ಹುಚ್ಚ ಚಿತ್ರದಲ್ಲಿ ಶಿವಣ್ಣ ಯಾಕೆ ನಟಿಸಲಿಲ್ಲ? ಸುದೀಪ್ ಎಂಟ್ರಿ ಆಗಿದ್ದು ಯಾರಿಂದ?

ಸುದೀಪ್ ನಟನೆಯ 'ಹುಚ್ಚ' ಚಿತ್ರದ ಹಿಂದೆ ದೊಡ್ಡ ಕಥೆಯಿದೆ. ಸುದೀಪ್ ಕೆರಿಯರ್‌ನಲ್ಲಿ ಹುಚ್ಚ ಸಿನಿಮಾ ಭಾರೀ ಮಹತ್ವದ್ದಾಗಿದೆ. ಹುಚ್ಚ ಸಿನಿಮಾ ಬಳಿಕ ನಟ ಸುದೀಪ್ ಅವರು ಸ್ಟಾರ್ ಆದ್ರು. ಆದ್ರೆ ಆ ಚಿತ್ರವನ್ನು ಸುದೀಪ್ ಬದಲು.. 

Shivarajkumar gets first offer for huchcha movie before kichcha sudeep srb

ಜುಲೈ 2001ರಲ್ಲಿ ಬಿಡುಗಡೆಯಾಗಿ ಜಯಭೇರಿ ಬಾರಿಸಿದ್ದ ಸುದೀಪ್ ನಟನೆಯ 'ಹುಚ್ಚ' ಚಿತ್ರದ ಹಿಂದೆ ದೊಡ್ಡ ಕಥೆಯಿದೆ. ಈ ಕನ್ನಡ ಚಿತ್ರವು ಮೂಲ ತಮಿಳು ಚಿತ್ರ 'ಸೇತು' ರೀಮೇಕ್ ಎಂಬುದು ಬಹುತೇಕರಿಗೆ ಗೊತ್ತು. ಸುದೀಪ್ ಕೆರಿಯರ್‌ನಲ್ಲಿ ಹುಚ್ಚ ಸಿನಿಮಾ ಭಾರೀ ಮಹತ್ವದ್ದಾಗಿದೆ. ಹುಚ್ಚ ಸಿನಿಮಾ ಬಳಿಕ ನಟ ಸುದೀಪ್ ಅವರು ಸ್ಟಾರ್ ನಟರಾದರು ಎಂದರೆ ತಪ್ಪಿಲ್ಲ. ಅಷ್ಟರಮಟ್ಟಿಗೆ ಹುಚ್ಚ ಚಿತ್ರದ ಬಳಿಕ ಸುದೀಪ್ ವೃತ್ತಿಜೀವನ ಬದಲಾಯಿತು. 

ಆದರೆ, ಈ ಚಿತ್ರ ಆಗಿದ್ದರ ಹಿಂದೊಂದು ದೊಡ್ಡ ಕಥೆಯಿದೆ. ಈ ಚಿತ್ರದ ಹೀರೋ ಆಗಬೇಕಾಗಿದ್ದು ಕನ್ನಡದ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್. ಅವರು ತಮಿಳಿನ ಸೇತು ಚಿತ್ರದ ರೀಮೇಕ್ ರೈಟ್ಸ್ ತಂದು ಅದನ್ನು ತಾವೇ ನಿರ್ಮಾಣ ಮಾಡಿ, ನಾಯಕರಾಗಿಯೂ ತಾವೇ ನಟಿಸಲು ನಿರ್ಧರಿಸಿದ್ದರಂತೆ. ಆದರೆ, ನಿರ್ಮಾಪಕ ರೆಹಮಾನ್ ಅವರು ಬೇರೆ ನಾಯಕರನ್ನು ಹಾಕಿಕೊಂಡು ಚಿತ್ರ ನಿರ್ಮಾಣ ಮಾಡುವುದಾಗಿ ಹೇಳಿ, ಶಿಲ್ಪಾ ಶ್ರೀನಿವಾಸ್ ಅವರಿಂದ ರೈಟ್ಸ್ ಖರೀದಿಸಿದ್ದಾರೆ.

ನಿಧನರಾದ ನಟಿ ಶೋಭಿತಾ ಶಿವಣ್ಣ ಇನ್ನು ನೆನಪು ಮಾತ್ರ; ಇಲ್ಲಿವೆ ನಟಿಯ ಮುದ್ದುಮುದ್ದಾದ ಫೋಟೋಸ್! 

ಬಳಿಕ, ರೆಹಮಾನ್ ಅವರು ನಟ ಶಿವರಾಜ್‌ಕುಮಾರ್ ಅವರನ್ನು ಸಂಪರ್ಕಿಸಿ ಹುಚ್ಚ ಟೈಟಲ್ ಹಾಗೂ ಕಥೆ ಹೇಳಿದ್ದಾರೆ. ಆದರೆ, ಶಿವಣ್ಣ ಪತ್ನಿ ಗೀತಾ ಅವರು ಈ ಚಿತ್ರದ ಸೆಕೆಂಟ್ ಹಾಫ್ ಗೆಟಪ್‌ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ನನ್ನ ಪತಿ ಶಿವರಾಜ್‌ಕುಮಾರ್ ಅವರು ಅಂಥ ಗೆಟಪ್‌ನಲ್ಲಿ ನಟನೆ ಮಾಡಲು ಸಾಧ್ಯವಿಲ್ಲ' ಎಂದರಂತೆ, ಬಳಿಕ ರೆಹಮಾನ್ ಅವರು ನಟ ಉಪೇಂದ್ರರನ್ನ ಸಂಪರ್ಕಿಸಲು, ಅವರು 'ಹುಚ್ಚ ಟೈಟಲ್ ಬೇಡ, ಚೇಂಜ್ ಮಾಡಿದರೆ ಮಾಡುತ್ತೇನೆ' ಎಂದಿದ್ದಾರೆ. 

