ಕಾಲೇಜ್ ಫೀಸ್ ಕಟ್ಟಲು ಸಿನಿಮಾಕ್ಕೆ ಎಂಟ್ರಿ ಕೊಟ್ಟೆ... ಆದ್ರೆ ಕನ್ನಡ ಇಂಡಸ್ಟ್ರಿ.... ನಟಿ ಶಾನ್ವಿ ಓಪನ್ ಮಾತೇನು?
ಬಹುಭಾಷಾ ನಟಿ ಶಾನ್ವಿ ಶ್ರೀವಾಸ್ತವ ಬೇರೆ ಚಿತ್ರರಂಗಗಳಿಗೆ ಹೋಲಿಸಿದರೆ ಸಂಭಾವನೆ ವಿಷಯದಲ್ಲಿ ಕನ್ನಡ ಇಂಡಸ್ಟ್ರಿ ಹೇಗೆ ಎನ್ನುವ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
ಕೇರಳ ಮೂಲದ ಬಹುಭಾಷಾ ನಟಿ ಶಾನ್ವಿ ಶ್ರೀವಾಸ್ತವ. ಕೇರಳ ಮೂಲದ ಶಾನ್ವಿ ನಾಯರ್ ಈಗ ಶಾನ್ವಿ ಶ್ರೀವಾಸ್ತವ ಎಂದೇ ಕನ್ನಡ ಸೇರಿದಂತೆ ಮಲಯಾಳಂ, ತೆಲಗು, ಮರಾಠಿ ಚಿತ್ರರಂಗದಲ್ಲಿ ಶೈನ್ ಆಗ್ತಿದ್ದಾರೆ. ನಟಿಯ ಜೊತೆ ರೂಪದರ್ಶಿಯೂ ಆಗಿರುವ ಶಾನ್ವಿಗೆ ಈಗ 32 ವರ್ಷ ವಯಸ್ಸು. ಉತ್ತರಪ್ರದೇಶದ ಆಜಮಘಡದಲ್ಲಿ ಶಿಕ್ಷಣ ಪೂರೈಸಿ ಕಾಲೇಜು ಮೆಟ್ಟಿಲು ಏರುವಾಗಲೇ ತೆಲಗುವಿನ `ಲವ್ಲಿ' ಚಿತ್ರಕ್ಕೆ ಎಂಟ್ರಿ ಕೊಟ್ಟರು. ಇದಾದ ಬಳಿಕ `ಅಡ್ಡಾ' ,`ರೌಡಿ' ಚಿತ್ರಗಳಲ್ಲಿ ನಟಿಸಿದರು. 2014ರಲ್ಲಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿರೋ ಶಾನ್ವಿ, `ಚಂದ್ರಲೇಖಾ' ಚಿತ್ರದಲ್ಲಿ ನಟಿಸಿದರು. ಅದಾದ ಬಳಿಕ `ಮಾಸ್ಟರ್ ಪೀಸ್',`ಭಲೇ ಜೋಡಿ', `ಸುಂದರಾಂಗ ಜಾಣ',`ಸಾಹೇಬ',ತಾರಕ್', `ಮಫ್ತಿ' ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಇವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಯಾಕೆ ಎನ್ನುವುದೇ ಕುತೂಹಲಕರ ವಿಷಯ. ಅಷ್ಟೇ ಅಲ್ಲದೇ ಕನ್ನಡ ಇಂಡಸ್ಟ್ರಿ ಬೇರೆಯದ್ದಕ್ಕೆ ಹೋಲಿಸಿದರೆ ಹೇಗೆ ಎನ್ನುವ ಬಗ್ಗೆಯೂ ಶಾನ್ವಿ ಮಾತನಾಡಿದ್ದಾರೆ. ರ‍್ಯಾಪಿಡ್ ರಶ್ಮಿ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಶಾನ್ವಿ ಮನದಾಳದ ಮಾತುಗಳನ್ನಾಡಿದ್ದಾರೆ.
ಕಾಲೇಜು ದಿನಗಳಲ್ಲೇ ತೆಲುಗಿನ 'ಲವ್‌ಲೀ' ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದ ಇವರಿಗೆ 'ಮಾಸ್ಟರ್‌ಪೀಸ್' ಚಿತ್ರಕ್ಕಾಗಿ ಸೈಮಾ ಕ್ರಿಟಿಕ್ಸ್ ಅವಾರ್ಡ್ ಸಹ ಸಿಕ್ಕಿತ್ತು. ಅಷ್ಟಕ್ಕೂ ತಾವು ಕಾಲೇಜು ಫೀಸ್ ಕಟ್ಟುವುದಕ್ಕಾಗಿ ಸಿನಿಮಾದಲ್ಲಿ ನಟಿಸಿದೆ ಎಂದು ಹೇಳಿಕೊಂಡಿದ್ದಾರೆ ನಟಿ. ಕಾಲೇಜು ಫೀಸ್ ನನ್ನದೇ ದುಡ್ಡಿನಲ್ಲಿ ಕಟ್ಟಬೇಕು ಎನ್ನುವ ಕಾರಣಕ್ಕೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೆ. ಇದಕ್ಕೂ ಮುನ್ನ ಕೋಚಿಂಗ್ ಸೆಂಟರ್‌ನಲ್ಲಿ ಒಂದರಲ್ಲಿ ಪಾಠ ಮಾಡ್ತಿದ್ದೆ. ಅಲ್ಲಿ ಕೆಲಸ ಮಾಡಿದ್ದು, ಮೂರು ತಿಂಗಳು ಆಗ ನನಗೆ ತಿಂಗಳಿಗೆ 3,500 ರೂಪಾಯಿ ಸಂಬಳ ಬರುತ್ತಿತ್ತು ಎಂದು ಶಾನ್ವಿ ಹೇಳಿದ್ದಾರೆ.
