Asianet Suvarna News Asianet Suvarna News

ಶಿವಾಜಿ ಪಾತ್ರ ಇನ್ನೂ ಇಂಟರೆಸ್ಟಿಂಗ್‌ ಆಗಿದೆ : Ramesh Aravind

ರಮೇಶ್ ಅರವಿಂದ್ ಹುಟ್ಟುಹಬ್ಬದ ದಿನವೇ ಶಿವಾಜಿ ಸುರತ್ಕಲ್‌ 2 ಟೀಸರ್‌ ಅನಾವರಣ. ಹೇಗಿದೆ ಶಿವಾಜಿ ಹೊಸ ಲುಕ್?

Shivaji Surathkal 2 is more interesting says Ramesh Aravind vcs
Author
First Published Sep 12, 2022, 8:42 AM IST

‘ನಾವೆಲ್ಲ ನರಕ ಅಂದರೆ ಭೂಮಿಯ ಕೆಳಗೆ, ಪಾತಾಳದ ಹತ್ತತ್ರ ಇರೋದು ಅಂದುಕೊಂಡಿದ್ದೇವೆ. ಆದರೆ ನರಕ ಅದರಿಂದ ಮೇಲಿದೆ. ಆಕಾಶಕ್ಕಿಂತ ಸ್ವಲ್ಪ ಕೆಳಗೆ.. ದೇಹದ ಮೇಲ್ಭಾಗದಲ್ಲಿರುವ ನಮ್ಮ ತಲೆಯಲ್ಲಿದೆ. ಕೆಟ್ಟಯೋಚನೆ, ಬೇಡದ ಅನುಮಾನ ಇತ್ಯಾದಿಗಳಿಂದ ನಾವು ಓಡಾಡುವ ನರಕಗಳಾಗಿದ್ದೇವೆ. ಇದು ಬದಲಾದ್ರೆ ನಾವು ಓಡಾಡುವ ಸ್ವರ್ಗಗಳಾಗಬಹುದು..’

ಸದಾ ಜನರಿಗೆ ಸ್ಫೂರ್ತಿ ತುಂಬುವ ರಮೇಶ್‌ ಅರವಿಂದ್‌ (Ramesh Aravind) ಈ ಮಾತು ಹೇಳಿದ ಸನ್ನಿವೇಶ ಅವರ ನಟನೆಯ ‘ಶಿವಾಜಿ ಸುರತ್ಕಲ್‌ 2’ (Shivaji Surathkal 2)  ಟೀಸರ್‌ ಲಾಂಚ್‌ ಕಾರ್ಯಕ್ರಮ. ಚಿತ್ರದಲ್ಲಿ ಶಿವಾಜಿಯ ಮನಸ್ಥಿತಿ ಹೇಗಿರುತ್ತೆ ಅನ್ನೋದನ್ನ ಅವರು ಅವರದೇ ಸ್ಟೈಲಿನಲ್ಲಿ ಹೇಳಿದ್ದು ಹೀಗೆ.

Ramesh Aravind Birthday ಇಂದು ಚಿರ ಯೌವನಿಗ ರಮೇಶ್‌ ಅರವಿಂದ್‌ ಹುಟ್ಟುಹಬ್ಬ

‘ಇಂಥದ್ದೊಂದು ನರಕದಲ್ಲಿರುವ ಶಿವಾಜಿ ತನ್ನೊಳಗೆ ರಾಕ್ಷಸರನ್ನಿಟ್ಟುಕೊಂಡೇ ಹೇಗೆ ಹೋರಾಡ್ತಾನೆ, ಅದರಲ್ಲಿ ಜಯಿಸುತ್ತಾನಾ ಇಲ್ವಾ ಅನ್ನೋದು ಕಥೆ. ಈ ಚಿತ್ರದ ಪ್ರೀಕ್ವಲ್‌ ನೋಡದವರೂ ಇದನ್ನು ನೋಡಬಹುದು, ಕನ್‌ಫä್ಯಶನ್ಸ್‌ ಇರಲ್ಲ’ ಎಂದೂ ರಮೇಶ್‌ ಹೇಳಿದರು.

