ನನಗೆ ಸಹಾಯ ಮಾಡಿದ್ದು ರಿಷಬ್ ಶೆಟ್ಟಿ ಹಾಗೂ ದರ್ಶನ್ ಮಾತ್ರ; ಮಂಡ್ಯ ರಮೇಶ್
ಆಗ ಒಬ್ಬರ ಹೊರತೂ ಬೇರೆ ಯಾರೂ ಕೂಡ ಆಗ ಸಹಾಯಕ್ಕೆ ಮುಂದೆ ಬಂದಿಲ್ಲ. ಕನ್ನಡ ಆ ಒಬ್ಬ ನಟ-ನಿರ್ದೇಶಕ ಮಾತ್ರ ನನ್ನ ಸಹಾಯಕ್ಕೆ ಬಂದ್ರು. ಅಚ್ಚರಿ ಅಂದ್ರೆ ನಾನು ಅವರ ಜೊತೆ ಯಾವ ಸಿನಿಮಾದಲ್ಲೂ ನಟಿಸಿಲ್ಲ. ಅವರೇ ನನಗೆ ಫೋನ್ ಮಾಡಿ...
ಕನ್ನಡದ ಹಿರಿಯ ನಟ ಮಂಡ್ಯ ರಮೇಶ್ (Mandya Ramesh) ಅವರು ಇತ್ತೀಚೆಗೆ ರಾಪಿಡ್ ರಶ್ಮಿ (Rapid Rashmi) ಯುಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಅದರಲ್ಲಿ ಅವರು ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡು ಮಾತನಾಡಿದ್ದಾರೆ. 'ನನಗೆ 8 ತಿಂಗಳ ಹಿಂದೆ ಭೀಕರ ಅಪಘಾತವಾಗಿತ್ತು. ಸಿನಿಮಾ ಶೂಟಿಂಗ್ ನಡೆಯುವ ವೇಳೆಯೇ ದೊಡ್ಡ ಆ್ಯಕ್ಸಿಡೆಂಟ್ ಆಯ್ತು. ಎದ್ದು ನಿಲ್ಲೋದಕ್ಕೂ ಹಲವು ತಿಂಗಳು ತೆಗೆದುಕೊಂಡೆ. ನಾನು ಬೆಡ್ ಮೇಲೆ ಇದ್ದಾಗ ನನ್ನ ಕಡೆಯವರು ಚಿತ್ರೋದ್ಯಮದ ಕೆಲವರ ಬಳಿ ಹಣದ ಸಹಾಯಕ್ಕಾಗಿ ಬೇಡಿಕೆ ಇಟ್ಟು ಕಾಲ್ ಮಾಡಿದ್ರು.
ಆಗ ಒಬ್ಬರ ಹೊರತೂ ಬೇರೆ ಯಾರೂ ಕೂಡ ಆಗ ಸಹಾಯಕ್ಕೆ ಮುಂದೆ ಬಂದಿಲ್ಲ. ಕನ್ನಡ ಆ ಒಬ್ಬ ನಟ-ನಿರ್ದೇಶಕ ಮಾತ್ರ ನನ್ನ ಸಹಾಯಕ್ಕೆ ಬಂದ್ರು. ಅಚ್ಚರಿ ಅಂದ್ರೆ ನಾನು ಅವರ ಜೊತೆ ಯಾವ ಸಿನಿಮಾದಲ್ಲೂ ನಟಿಸಿಲ್ಲ. ಅವರೇ ನನಗೆ ಫೋನ್ ಮಾಡಿ 'ಭೀಕರ ಅಪಘಾತದಲ್ಲಿ ಬದುಕುಳಿದಿದ್ದೆ ದೊಡ್ಡದು, ಕಳೆದ ಒಂದು ತಿಂಗಳಿಂದ ಹಾಸಿಗೆ ಹಿಡಿದಿದ್ದೀರಾ, ಜೀವನ ಹೇಗೆ ನಡಿತಿದೆ ಅಣ್ಣಾ ಅಂತ ಮಾತಾಡಿ, ಕಾಲ್ ಕಟ್ ಮಾಡಿದ್ರು. ಫೋನ್ ಕಟ್ ಆದ ತಕ್ಷಣ ನನ್ನ ಅಕೌಂಟ್ಗೆ ಹಣ ಬಂದಿತ್ತು. ಆ ನಟ ಬೇರೆ ಯಾರು ಅಲ್ಲ ನಟ ರಿಷಬ್ ಶೆಟ್ಟಿ (Rishab Shetty) ಎಂದು ಮಂಡ್ಯ ರಮೇಶ್ ಹೇಳಿದ್ದಾರೆ.
