ಕಿಚ್ಚ ಸುದೀಪ್ ಪುತ್ರಿ ಸಾನ್ವಿ, ಓದು, ಹಾಡು, ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಬಾಲ್ಯದಲ್ಲಿ ಯಶ್ ಅವರೊಂದಿಗೆ ಆಟವಾಡಿದ್ದು, ಅವರು ಜನರನ್ನು ಹೇಗೆ ಆಕರ್ಷಿಸಬೇಕೆಂದು ತಿಳಿದಿದೆ ಎಂದು ಹೇಳಿದ್ದಾರೆ. ಯಶ್ ಅವರ ಮೇಲೆ ಕ್ರಶ್ ಇಲ್ಲವೆಂದಿದ್ದು, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಅಲ್ಲು ಅರ್ಜುನ್ ಅವರ ಅಭಿಮಾನಿ ಎಂದು ತಿಳಿಸಿದ್ದಾರೆ. ಅಲ್ಲು ಅರ್ಜುನ್ ಅವರನ್ನು ತಮ್ಮ ಕೆಲಸದಿಂದ ಗುರುತಿಸಿಕೊಂಡು ಭೇಟಿಯಾಗುವ ಆಸೆ ವ್ಯಕ್ತಪಡಿಸಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪುತ್ರಿ ಸದ್ಯ ಸದಾ ಸುದ್ದಿಲ್ಲಿ ಇರುವ ಸ್ಟಾರ್ ಕಿಡ್. ಓದುವುದರ ಜೊತೆಗೆ ಹಾಡುವುದು ಮತ್ತು ಚಿತ್ರ ಬಿಡಿಸುವುದು ಅಂದ್ರೆ ಸಾನುಗೆ ಸಿಕ್ಕಾಪಟ್ಟೆ ಇಷ್ಟ. ಇತ್ತೀಚಿಗೆ ಸರಿಗಮಪ ಕಾರ್ಯಕ್ರಮಕ್ಕೆ ಆಗಮಿಸಿ ತಂದೆ ಸರ್ಪ್ರೈಸ್ ಕೊಟ್ಟರು, ಅದಾದ ಮೇಲೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ತಂದೆಗದೊಂದು ಹಾಡು ಹಾಡಿದ್ದರು. ಅಷ್ಟೇ ಅಲ್ಲ ಅತ್ತೆ ಮಗನ ಚಿತ್ರಕ್ಕೆ ಸಾನು ಧ್ವನಿ ನೀಡಿದ್ದಾರೆ. ಒಂದಲ್ಲ ಒಂದು ರೀತಿಯಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಸಾನ್ವಿ ಸಂದರ್ಶನದಲ್ಲಿ ನಟ ಯಶ್ ಬಗ್ಗೆ ಮಾತನಾಡಿದ್ದಾರೆ.
ಕೆಜಿಎಫ್ ಕಿಂಗ್ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಹೇಳಿ ಎಂದು ಪ್ರಶ್ನೆ ಮಾಡಲಾಗಿದೆ. 'ಹಲವು ಹಲವು ವರ್ಷಗಳಿಂದ ರಾಕಿಂಗ್ ಸ್ಟಾರ್ ಯಶ್ ಗೊತ್ತು...ನನ್ನ ಬಾಲ್ಯದಲ್ಲಿ ಅವರೊಟ್ಟಿಗೆ ಆಟವಾಡುತ್ತಿದ್ದೆ. ಆಗ ತಂದೆ ಆಯೋಜಿಸುತ್ತಿದ್ದ ಬರ್ತಡೇ ಪಾರ್ಟಿಗಳಿಗೆ ಬರುತ್ತಿದ್ದರು. ತೆರೆ ಮೇಲೆ ಚೆನ್ನಾಗಿ ಕಾಣಿಸಿಕೊಳ್ಳಲು ಹಾಗೂ ಜನರಿಗೆ ಇಷ್ಟವಾಗಲು ಏನು ಮಾಡಬೇಕು ಎಂದು ಯಶ್‌ಗೆ ಚೆನ್ನಾಗಿ ಗೊತ್ತಿದೆ. ಈಗ ಕೆಜಿಎಫ್ ರಿಲೀಸ್‌ಗೂ ಈಗ ಚಿತ್ರೀಕರಣವಾಗುತ್ತಿರುವ ಸಿನಿಮಾ ರಿಲೀಸ್ ಆಗಲು ತುಂಬಾ ಸಮಯ ಇದೆ ಆದರೂ ಜನರೊಟ್ಟಿಗೆ ಕನೆಕ್ಟ್ ಆಗಲು ಸದಾ ಸುದ್ದಿಯಲ್ಲಿ ಇರುವ ಏನ್ ಮಾಡಬೇಕು ಎಂದು ಅವರಿಗೆ ಗೊತ್ತಿದೆ. ಅವರು ಅದ್ಭುತ ಕೆಲಸಗಳನ್ನು ಮಾಡುತ್ತಿದ್ದಾರೆ' ಎಂದು ಸಾನ್ವಿ ಹೇಳಿದ್ದಾರೆ.
