಲ್ಲಾ ಗೌರವ ನಂಗೆ ಬೇಡ ಅಂತ ಹೇಳಿ, ಅವ್ನ ಎಳೆದು ಪಕ್ಕದಲ್ಲೇ ಚೇರ್‌ನಲ್ಲಿ ಕೂತ್ಕೊಳ್ಳೋಕೆ ಹೇಳಿದ್ದೆ, ಅವ್ನು ಕೂತಿದ್ದ.. ಅವ್ನು ಸರಳ ವ್ಯಕ್ತಿ.. ' ಎಂದಿದ್ದಾರೆ ಹಿರಿಯ ನಟ, ಡಾ ರಾಜ್‌ಕುಮಾರ್ ಮಗ ಶಿವರಾಜ್‌ಕುಮಾರ್!
ಯಾರಿಗೂ ಹೇಳದ 'ಬಂಗಾರದ ಮನುಷ್ಯ' ಭಾರೀ ಸಕ್ಸಸ್ ಗುಟ್ಟು ಉಪೇಂದ್ರಗೆ ಹೇಳಿದ್ರಂತೆ ಅಣ್ಣಾವ್ರು!
ಅಂದಹಾಗೆ, ನಟ ಶಿವಣ್ಣ ಅವರಿಗೆ ಗಂಭೀರ ಖಾಯಿಲೆಯಿಮದ ಬಳಲುತ್ತಿದ್ದು, ಚಿಕಿತ್ಸೆ ಸಲುವಾಗಿ ಸದ್ಯದಲ್ಲೇ ಅಮೆರಿಕಾಗೆ ಹೋಗಲಿದ್ದಾರೆ. ಅಲ್ಲಿಯೇ ಒಂದು ಸರ್ಜರಿಯನ್ನು ಕೂಡ ಮಾಡಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 'ಅಭಿಮಾನಿಗಳಿಗೆ ನನ್ನ ಬಗ್ಗೆ ಎಲ್ಲವೂ ಗೊತ್ತಿರಬೇಕು. ನನ್ನ ಅನಾರೋಗ್ಯವನ್ನು ನಾನು ಅಭಿಮಾನಿಗಳಿಮದ ಮುಚ್ಚಿಡಲು ಬಯಸುವುದಿಲ್ಲ. ಆದರೆ, ಯಾರೂ ಆತಂಕಕ್ಕೆ ಒಳಗಾಗಬೇಡಿ. ದೇವರ ದಯೆಯಿಂದ ಮುಂದೆ ಎಲ್ಲವೂ ಸರಿ ಹೋಗಲಿದೆ' ಎಂದಿದ್ದಾರೆ ನಟ ಶಿವಣ್ಣ.