ಬೈರಾಗಿ ಸಿನಿಮಾ ಪ್ರಚಾರದಲ್ಲಿ ಸಹೋದರ ಪವರ್ ಸ್ಟಾರ್ ನೆನೆದು ಭಾವುಕರಾದ ಶಿವರಾಜ್‌ಕುಮಾರ್. ಅಪ್ಪು ಎಲ್ಲರ ಮನಸ್ಸಿನಲ್ಲಿದ್ದಾನೆ ಎಂದ ನಟ.....
ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯಿಸಿರುವ ಭೈರಾಗಿ ಸಿನಿಮಾ ಬಿಡುಗಡೆಯಾಗಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಪ್ರಚಾರದಲ್ಲಿ ಶಿವಣ್ಣ, ಪೃಥ್ವಿ ಆಂಬರ್ ಮತ್ತು ಡಾಲಿ ಧನಂಜಯ್ ತೊಡಗಿಸಿಕೊಂಡಿದ್ದಾರೆ. ಕೊಳ್ಳೆಗಾಲದ ಚಿತ್ರಮಂದಿರವೊಂದರಲ್ಲಿ ಅಭಿಮಾನಿಗಳ ಜೊತೆ ಮಾತನಾಡುವ ಸಹೋದರ ಪುನೀತ್‌ರನ್ನು ನೆನಪಿಸಿಕೊಂಡಿದ್ದಾರೆ. ಅಪ್ಪು ನಮ್ಮ ಮನಸ್ಸಿನಲ್ಲಿದ್ದಾರೆ ಎಂದು ಹೇಳಿದ್ದಾರೆ.
ಶಿವಣ್ಣ ಮಾತು:
'ಒಂದು ಮಾತು ಹೇಳುತ್ತೀನಿ ದಯವಿಟ್ಟು ಯಾರೂ ಬೇಜಾರು ಮಾಡಿಕೊಳ್ಳಬಾರದು. ಅಪ್ಪು ನಿಮಗೆ ಮಾತ್ರವಲ್ಲ ಪ್ರತಿಯೊಬ್ಬರ ಮನಸ್ಸಿನಲ್ಲಿ ಇದ್ದಾರೆ. ಅಪ್ಪು ಅಂತ ಹೇಳಿ ದೂರ ತಳ್ಳಬೇಡಿ ಮನಸ್ಸಿನಲ್ಲಿ ಇಟ್ಟುಕೊಳ್ಳಿ ಅಪ್ಪುನ. ಅಲ್ಲಿ ತೋರಿಸಿ ನೀವು ಅದು ನೀವು ಅಪ್ಪುಗೆ ಕೊಡುವ ಮರ್ಯಾದೆ. ಸುಮ್ಮನೆ ಮಾತನಾಡುವುದಲ್ಲ. ಅವನು ಹುಟ್ಟುವಾಗ ನನಗೆ 13 ವರ್ಷ. ಅವನನ್ನು ಮಗು ತರ ನೋಡಿಕೊಂಡಿದ್ದೀನಿ ಗೊತ್ತಾ? ಅವನನ್ನು ಕೊಂಡಾಡಿದ್ದೀವಿ ಅವನ ಯಶಸ್ಸನ್ನು ಕೊಂಡಾಡಿದ್ದೇವೆ. ಇವಾಗಲ್ಲ ಅವಾಗಿಂದ. ನಾನು ಹೀರೋ ಆದಗಿನಿಂದ ಅವನು ಹೀರೋ ಆದಾಗಿನಿಂದ ಅಪ್ಪುಗೆ ಕೊಡುವ ಗೌರವ ಯಾರಿದಂಲೂ ಕೊಡಲು ಸಾಧ್ಯವೇ ಇಲ್ಲ. ಪ್ರತಿಯೊಂದು ಇಂಟರ್‌ವ್ಯೂನಲ್ಲಿ ನೋಡಿ ನನ್ನ ತಮ್ಮನ ಬಗ್ಗೆ ಬಿಟ್ಟು ಬೇರೆ ಯಾರ ಬಗ್ಗೆನೂ ಮಾತನಾಡಲ್ಲ ನಾನು' ಎಂದು ಶಿವಣ್ಣ ಭಾವುಕರಾಗಿದ್ದಾರೆ.
ಡಿಫರೆಂಟ್ ಶೇಡ್‌ನಲ್ಲಿ ಶಿವಣ್ಣ, ಬೈರಾಗಿ ಸಖತ್ ಸ್ಪೆಷಲ್ ಯಾಕೆ ಗೊತ್ತಾ ?