ಅಪ್ಪು ಪಕ್ಕದಲ್ಲಿ ಆಕ್ಟ್ ಆಂಡ್ ಡ್ಯಾನ್ಸ್ ಮಾಡುವುದಕ್ಕೆ ಸಖತ್ ಭಯ ಆಗುತ್ತಿತ್ತು: ರಕ್ಷಿತಾ ಪ್ರೇಮ್
ಸಿಕ್ಕಾಪಟ್ಟೆ ಫ್ಯಾನ್ ಬೇಸ್ ಹೊಂದಿರುವ ಯಶ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಯಾರಿಗೆ ಕ್ರಶ್ ಇಲ್ಲ ಹೇಳಿ? ಯಶ್ ಮೇಲೆ ಯಾವತ್ತಾದರೂ ಕ್ರಶ್ ಆಗಿದ್ಯಾ ಎಂದು ಪ್ರಶ್ನಿಸಿದ್ದಕ್ಕೆ 'ತಂದೆ ಸ್ನೇಹಿತರ ಮೇಲೆ ಕ್ರಶ್ ಇರಲು ಸಾಧ್ಯವೇ? ಎಂಥಾ ಕ್ರೇಜಿ ಪ್ರಶ್ನೆ ಕೇಳುತ್ತಿದ್ದೀರಾ? ನನಗೆ ಕ್ರಶ್ ಇರುವುದು ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಅಲ್ಲು ಅರ್ಜುನ್ ಮೇಲೆ ಅಷ್ಟೇ' ಎಂದಿದ್ದಾರೆ ಸಾನ್ವಿ. ಎಷ್ಟರ ಮಟ್ಟಕ್ಕೆ ಅಲ್ಲು ಅಭಿಮಾನಿ ಅಂದ್ರೆ ಪುಷ್ಪ 2 ಸಿನಿಮಾ ರಿಲೀಸ್ ಅದಾಗ ಅವರ ಮುಖ ಇರುವ ಟೀ-ಶರ್ಟ್ ಧರಿಸಿ ವೇಗಾ ಸಿಟಿ ಮಾಲ್‌ನಲ್ಲಿ ಸಿನಿಮಾ ನೋಡಲು ಹೋಗಿದ್ದರು. ತಂದೆ ಮೂಲಕ ಅವರನ್ನು ಭೇಟಿ ಆಗಬಾರದು ನಾನು ಮಾಡಿದ ಕೆಲಸದಿಂದ ಗುರುತಿಸಿಕೊಂಡು ಪರಿಚಯ ಮಾಡಿಕೊಳ್ಳಬೇಕು ಎಂದು ಸಾನ್ವಿ ಹೇಳಿದ್ದಾರೆ.
ಏನ್ ಮೇಡಂ ನೀವು ಇಷ್ಟೋಂದು ಸಿಂಪಲ್ಲಾಗಿ ಬರ್ತೀರಾ ಸ್ವಲ್ಪ ಸ್ಟೈಲ್ ಮಾಡಿ; ಸೋನಲ್ ಲುಕ್ ಮೆಚ್ಚಿದ ಜನರು

