ಬೆಂಗಳೂರು(ಜ.26): ಹಿರಿಯ ನಿರೂಪಕ ಸಂಜೀವ ಕುಲಕರ್ಣಿ(49) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ತಂದೆ ನಿಧನರಾಗಿರುವ ವಿಚಾರವನ್ನು ಅವರ ಪುತ್ರ ಸೌರಭ್‌ ಕುಲಕರ್ಣಿ ಫೇಸ್‌ಬುಕ್‌ ಪೇಜ್‌ನಲ್ಲಿ ತಿಳಿಸಿದ್ದಾರೆ.

ಹೃದಯ ಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಸುಮಾರು 15 ವರ್ಷಗಳಿಂದ ಸಂಜೀವ ಅವರು ಕಾರ್ಡಿಯೊಮಿಯೋಪತಿ( ಹೃದಯದ ಸ್ನಾಯುಗಳು ಅಸ್ವಸ್ಥಗೊಳ್ಳುವ ಸ್ಥಿತಿ) ಎಂಬ ಕಾಯಿಲೆಯಿಂದ ಬಳಲುತ್ತಿದ್ದರು.

ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತರಾದ KS ಅಶ್ವಥ್‌ನವರನ್ನ ಸ್ಮರಿಸುವ ಸಮಯ

ಕೆಲವು ತಿಂಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸಂಜೀವ ಕುಲಕರ್ಣಿ ಅವರ ಚಿಕಿತ್ಸೆಗಾಗಿ 45 ಲಕ್ಷಕ್ಕೂ ಹೆಚ್ಚಿನ ಅವಶ್ಯಕತೆ ಇತ್ತು. ಈ ಹಣವನ್ನು ಸಂಗ್ರಹಿಸಲಾಗುತ್ತಿತ್ತು. ಈ ನಡುವೆಎಯೇ ಚಿಕಿತ್ಸೆ ಫಲಕಾರಿಯಾಗದೆ ಸಂಜೀವ ಕುಲಕರ್ಣಿ ನಿಧನರಾಗಿದ್ದಾರೆ.

ಸಭೆ, ಕಾರ್ಯಕ್ರಮಗಳಿಗೆ ತಮ್ಮ ನಿರೂಪಣೆಯಿಂದ ಇನ್ನಷ್ಟು ಮೆರುಗು ತುಂಬುತ್ತಿದ್ದ ಸಂಜೀವ ಕುಲಕರ್ಣಿ ಅವರು ಸಮಭ್ರಮ ಸೌರಭ ಎಂಬ ಸಂಸ್ಥೆಯನ್ನೂ ಪ್ರಾರಂಭಿಸಿದ್ದರು. ನಟನಾ ಕ್ಷೇತ್ರದಲ್ಲಿಯೂ ತಮ್ಮದೇ ಛಾಪು ಮೂಡಿಸಿಕೊಂಡಿದ್ದ ಅವರು, ನಾಗಿಣಿ, ನಿಗೂಢ ರಾಥ್ರಿ, ಏಟು ಎದಿರೇಟದ ಮೊದಲಾದ ಧಾರವಾಹಿಗಳಲ್ಲಿ ನಟಿಸಿದ್ದರು. ಅವರ ಪುತ್ರ ಸೌರರ್ಬ ಅವರು ಸದ್ಯ ಪಾಪ ಪಾಂಡು ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ.