‘ಮತ್ತೆ ಜೋಗಿ ಹವಾ ಶುರುವಾಗಿದೆ’ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಹೀಗೆ ಶಿವಣ್ಣ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿರುವ ಈ ಫೋಟೋ ‘ಶಿವಪ್ಪ’ ಚಿತ್ರದ್ದು.

ಚಂದನ್ ಬಿರಿಯಾನಿ ಹೊಟೇಲಿನಲ್ಲಿ ಶಿವಣ್ಣ, ಶ್ರುತಿ; ರುಚಿ ಹೇಗಿತ್ತು ಗೊತ್ತಾ?

ತಮಿಳಿನ ವಿಜಯ್ ಮಿಲ್ಟನ್ ನಿರ್ದೇಶನದ ಈ ಚಿತ್ರಕ್ಕೆ ಶೂಟಿಂಗ್ ಆರಂಭವಾಗಿದೆ. ಇದರಲ್ಲಿ ಎರಡ್ಮೂರು ಶೇಡ್‌ಗಳಲ್ಲಿ ಶಿವಣ್ಣ ನಟಿಸಲಿದ್ದು, ಈ ಪೈಕಿ ಒಂದು ಲುಕ್, ಶೂಟಿಂಗ್ ಜಾಗದಿಂದಲೇ ಬಹಿರಂಗವಾಗಿದೆ. ತಮ್ಮ ನೆಚ್ಚಿನ ನಟನ ಹೊಸ ಚಿತ್ರದ ಸ್ಟ್ ಲುಕ್‌ಗೆ ಫಿದಾ ಆಗಿರುವ ಅಭಿಮಾನಿಗಳು ಫೋಟೋ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಫೋಟೋ ನೋಡಿದ ಬಹುತೇಕರು ‘ಜೋಗಿ’ ಚಿತ್ರದ ಲುಕ್ ನೆನಪಿಸಿಕೊಳ್ಳುತ್ತಿದ್ದಾರೆ. ಯಾಕೆಂದರೆ ಅದು ಶಿವಣ್ಣ ಅವರ ಸಿಗ್ನೇಚರ್ ಲುಕ್ ಎನ್ನಬಹುದು. 

ಹ್ಯಾಟ್ರಿಕ್‌ ಹೀರೋ ಕೈಯಲ್ಲಿ ಹೊಸ 7 ಸಿನಿಮಾಗಳು; ಆದರೆ ಎರಡು ಸಿನಿಮಾಗಳು ಡ್ರಾಪ್‌! 

ಈಗ ಮತ್ತೆ ‘ಶಿವಪ್ಪ’ ಚಿತ್ರಕ್ಕಾಗಿ ಜುಟ್ಟು ಬಿಟ್ಟಿರುವುದರಿಂದ ಚಿತ್ರದ ಮೇಲೆ ಕ್ರೇಜ್ ಹೆಚ್ಚಾಗಿದೆ. ಚಿತ್ರದಲ್ಲಿ ಧನಂಜಯ್, ಪೃಥ್ವಿ ಅಂಬರ್, ಅಂಜಲಿ, ಯಶಾ ಶಿವಕುಮಾರ್ ಶಿವಣ್ಣ ಜತೆ ನಟಿಸುತ್ತಿದ್ದಾರೆ. ಚಿತ್ರತಂಡದ ಕಣ್ಣುತಪ್ಪಿಸಿ ಹೊರಬಂದಿರುವ ಚಿತ್ರದ ಈ ಫರ್ಸ್ಟ್ ಲುಕ್ ಬಗ್ಗೆ ಚಿತ್ರದ ನಿರ್ದೇಶಕರು ಏನೂ ಹೇಳುತ್ತಿಲ್ಲ. ಫಬ್ರವರಿ ತಿಂಗಳ ಹೊತ್ತಿಗೆ ಶೂಟಿಂಗ್ ಮುಗಿಸುವ ತರಾತುರಿಯಲ್ಲಿದ್ದಾರೆ ನಿರ್ದೇಶಕರು. ಅವರ ಪ್ರಕಾರ, ಈಗ ಬಹಿರಂಗಗೊಂಡಿರುವ ಲುಕ್ ಹಿಂದಿನ ಕತೆ ಏನು, ಚಿತ್ರದಲ್ಲಿ ಈ ಪಾತ್ರ ಹೇಗೆ ಮೂಡಿ ಬರಲಿದೆ ಎಂಬುದನ್ನು ಸಿನಿಮಾ ನೋಡಿಯೇ ತಿಳಿಯಬೇಕಂತೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ, ಕೃಷ್ಣ ಸಾರ್ಥಕ್ ನಿರ್ಮಾಣದ ಚಿತ್ರ ಇದಾಗಿದೆ.