ಸಿನಿಮಾ ಬಗ್ಗೆ ಬಹಳ ವಿವರವಾಗಿ ಮಾತನಾಡಿದ ನಿರ್ದೇಶಕ ಆಕಾಶ್‌ ಶ್ರೀವತ್ಸ, ‘ಸೋಷಿಯಲ್‌ ಮೀಡಿಯಾಗಳು (Social Media) ಬಹಳ ಸೂಕ್ಷ್ಮ ಇರುವಾಗ ಸೀಕ್ವಲ್‌ ಮಾಡೋದು ನಿಜಕ್ಕೂ ಚಾಲೆಂಜಿಂಗ್‌. ಶಿವಾಜಿ ಸುರತ್ಕಲ್‌ ಮೊದಲ ಭಾಗ ಬಂದಾಗ ‘15 ಮಿಸ್ಟೇಕ್ಸ್‌ ಆಫ್‌ ಶಿವಾಜಿ ಸುರತ್ಕಲ್‌’ ಅಂತ ಟ್ರೋಲ್‌ ಮಾಡಿದ್ರು. ಇಂಥಾ ಗ್ರಹಿಕೆಯಿಂದ ಒಂದು ಪದ ಬಳಸುವಾಗಲೂ ಹತ್ತು ಸಲ ಯೋಚಿಸೋ ಹಾಗಾಗಿದೆ. ಈ ಸಿನಿಮಾದಲ್ಲಿ ಮಾಯಾವಿ ಯಾರು, ಅದರ ಮಿಸ್ಟ್ರಿ ಏನು, ಅದನ್ನು ಶಿವಾಜಿ ಕಂಡು ಹಿಡೀತಾರಾ ಇಲ್ವಾ, ಇಬ್ಬರು ಶಿವಾಜಿಗಳಿದ್ದಾರ, ಒಬ್ಬನ ಕತೆಯಾ, ಆತನೇ ವಿಲನ್ನಾ, ಇನ್ನೊಬ್ಬರಿದ್ದಾರಾ ಅನ್ನೋ ಪ್ರಶ್ನೆಗೆಲ್ಲ ಈ ಚಿತ್ರದಲ್ಲಿ ಉತ್ತರವಿದೆ’ ಎಂದರು.

ಶಿವಾಜಿ ಸೂರತ್ಕಲ್ 2; ಕಳ್ಳ-ಪೊಲೀಸ್ ಆಟದಲ್ಲಿ ಕಳ್ಳನೂ ಅವ್ನೆ ಪೊಲೀಸ್ ಕೂಡ ಅವ್ನೆ

ನಿರ್ಮಾಪಕ ಅನೂಪ್‌ ಗೌಡ (Anoop Gowda) ಹೊಸ ನಿರ್ಮಾಪಕರನ್ನು ಬೆಂಬಲಿಸುವಂತೆ ಮನವಿ ಮಾಡಿದರು. ನಾಯಕಿ ರಾಧಿಕಾ ನಾರಾಯಣ್‌, ‘ಲೇಯರ್‌ ಇರುವ ಪಾತ್ರ ನನ್ನದು, ಶಿವಾಜಿ ಸುರತ್ಕಲ್‌ ಭಾಗಗಳೆಷ್ಟೇ ಬಂದರೂ ನಾನಿರ್ತೀನಿ’ ಎಂದರು. ಡಿಸಿಪಿ ಪಾತ್ರ ಮಾಡಿರುವ ಮೇಘನಾ ಗಾಂವ್ಕರ್‌ (Meghana Goankar), ‘ತಂದೆ ಪೊಲೀಸ್‌ ಅಧಿಕಾರಿಯಾಗಿರುವ ಕಾರಣ ನನಗೂ ಆ ಪಾತ್ರ ಮಾಡುವ ಕನಸಿತ್ತು. ರಮೇಶ್‌ ಅವರ ಜೊತೆ ನಟಿಸಬೇಕು ಎಂಬ ಕನಸೂ ಬಹಳ ದಿನದಿಂದ ಇತ್ತು. ಎರಡೂ ಕನಸುಗಳೂ ಈ ಚಿತ್ರದ ಮೂಲಕ ಈಡೇರುತ್ತಿದೆ’ ಎಂದು ಖುಷಿ ವ್ಯಕ್ತಪಡಿಸಿದರು. ಚಿತ್ರ ಮುಂದಿನ ವರ್ಷ ಜನವರಿಯಲ್ಲಿ ಬಿಡುಗಡೆಯಾಗಲಿದೆ. ಟೀಸರ್‌ ರಮೇಶ್‌ ಅರವಿಂದ್‌ ಅಫೀಷಿಯಲ್‌ ಯೂಟ್ಯೂಬ್‌ನಲ್ಲಿ (Ramesh Aravind Youtube channel) ಬಿಡುಗಡೆಯಾಗಿದೆ.

 

Follow Us:
Download App:
  • android
  • ios