ಐದು ವರ್ಷಕ್ಕೇ ಇವ್ಳ ಮೇಲೆ ಕಣ್ಣು ಹಾಕಿದೀಯಲ್ಲ ನೀನು; ಅಂಬಿ ಡೈಲಾಗ್‌ಗೆ ಅಪ್ಪು ಬೆಪ್ಪು!
ಇನ್ನೂ ಅನೇಕ ಸಂಗತಿಗಳನ್ನು ನಟ ಮಂಡ್ಯ ರಮೇಶ್ ಅವರು ಹಂಚಿಕೊಂಡಿದ್ದಾರೆ. 'ಈ ಹಿಂದೆ ರಂಗಮಂದಿರ ನಿರ್ಮಿಸುವಾಗ ಸಮಯದಲ್ಲಿ ಜನರೇಟರ್ ಅಳವಡಿಸಲು ನನ್ನ ಬಳಿ ಹಣವಿಲ್ಲದೇ ಒದ್ದಾಡ್ತಿದ್ದೆ ಆಗ ಜನರೇಟರ್ ತೆಗೆದುಕೊಳ್ಳಿ ಅಂತ ನಟ ದರ್ಶನ್ (Darshan) ನನ್ನ ಜೇಬಿಗೆ ಹಣ ಇಟ್ಟು ಹೋಗಿದ್ದರು . ಹೀಗೆ ಕೆಲವರು ಮಾತ್ರ ಕಷ್ಟದ ಸಮಯದಲ್ಲಿ ಸಹಾಯ ಮಾಡಿದ್ದಾರೆ' ಎಂದು ಹಿರಿಯ ನಟ ರಮೇಶ್ ನೆನಪು ಮಾಡಿಕೊಂಡಿದ್ದಾರೆ.
ಇನ್ನು ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಮಾತಾಡಿರುವ ಮಂಡ್ಯ ರಮೇಶ್, 'ಯಶ್ ಗಜಕೇಸರಿ ಸಿನಿಮಾ ಮಾಡುವಾಗ ನಾನು ಅವರ ಜೊತೆ ನಟಿಸಿದ್ದೇನೆ. ಆಗ ಈ ನಟ ಮುಂದೆ 'ಕೆಜಿಎಫ್' ಅಂತಹ ಸಿನಿಮಾ ಮಾಡ್ತಾರೆ, ನ್ಯಾಷನಲ್ ಸ್ಟಾರ್ ಆಗ್ತಾರೆ ಎನ್ನುವ ಯಾವ ಕಲ್ಪನೆಯೂ ನನಗೆ ಇರಲಿಲ್ಲ' ರಂಗಭೂಮಿ ಹಿನ್ನೆಲೆಯಿಂದ ಬಂದ ಹುಡುಗ, ಒಳ್ಳೆಯ ನಟ ಯಶ್. ಶ್ರದ್ಧೆ ಹಾಗೂ ಶ್ರಮ ಅವರನ್ನು ಇಲ್ಲಿವರೆಗೂ ತಂದು ನಿಲ್ಲಿಸದೆ, ಅದೇ ಅವರನ್ನು ಕಾಪಾಡಿದೆ. ' ಎಂದಿದ್ದಾರೆ.
ಅರ್ಧ ದೇಹ ಬಿಟ್ಕುಕೊಳ್ಳುವ ಹುಡ್ಗೀರಿಗೆ ಅಣ್ಣಾವ್ರು ಹೇಳಿದ ಕಿವಿ ಮಾತಿದು!
ನಟ ಯಶ್ ಅವರಲ್ಲಿ ಸರಳತೆ ಇದೆ. ಸೂಪರ್ ಸ್ಟಾರ್ ಎನ್ನುವ ಗತ್ತಿಲ್ಲ. ಯಾವತ್ತೂ ಸಿಂಪಲ್ ಆಗಿ ಇರಲು ಇಷ್ಟಪಡುವವರು ಯಶ್. ಅಂತ ನಟ ರಮೇಶ್ ಹೇಳಿದ್ದಾರೆ. ಮುಂದುವರಿದು 'ಯಶ್ ಅವರ ಕೋಟೆ ಟಚ್ ಮಾಡಲು ಆಗಲ್ಲ. ಆದ್ರೆ ಒಳಗೆ ಹೋದ್ರೆ ನಿಮ್ಮನ್ನು ಅವರು ತಮ್ಮ ಹೃದಯದ ಕೋಟೆಯಲ್ಲಿ ಗಟ್ಟಿಯಾಗಿ ಬಂಧಿಸಿಕೊಳ್ಳುವಂತಹ ವ್ಯಕ್ತಿ ನಟ ಯಶ್' ಎಂದು ರಾಕಿಂಗ್ ಸ್ಟಾರ್ ಬಗ್ಗೆ ಮಂಡ್ಯ ರಮೇಶ್ ಮೆಚ್ಚುಗೆಯ ಮಾತು ಹೇಳಿದ್ದಾರೆ.