ಆದರೆ ಹುಚ್ಚ ಚಿತ್ರವನ್ನು ನಿರ್ಮಿಸಲು ಹೊರಟಿರುವ ರೆಹಮಾನ್ ಅವರಿಗೆ ಟೈಟಲ್ ಬದಯಾಯಿಸಲು ಇಷ್ಟವಾಗಿಲ್ಲ. ಈ ಕಾರಣಕ್ಕೆ ಯೋಚಿಸುತ್ತಿರುವಾಗ ರೆಹಮಾನ್ ಮಗಳು ಈ ಚಿತ್ರಕ್ಕೆ ನಾಯಕರನ್ನಾಗಿ ನಟ ಸುದೀಪ್ ಅವರನ್ನು ಸೂಚಿಸಿದರಂತೆ. ಕೆಲದಿನಗಳ ಬಳಿಕ, ಈವೆಂಟ್ ಒಂದರಲ್ಲಿ ಸುದೀಪ್ ನೋಡಿದ ರೆಹಮಾನ್ ಅವರು, ಇವರೇ ಹೀರೋ ಆದ್ರೆ ಓಕೆ ಎನ್ನಿಸಿ ಸುದೀಪ್ ಅವರನ್ನು ಭೇಟಿಯಾಗಿ ಕಥೆ ಹೇಳಿದ್ದಾರೆ. 

ಮನಮೆಚ್ಚಿದ ಹುಡುಗಿ ಬದ್ಲು ಐಶ್ವರ್ಯಾ ರೈ ಸಿಕ್ರೂ ಹುಡುಗ್ರಿಗೆ ಬೇಡ: ಕೆಜಿಎಫ್ ಸ್ಟಾರ್ ಯಶ್

ಅದೇ 'ಹುಚ್ಚ' ಟೈಟಲ್ ಜೊತೆ ತಮಿಳಿನ ಬಾಲಾ ನಿರ್ದೇಶನದ 'ಸೇತು' ಚಿತ್ರವು ಸುದೀಪ್ ನಾಯಕತ್ವದಲ್ಲಿ ಬಂದು ಕನ್ನಡದಲ್ಲಿ ಸೂಪರ್ ಹಿಟ್ ದಾಖಲಿಸಿದೆ. ಮುಂದಿನದ್ದು ಇತಿಹಾಸ, ಈಗ ಎಲ್ಲರಿಗೂ ಗೊತ್ತಿದೆ. 'ಯಾವ ಹೂವು ಯಾರ ಮುಡಿಗೋ' ಎಂಬಂತೆ, ಯಾರೋ ಮಾಡಬೇಕೆಂದು ರೈಟ್ಸ್‌ ಕೊಂಡುತಂದ ಚಿತ್ರವನ್ನು ಯಾರೋ ಮಾಡಿ, ಇನ್ಯಾರೋ ಹೀರೋ ಆಗಿ ತಮಿಳು ರೀಮೇಕ್ ಚಿತ್ರದಲ್ಲಿ ಮಿಂಚಿದ್ದಾರೆ. ಹುಚ್ಚ ಚಿತ್ರದ ಹಾಡಿನಲ್ಲಿ ಬರುವ 'ಕಿಚ್ಚ' ಶಬ್ದವನ್ನು ಆ ಬಳಿಕ ನಟ ಸುದೀಪ್ ಅವರಿಗೆ ಅಂಟಿಸಲಾಗಿದೆ. 

ಹುಚ್ಚ ಚಿತ್ರದ ಬಳಿಕ ಕಿಚ್ಚ ಸುದೀಪ್ ಆಗಿರುವ ನಟ ಸುದೀಪ್ ಇವತ್ತಿಗೂ 'ಕಿಚ್ಚ ಸುದೀಪ್' ಎಂಬ ಹೆಸರಿನಿಂದಲೇ ಮುಂದುವರಿಯುತ್ತಿದ್ದಾರೆ. ನಿರ್ದೇಶಕ ಓಂ ಪ್ರಕಾಶ್ ರಾವ್ ಅವರಿಗೆ ಕೂಡ ಈ ಚಿತ್ರವು ಚಾಲೆಂಜಿಂಗ್ ಆಗಿದ್ದು, ಅದನ್ನವರು ಯಶಸ್ವಿಯಾಗಿ ನಿರ್ವಹಿಸಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. 

ಅಮೆರಿಕಾಗೆ ಹೊರಟುನಿಂತ ಕ್ಷಣದಲ್ಲಿ ಶಿವಣ್ಣ ಫ್ಯಾನ್ಸ್‌ಗೆ ಕೊಟ್ಟಿದ್ದೇನು?

Latest Videos
Follow Us:
Download App:
  • android
  • ios