'ನನ್ನ ತಮ್ಮ ಅಂದರೆ ರಕ್ತ ಕಣೋ. ನನ್ನ ಜೀವ ನೋವಾಗುತ್ತದೆ. ಯಾರಿಗೂ ನೋವಿಲ್ಲ ಅಂತಲ್ಲ. ನಮಗೂ ನೋವಿದೆ. ಎಲ್ಲರಿಗೂ ನೋವಿದೆ ಆ ನೋವನ್ನು ನುಂಗಿಕೊಂಡು ನಾವು ಬದುಕಿ ಅವನನ್ನೂ ಬದುಕಿಸಬೇಕು. ನಾವು ಬದುಕಿ ಅವನನ್ನೂ ಬದುಕಿಸಬೇಕು. ನಾವು ಬದುಕಿಸಿ ಅವನನ್ನು ಕರೆದುಕೊಂಡು ಹೋಗಬೇಕು. ಅವನನನ್ನು ಇನ್ನೂ ಜಾಸ್ತಿ ಪ್ರೀತಿ ಮಾಡಬೇಕು. ನನಗೆ ಈ ಚಾಮರಾಜನಗರ ಮತ್ತು ಕೊಳ್ಳೆಗಾಲ ಎಲ್ಲಾ ಕಡೆ ಸ್ವಲ್ಪ ಓಡಾಡಿ ಅಭ್ಯಾಸ ಇದೆ. ಇದೆಲ್ಲಾ ನಮಗೆ ಗೊತ್ತಿರುವ ಜಾಗಗಳೇ. ಕೊಳ್ಳೆಗಾಲ ನಮಗೇನು ಹೊಸ ಜಾಗವಲ್ಲ. ಸಿಂಗನಲ್ಲೂರು ನಮ್ಮ ತಾತನ ಊರು ಗಾಜನೂರು ಅಪ್ಪಾಜಿ ಅವರ ಊರು ಹೀಗಾಗಿ ನನಗೆ ನಂಟು ಜಾಸ್ತಿ ಇದೆ' ಎಂದು ಹೇಳಿದ್ದಾರೆ.
ಎಷ್ಟು ಬೇಕೋ ಅಷ್ಟೇ ಮಾತಾಡ್ತೀನಿ, ಇಲ್ಲಾಂದ್ರೆ ಟ್ರೋಲ್ ಮಾಡ್ತಾರೆ: ಶಿವಣ್ಣ
ಬೈರಾಗಿ ವಿಮರ್ಶೆ:
ನಿರ್ದೇಶಕ ವಿಜಯ್ ಮಿಲ್ಟನ್ ಅವರು ಶಿವರಾಜ್‌ಕುಮಾರ್ ಹಾಗೂ ಧನಂಜಯ್ ಅವರ ಇಮೇಜ್‌ಗೆ ತಕ್ಕಂತೆ ರೂಪಿಸಿರುವ ಸಿನಿಮಾ ‘ಬೈರಾಗಿ’. ಹುಲಿ ವೇಷ ಹಾಕಿ ಕುಣಿಯುವ ನಾಯಕ, ಆಕಸ್ಮಿಕವಾಗಿ ನಡೆಯುವ ಘಟನೆಯಿಂದ ಜೈಲು ಸೇರುತ್ತಾನೆ. ಅಲ್ಲಿ ಪರಿಚಯ ಆಗುವ ಪೊಲೀಸ್ ಅಧಿಕಾರಿಯ ಮೂಲಕ ತನ್ನನ್ನು ಬದಲಾಯಿಸಿಕೊಳ್ಳುವ ದಾರಿ ತುಳಿಯುತ್ತಾನೆ. ಈ ನಡುವೆ ಫೇಸ್‌ಬುಕ್‌ನಲ್ಲಿ ನಾಯಕನಿಗೆ ನಾಯಕಿ ಪರಿಚಯವಾಗುತ್ತಾಳೆ. ಆಕೆಗೆ ಒಂದು ನೋವಿನ ಕತೆ ಇದೆ. ನಾಯಕ ಆ ಕತೆಯ ಕಣ್ಣೀರು ಒರೆಸುತ್ತಾನೆಯೇ? ಪೊಲೀಸ್ ಠಾಣೆಯಲ್ಲೇ ಇದ್ದುಕೊಂಡು ಸಣ್ಣ ಪುಟ್ಟಕೆಲಸಗಳನ್ನು ಮಾಡಿಕೊಂಡಿರುವ ನಾಯಕನಿಗೆ ಅದೇ ಠಾಣೆಯಲ್ಲಿ ಇರುವ ಮತ್ತೊಬ್ಬನ ಸ್ನೇಹ ಆಗುತ್ತದೆ. ಇವರಿಬ್ಬರು ಪೊಲೀಸ್ ಸ್ಟೇಷನ್‌ನ ಕೆಲಸದಾಳುಗಳು. ಆ ಊರಿನಲ್ಲಿ ಬಾಕ್ಸರ್ ಆಗಿರುವ ಕರ್ಣ ಇದ್ದಾನೆ. ಆತನಿಗೆ ಎಂಎಲ್‌ಎ ಆಗುವ ಕನಸು. ಅದರ ಆಸೆ ಹುಟ್ಟಿಸುವ ಮಂತ್ರಿಯೊಬ್ಬರು ಆ ಊರಿಗೆ ಬಂದಾಗ ಆಗುವ ಅನಾಹುತವನ್ನು ನೋಡಿಯೂ ನೋಡದಂತೆ ಇದ್ದುಬಿಡುತ್ತಾನೆ. ಇದರಿಂದ ಶಾಲಾ ಬಾಲಕಿ ಸಾವು ಕಾಣುತ್ತಾಳೆ. ಮುಂದೇನು ಎಂಬುದು ಕತೆ.