ನಾಲ್ಕು ಗೋಡೆ ಮಧ್ಯೆ ಕಾಲು ಹಿಡ್ಕೊಳಲು ರೆಡಿ... ಕನಸಿನ ಹುಡುಗಿಯ ಕ್ವಾಲಿಟಿ ಹೇಳಿದ ನಿರ್ದೇಶಕ ತರುಣ್ ಸುಧೀರ್
ನನಗೆ ವರ್ಷಕ್ಕೆ 14 ಸಾವಿರ ರೂಪಾಯಿ ಫೀಸ್ ಬೇಕಿತ್ತು. ಮನೆಯಲ್ಲಿ ಹಣ ಕೇಳಬಾರದು ಎಂದುಕೊಂಡಿದ್ದೆ. ಅದೇ ಸಮಯಕ್ಕೆ ಚಿತ್ರದಲ್ಲಿ ಆಫರ್ ಬಂತು. ಆರಂಭದಲ್ಲಿ 3 ಲಕ್ಷ ಸಂಭಾವನೆ ಎಂದ್ರು. ಅಸಲಿಗೆ ನನಗೆ ಬೇಕಿದ್ದಿದ್ದು ವರ್ಷಕ್ಕೆ 14 ಸಾವಿರ ಮಾತ್ರ. ಆದರೆ ಇಷ್ಟು ಸಂಭಾವನೆ ಸಿಗುತ್ತದೆ ಎಂದಾಗ ಇಡೀ ಶಿಕ್ಷಣವನ್ನೇ ಮುಗಿಸಬಹುದು ಎಂದುಕೊಂಡು ಒಪ್ಪಿಕೊಂಡೆ. ಈಗ ನನಗೆ 30 ಲಕ್ಷ ಸಂಭಾವನೆ ಬರುತ್ತಿದೆ ಎಂದಿದ್ದಾರೆ. ಇದೇ ವೇಳೆ ಕನ್ನಡ ಇಂಡಸ್ಟ್ರಿಯ ಬಗ್ಗೆಯೂ ಮಾತನಾಡಿರುವ ನಟಿ, ಬೇರೆಯದ್ದಕ್ಕೆ ಹೋಲಿಸಿದರೆ ಕನ್ನಡದಲ್ಲಿ ಸಂಭಾವನೆ ಕಡಿಮೆಯೇ. ಆದರೆ ನನಗೆ ಸದ್ಯ ಚಿತ್ರವೊಂದಕ್ಕೆ 30 ಲಕ್ಷ ರೂಪಾಯಿ ಬರುತ್ತಿದೆ. ಮಾರ್ಕೆಟ್‌ಗೆ ತಕ್ಕಂತೆ ಬದಲಾಗುತ್ತದೆ ಎಂದೂ ಹೇಳಿದ್ದಾರೆ. ಸದ್ಯ ಮಲಯಾಳಂ ಚಿತ್ರರಂಗಕ್ಕೆ ಶಾನ್ವಿ ಶ್ರೀವಾಸ್ತವ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದಲ್ಲಿ 'ತ್ರಿಶೂಲಂ' ಹಾಗೂ 'ಅಮೆರಿಕಾ ಅಮೆರಿಕಾ'-2 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಉಗ್ರಂ' ಮರಾಠಿ ರೀಮೆಕ್‌ನಲ್ಲಿ ಕೂಡ ಶಾನ್ವಿ ನಟಿಸುತ್ತಿದ್ದಾರೆ.
ಇದೇ ಸಂದರ್ಶನದಲ್ಲಿ ನಟಿ, ತಮ್ಮ ಆರೋಗ್ಯದ ಸಮಸ್ಯೆಯ ಬಗ್ಗೆಯೂ ರಿವೀಲ್ ಮಾಡಿದ್ದಾರೆ. ನನಗೆ ಆರೋಗ್ಯ ಸಮಸ್ಯೆ ಕಾಡಿತ್ತು. ಅದರಿಂದ ಹಣದ ಮಹತ್ವವೂ ಗೊತ್ತಾಯಿತು. ಪ್ರತಿಯೊಬ್ಬರ ಜೀವನಕ್ಕೆ ಹಣ ಬಹಳ ಮುಖ್ಯ. ನಮಗೆ ಆರೋಗ್ಯ ಕೈಕೊಟ್ಟರೆ ಚಿಕಿತ್ಸೆಗೆ ಹಣ ಬೇಕೇಬೇಕು. ಎಲ್ಲರೂ ಹಣಕ್ಕಾಗಿಯೇ ಕೆಲಸ ಮಾಡುತ್ತೇವೆ. ಆದರೆ ಹಣವನ್ನು ಹೇಗೆ ಬಳಸಬೇಕು ಎನ್ನುವುದು ಮುಖ್ಯ. ನಾನು ನನ್ನ ಹಣದಿಂದಲೇ ಕಾಲೇಜು ಕಲಿತಿರುವ ತೃಪ್ತಿ ಇದೆ ಎಂದು ನಟಿ ಹೇಳಿದ್ದಾರೆ.
ಆ ಘಟನೆ ಬಳಿಕ ಎಂದಿಗೂ ಬಿಕಿನಿ, ತುಂಡುಡುಗೆ ತೊಡದಿರಲು ನಿರ್ಧರಿಸಿದೆ.... ಸಾಯಿಪಲ್ಲವಿ ಮಾತಿಗೆ ಶ್ಲಾಘನೆಗಳ ಮಹಾಪೂರ